ಕರ್ನಾಟಕ

karnataka

1st Test, Day 3: 171 ರನ್​ ಗಳಿಸಿ ಔಟಾದ ಜೈಸ್ವಾಲ್​, ಅರ್ಧ ಶತಕ ಪೂರೈಸಿದ ಕೊಹ್ಲಿ

By

Published : Jul 14, 2023, 9:01 PM IST

ವೆಸ್ಟ್​ ಇಂಡೀಸ್​ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದೆ. ಮೂರನೇ ದಿನದಾಟ ಆರಂಭಗೊಂಡಿದ್ದು, 171 ರನ್​ ಗಳಿಸಿ ಜೈಸ್ವಾಲ್​ ಔಟಾಗಿದ್ದಾರೆ.

West Indies vs India Test series updates  West Indies vs India Test live  West Indies vs India Test live blog  West Indies vs India Test match report  171 ರನ್​ ಗಳಿಸಿ ಔಟಾದ ಜೈಸ್ವಾಲ್  ಅರ್ಧ ಶತಕ ಪೂರೈಸಿದ ಕೊಹ್ಲಿ  ವೆಸ್ಟ್​ ಇಂಡೀಸ್​ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್  ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಹಿಡಿತ  ಮೂರನೇ ದಿನದಾಟ ಆರಂಭ  ಆರಂಭಿಕ ಯುವ ಆಟಗಾರ ಯಶಸ್ವಿ ಜೈಸ್ವಾಲ್  ಏಷ್ಯಾದ ಹೊರಗೆ ಅತ್ಯಧಿಕ ಜೊತೆಯಾಟದ ದಾಖಲೆ  ವಿರಾಮದ ಬಳಿಕ ಬಿರುಸಿನ ಬ್ಯಾಟಿಂಗ್​
1st Test, Day 3: 171 ರನ್​ ಗಳಿಸಿ ಔಟಾದ ಜೈಸ್ವಾಲ್​, ಅರ್ಧ ಶತಕ ಪೂರೈಸಿದ ಕೊಹ್ಲಿ

ರೋಸೋ (ಡೊಮಿನಿಕಾ):ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹಿಡಿತ ಸಾಧಿಸಿದೆ. ಆರಂಭಿಕ ಯುವ ಆಟಗಾರ ಯಶಸ್ವಿ ಜೈಸ್ವಾಲ್ 171 ರನ್​ (387 ಎಸೆತಗಳಲ್ಲಿ 16 ಬೌಂಡರಿ, ಒಂದು ಸಿಕ್ಸ್​) ಕಲೆ ಹಾಕಿ ಔಟಾಗಿದ್ದಾರೆ ಮತ್ತು ವಿರಾಟ್​ ಕೊಹ್ಲಿ ಅರ್ಧ ಶತಕ ಪೂರೈಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಇನ್ನು ರೋಹಿತ್ ಶರ್ಮಾ (103; 221 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್) ಮೊದಲ ಇನಿಂಗ್ಸ್‌ನಲ್ಲಿ ದಾಖಲೆಯ ಜೊತೆಯಾಟವಾಡಿದರು. ಆರಂಭಿಕ ಜೋಡಿ 229 ರನ್​ಗಳ ಜೊತೆಯಾಟವಾಡಿ ಏಷ್ಯಾದ ಹೊರಗೆ ಅತ್ಯಧಿಕ ಜೊತೆಯಾಟದ ದಾಖಲೆ ಬರೆದಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಎರಡು ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತ್ತು. ಯಶಸ್ವಿ ಮತ್ತು ವಿರಾಟ್ ಕೊಹ್ಲಿ (36) ಮೂರನೇ ದಿನದ ಆಟಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದರು.

ಮೂರನೇ ದಿನದ ಪಂದ್ಯ ಆರಂಭವಾದ ಕೆಲ ಸಮಯದ ಬಳಿಕ ಜೈಸ್ವಾಲ್​ 171 ರನ್​ಗಳನ್ನು ಕಲೆ ಹಾಕಿ ಔಟಾದರು. ಬಳಿಕ ಬಂದ ಅಜಿಂಕ್ಯಾ ರಹಾನೆ ಸಹ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೇ 3 ರನ್​ ಗಳಿಸಿ ಪೆವಿಲಿಯನ್​ ಹಾದಿ ಹಿಡಿದರು. ಅರ್ಧ ಶತಕ ಗಳಿಸಿರುವ ವಿರಾಟ್​ ಕೊಹ್ಲಿ ಟೆಸ್ಟ್​ನಲ್ಲಿ 8,500 ರನ್​ಗಳನ್ನು ಕಲೆ ಹಾಕಿದ್ದಾರೆ. ಸದ್ಯ ವಿರಾಟ್​ಗೆ ರವೀಂದ್ರ ಜಡೇಜಾ ಸಾಥ್​ ನೀಡಿದ್ದಾರೆ.

