ಕರ್ನಾಟಕ

karnataka

ವಿಜೃಂಭಣೆಯಿಂದ ನಡೆದ ಶ್ರೀಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

By

Published : Feb 27, 2021, 8:57 PM IST

ರಥೋತ್ಸವದ ಅಂಗವಾಗಿ ಫೆಬ್ರವರಿ 28ರಂದು ಹಗಲು ಪರಿಷೆ ನಡೆಯಲಿದ್ದು, ಡಾ.ರಾಜಕುಮಾರ್ ಕಲಾ ಭವನದಲ್ಲಿ ಸಂಜಯನಗರದ ಶ್ರೀ ಅಭಯ ಆಂಜನೇಯ ಸ್ವಾಮಿ ಕೃಪಾ ಪೋಷಿತ ಯುವಕರ ನಾಟಕ ಮಂಡಲಿವತಿಯಿಂದ ‘ಶ್ರೀ ಕೃಷ್ಣ ಸಂಧಾನ’ ಅಥವಾ ‘ದುರ್ಯೋಧನ ಗರ್ವಭಂಗ’ ಎಂಬ ಪೌರಾಣಿಕ ನಾಟಕ ಆಯೋಜಿಸಲಾಗಿದೆ.

Sri Prasanna venkataramanaswamy
ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

ದೊಡ್ಡಬಳ್ಳಾಪುರ (ಬೆಂ.ಗ್ರಾ): ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಪ್ರಸನ್ನ ಲಕ್ಷೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವವು ನಗರದ ತೇರಿನ ಬೀದಿಯಲ್ಲಿ ವಿಜೃಂಭಣೆಯಿಂದ ನಡೆಯಿತು. ರಾಜ್ಯದ ನಾನಾಕಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ರಥಕ್ಕೆ ಹೂ-ಹಣ್ಣು ಅರ್ಪಿಸಿ ಪ್ರಾರ್ಥಿಸಿದರು.

ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ, ಕಲ್ಯಾಣೋತ್ಸವ, ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಅನ್ನಸಂತರ್ಪಣಾ ಸಮಿತಿ ವತಿಯಿಂದ ಪ್ರಸಾದ ವಿತರಣೆ, ಶ್ರೀ ಶ್ರೀಕಂಠೇಶ್ವರ ಸ್ವಾಮಿ ಭಕ್ತ ಮಂಡಳಿಯಿಂದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪನವರ ಸ್ಮರಣಾರ್ಥ ನಗರದ ದೇವಾಂಗ ಮಂಡಲಿಯಲ್ಲಿ ಅರವಂಟಿಕೆ, ಬಿಸಲಹಳ್ಳಿ ಚಿಕ್ಕಚೌಡಪ್ಪನವರ ಭಜನಾ ಮಂಡಳಿ ಸೇರಿದಂತೆ ವಿವಿಧ ಮಂಡಳಿಗಳಿಂದ ಅರವಂಟಿಕೆ ಏರ್ಪಡಿಸಲಾಗಿತ್ತು.

ವಿಜೃಂಭಣೆಯಿಂದ ನಡೆದ ಶ್ರೀಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

ರಥೋತ್ಸವದ ವೇಳೆ ತೀವ್ರವಾದ ಜನಜಂಗುಳಿ ಏರ್ಪಟ್ಟಿದ್ದು. ಮನೆ, ಅಂಗಡಿ ಮುಂಗಟ್ಟುಗಳ ಮೇಲೆ ನಿಂತು ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡರು. ರಥೋತ್ಸವದ ಅಂಗವಾಗಿ ಫೆಬ್ರವರಿ 28ರಂದು ಹಗಲು ಪರಿಷೆ ನಡೆಯಲಿದ್ದು, ಡಾ. ರಾಜಕುಮಾರ್ ಕಲಾ ಭವನದಲ್ಲಿ ಸಂಜಯನಗರದ ಶ್ರೀ ಅಭಯ ಆಂಜನೇಯ ಸ್ವಾಮಿ ಕೃಪಾ ಪೋಷಿತ ಯುವಕರ ನಾಟಕ ಮಂಡಲಿ ವತಿಯಿಂದ ‘ಶ್ರೀ ಕೃಷ್ಣ ಸಂಧಾನ’ ಅಥವಾ ‘ದುರ್ಯೋಧನ ಗರ್ವಭಂಗ’ ಎಂಬ ಪೌರಾಣಿಕ ನಾಟಕ ಆಯೋಜಿಸಲಾಗಿದೆ.

ಈ ಬ್ರಹ್ಮರಥೋತ್ಸವದಲ್ಲಿ ಶಾಸಕ ಟಿ. ವೆಂಕಟರಮಣಯ್ಯ, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಸೀಲ್ದಾರ್ ಟಿ.ಎಸ್. ಶಿವರಾಜ, ತಾಪಂ ಅಧ್ಯಕ್ಷ ನಾರಾಯಣಗೌಡ, ಡಿವೈಎಸ್ಪಿ ಟಿ. ರಂಗಪ್ಪ, ಸರ್ಕಲ್ ಇನ್​ಸ್ಪೆಕ್ಟರ್ ನವೀನ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಇದನ್ನೂ ಓದಿ:ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಸಮಾರೋಪ : ರಾಜ್ಯದಲ್ಲಿ ₹150 ಕೋಟಿ ಸಂಗ್ರಹ

ABOUT THE AUTHOR

...view details