ಕರ್ನಾಟಕ

karnataka

ಹೊಸಕೋಟೆ ನೂತನ ಸಂಚಾರಿ ಪೊಲೀಸ್ ಠಾಣೆಗೆ ಚಾಲನೆ

By

Published : Jan 14, 2023, 2:31 PM IST

traffic police station

ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಹೊಸಕೋಟೆ ನೂತನ ಸಂಚಾರಿ ಪೊಲೀಸ್​ ಠಾಣೆ ಕಟ್ಟಡವನ್ನು ಉದ್ಘಾಟಿಸಿದರು.

ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆ ಉದ್ಘಾಟನೆ

ಹೊಸಕೋಟೆ: ಕೊನೆಗೂ ಹೊಸಕೋಟೆ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ದೊರೆಯುವ ಕಾಲ ಸಹ್ನಿತವಾಗಿದೆ. ಇಂದು ಸಂಚಾರಿ ಪೊಲೀಸ್ ಠಾಣೆಗೆ ಚಾಲನೆ ದೊರೆತಿದೆ. ಬೆಂಗಳೂರು ಗ್ರಾಮಾಂತರ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಹೊಸಕೋಟೆ ನೂತನ ಪೊಲೀಸ್​ ಠಾಣೆಯನ್ನು ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.

ಅಂದಹಾಗೆ, 2020 ರಿಂದಲ್ಲೂ ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಇತ್ತು. 2022ರಲ್ಲಿ ಟ್ರಾಫಿಕ್ ಠಾಣೆಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದರೂ ಕೂಡ ಅಂದಿನಿಂದ ನಿರ್ಮಾಣ ಕಾರ್ಯ ಆ್ಯಕ್ಟಿವ್ ಆಗಲಿಲ್ಲ. ಜತೆಗೆ ಹೊಸಕೋಟೆಯಲ್ಲಿ ಹೆದ್ದಾರಿಗಳು ಹಾದು ಹೋಗಲಿದ್ದು, ಅನೇಕ ಸಂದರ್ಭಗಳಲ್ಲಿ ಅಪಘಾತಗಳಿಗೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರೇ ತಲೆ ಕೆಡಿಸಿಕೊಳ್ಳಬೇಕಿತ್ತು. ಇದೀಗ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಡಿವೈಎಸ್​ಪಿ ಕಚೇರಿಯ ಕೆಳಗೆ ಇರುವ ಸಂಚಾರಿ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ್ದಾರೆ.

ಇದನ್ನೂ ಓದಿ:ಕೆ.ಆರ್​.ಪುರ ಪೊಲೀಸ್​ ಠಾಣೆ ಉದ್ಘಾಟನೆ: ಸಿಎಂ ಅನುಪಸ್ಥಿತಿಯಲ್ಲಿ ಭೈರತಿ ಬಸವರಾಜ್​​​​ ಚಾಲನೆ

ಈ ವೇಳೆ, ಮಾತನಾಡಿದ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, 'ಹೊಸಕೋಟೆ ಪಟ್ಟಣ ಬೆಂಗಳೂರಿಗೆ ಹತ್ತಿರವಿರುವುದರಿಂದ ಇಲ್ಲಿ ವಾಹನ ದಟ್ಟನೆ ಅಧಿಕವಾಗುತ್ತಿತ್ತು. ಮತ್ತು ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿತ್ತು. ಹೀಗಾಗಿ ಸಂಚಾರ ಠಾಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವು. ಇಂದು ನೂತನ ಠಾಣೆ ಉದ್ಘಾಟನೆಗೊಂಡಿದೆ. ಪಿಎಸ್ಐ ಸೇರಿ ಅಕ್ಕ ಪಕ್ಕದ ಠಾನೆಗಳ 28 ಸಿಬ್ಬಂದಿಯನ್ನು ಟ್ರಾಫಿಕ್​ ನಿರ್ವಹಣೆಗೆ ನೀಡಲಾಗಿದೆ. ತಾಲೂಕಿನಲ್ಲಿ ಅತಿಹೆಚ್ಚು ಸಂಚಾರವಿರುವ ರಸ್ತೆಗಳನ್ನ ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಆವಲಹಳ್ಳಿಯಿಂದ ಕೋಲಾರ ರಸ್ತೆ, ಸೂಲಿಬೆಲೆ ರಸ್ತೆಯ ಕಾಟೇರಮ್ಮ ದೇವಾಲಯದಿಂದ ಪೆತ್ತನಹಳ್ಳಿ, ವೈಟ್ ಫೀಲ್ಡ್ ರಸ್ತೆ ಸಪಲ್, ಬೂದಿಗೆರೆ ಕ್ರಾಸ್ ಏರ್ಪೋಟ್ ರಸ್ತೆ, ಚನ್ನರಾಯಪಟ್ಟಣ ಪೊಲೀಸ್ ಠಾಣೆ ಗಡಿ, ಮಾಲೂರು ರಸ್ತೆ, ಕಟ್ಟಿಗೇನಹಳ್ಳಿ, ಚಿಂತಾಮಣಿ ರಸ್ತೆಯ ಹೆಚ್ ಕ್ರಾಸ್ ಗಡಿಭಾಗದವರೆಗೂ ವ್ಯಾಪ್ತಿಯನ್ನ ನಿಗದಿಪಡಿಸಲಾಗಿದೆ. ತಾಲೂಕಿನಲ್ಲಿ ಸಂಚಾರ ದಟ್ಟಣೆ, ಅಪಘಾತ ರಹಿತ ಸುಗಮ ಸಂಚಾರಕ್ಕೆ ಕ್ರಮ ವಹಿಸಲಾಗವುದು' ಎಂದು ತಿಳಿಸಿದರು.

ಇದನ್ನೂ ಓದಿ:ಸುಸಜ್ಜಿತ ಗೋವಿಂದರಾಜ ನಗರ‌ ಪೊಲೀಸ್ ಠಾಣೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಚಿಕ್ಕೋಡಿಯಲ್ಲಿ ನೂತನ ಪೊಲೀಸ್ ಠಾಣೆ ಉದ್ಘಾಟನೆ: ಇದೇ ತಿಂಗಳ ಕಳೆದ 8 ರಂದು ಚಿಕ್ಕೋಡಿ ಪಟ್ಟಣದಲ್ಲಿ ನೂತನ ಪೊಲೀಸ್ ಠಾಣೆಯನ್ನು ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಉದ್ಘಾಟನೆ ಮಾಡಿದ್ದರು. ವೇಳೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಸಚಿವ ಸ್ಥಾನಕ್ಕಿಂತ ನನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮುಖ್ಯ. ನನಗೆ ಯಾವುದೇ ಸಚಿವ ಸ್ಥಾನ ಮಾನ ಬೇಡ, ಇನ್ನೇನು ಮೂರು ತಿಂಗಳು ಮಾತ್ರ ಉಳಿದಿದೆ. ಕರಗಾಂವ​ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದೇ ಪ್ರಮುಖವಾಗಿದೆ. ಮುಂದಿನ ಬಾರಿ ನಮ್ಮದೇ ಪಕ್ಷ ಅಧಿಕಾರಕ್ಕೆ ಬಂದ್ರೆ ನೋಡೋಣ ಎಂದು ಹೇಳಿದ್ದರು.

ಇದನ್ನೂ ಓದಿ:ನವೀಕರಣಗೊಂಡಿದ್ದ ಸಂಚಾರ ಪೊಲೀಸ್ ಠಾಣೆ ಉದ್ಘಾಟಿಸಿದ ಆಯುಕ್ತರು

ABOUT THE AUTHOR

...view details