ಮೊದಲ ದಿನ ಕೊಂಚ ಬಿರುಸಿನ ಬ್ಯಾಟಿಂಗ್​ ಮಾಡಿದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಎರಡನೇ ದಿನ ಕೆರಿಬಿಯನ್ ಬೌಲರ್‌ಗಳು ಬಿಗಿ ಬೌಲಿಂಗ್ ಮಾಡಿದ್ದರಿಂದ ನಿಧಾನಗತಿಯಲ್ಲಿ ರಕ್ಷಣಾತ್ಮಕ ಆಟವನ್ನಾಡಿದರು. ಸಿಂಗಲ್ಸ್‌ನೊಂದಿಗೆ ಸ್ಟ್ರೈಕ್​ರೋಟೆಟ್​ ಮಾಡುತ್ತ ಅವಕಾಶ ಸಿಕ್ಕಾಗ ಬೌಂಡರಿಗಳನ್ನು ಬಾರಿಸುತ್ತ ತಂಡದ ಸ್ಕೋರ್​100ರ ಗಡಿ ದಾಟಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 104 ಎಸೆತಗಳಲ್ಲಿ ಅಲ್ಜಾರಿ ಜೋಸೆಫ್ ಬೌಲಿಂಗ್‌ನಲ್ಲಿ ಪುಲ್ ಶಾಟ್‌ನೊಂದಿಗೆ ಅರ್ಧಶತಕ ಪೂರೈಸಿದರು. ಬಳಿಕ ರೋಹಿತ್ ಕೂಡ ಜೋಸೆಫ್ ಬೌಲಿಂಗ್‌ನಲ್ಲಿ ತಮ್ಮ ಅರ್ಧಶತಕ ಪೂರ್ಣಗೊಳಿಸಿದರು. ಭೋಜನ ವಿರಾಮದ ವೇಳೆಗೆ ಭಾರತ ವಿಕೆಟ್​ ನಷ್ಟವಿಲ್ಲದೇ 146/0 ಕಲೆ ಹಾಕಿತು.

ವಿರಾಮದ ಬಳಿಕ ಬಿರುಸಿನ ಬ್ಯಾಟಿಂಗ್​ ಮಾಡಿದ ಜೈಸ್ವಾಲ್ ಬೌಂಡರಿಗಳೊಂದಿಗೆ 215 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ನಂತರ, ರೋಹಿತ್ 220 ಎಸೆತಗಳಲ್ಲಿ ಹತ್ತನೇ ಟೆಸ್ಟ್ ಶತಕವನ್ನು ಪೂರೈಸಿ, ಅಥನಾಜೆ ಎಸೆತದಲ್ಲಿ ಸಿಲ್ವಾಗೆ ಕ್ಯಾಚಿತ್ತು ಪೆವಿಲಿಯನ್ ತಲುಪಿದರು. ರೋಹಿತ್​ ನಿರ್ಗಮನದ ಬಳಿಕ ಕ್ರೀಸ್​ಗೆ ಬಂದ ಶುಭಮನ್ ಗಿಲ್ (6) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಟೀ ವಿರಾಮದ ವೇಳೆಗೆ ಭಾರತ 2 ವಿಕೆಟ್​ ನಷ್ಟಕ್ಕೆ 245 ರನ್​ ಕಲೆಹಾಕಿತು. ಬಳಿಕ ಕ್ರೀಸ್​ಗೆ ಬಂದ ವಿರಾಟ್ ಕೊಹ್ಲಿ ಜತೆ ಯಶಸ್ವಿ ಇನಿಂಗ್ಸ್ ಮುಂದುವರಿಸಿದರು. ಇಬ್ಬರೂ ಸಮಯೋಚಿತ ಪ್ರದರ್ಶನದೊಂದಿಗೆ ತಂಡದ ಸ್ಕೋರನ್ನು 300ಕ್ಕೆ ಕೊಂಡೊಯ್ದರು. ಕೊನೆಯ ಅವಧಿಯಲ್ಲಿ ಈ ಜೋಡಿ 67 ರನ್​ ಗಳಿಸಿತ್ತು. ಈ ಮೂಲಕ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್​ ನಷ್ಟಕ್ಕೆ 312ರನ್​ಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿತ್ತು.

ಓದಿ:ಬಿಸಿಸಿಐ ಆದಾಯದ ಪಾಲು ಶೇಕಡಾ 72ರಷ್ಟು ಜಿಗಿತ..

ABOUT THE AUTHOR

...view details