ETV Bharat / sports

ಬಿಸಿಸಿಐ ಆದಾಯದ ಪಾಲು ಶೇಕಡಾ 72ರಷ್ಟು ಜಿಗಿತ..

author img

By

Published : Jul 14, 2023, 6:56 PM IST

ಐಸಿಸಿಯ ಆದಾಯದಿಂದ ವಿಶ್ವ ಆಡಳಿತ ಮಂಡಳಿ ಕಾರ್ಯತಂತ್ರದ ನಿಧಿಗೆ ಗಣನೀಯ ಮೊತ್ತ ವಿನಿಯೋಗಿಸುವುದಾಗಿ ಬಿಸಿಸಿಐ ಹೇಳಿದೆ. ಏಕೆಂದರೆ, ಈ ನಿಧಿಯನ್ನು ಟೆಸ್ಟ್ ಕ್ರಿಕೆಟ್​ ರಕ್ಷಿಸಲು ಹಾಗೂ ಮಹಿಳೆಯರ ಕ್ರಿಕೆಟ್​ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ.

bcci secretary jay shah
ಬಿಸಿಸಿಐ ಆದಾಯದ ಪಾಲು ಶೇಕಡಾ 72ರಷ್ಟು ಜಿಗಿತ..

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಆದಾಯದಿಂದ ಆಟದ ಅಭಿವೃದ್ಧಿಗಾಗಿ ವಿಶ್ವ ಆಡಳಿತ ಮಂಡಳಿಯ ಕಾರ್ಯತಂತ್ರದ ನಿಧಿಗೆ ಸಾಕಷ್ಟು ಮೊತ್ತವನ್ನು ಮೀಸಲಿಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿಪಾದಿಸಿದೆ.

ಐಸಿಸಿ ವಾರ್ಷಿಕ ಮಂಡಳಿಯ ಸಭೆ: 2024-27ರಲ್ಲಿ ವಾರ್ಷಿಕ ಆದಾಯದಿಂದ 230 ಮಿಲಿಯನ್‌ ಡಾಲರ್​ನ ದೊಡ್ಡ ಪಾಲನ್ನು ಅನುಮೋದಿಸಿದ ನಂತರ, ಬಿಸಿಸಿಐ ಇತ್ತೀಚಿನ ಐಸಿಸಿ ವಾರ್ಷಿಕ ಮಂಡಳಿಯ ಸಭೆಯಲ್ಲಿ ಟೆಸ್ಟ್ ಕ್ರಿಕೆಟ್ ಅನ್ನು ಉಳಿಸಲು ಮತ್ತು ಮಹಿಳೆಯರ ಆಟವನ್ನು ಉತ್ತೇಜಿಸಲು ಕಾರ್ಯತಂತ್ರದ ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ. ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿಯು ಐಸಿಸಿ ಸ್ಟ್ರಾಟೆಜಿಕ್ ಫಂಡ್‌ನಿಂದ ಪೂರ್ಣ ಸದಸ್ಯ ಮತ್ತು ಸಹವರ್ತಿ ರಾಷ್ಟ್ರಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಸಾಕಷ್ಟು ಹಣವನ್ನು ಮಿನಿಯೋಗಿಸಬಹುದು ಎಂದು ನಂಬಲಾಗಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬರೆದ ಪತ್ರದಲ್ಲೇನಿದೆ?: ಶುಕ್ರವಾರ ರಾಜ್ಯ ಅಸೋಸಿಯೇಷನ್‌ಗಳಿಗೆ ಪತ್ರ ಬರೆದಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, "ಆದಾಯ ವಿತರಣೆಯಲ್ಲಿ ನಮ್ಮ ಪಾಲಿನ ಜೊತೆಗೆ, ಐಸಿಸಿಯ ಸ್ಟ್ರಾಟೆಜಿ ಫಂಡ್‌ಗೆ ಸಾಕಷ್ಟು ಹಣ ಹಂಚಿಕೆ ಮಾಡುವಂತೆ ನಾವು ಪ್ರತಿಪಾದಿಸಿದ್ದೇವೆ. ಏಕೆಂದರೆ, ಈ ನಿಧಿಯನ್ನು ಅಭಿವೃದ್ಧಿಗೆ ಬಳಸಲಾಗುವುದು. ಈ ಹಂತದಲ್ಲಿ ಆಟದ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವುದು ಮುಖ್ಯವಾಗಿರುತ್ತದೆ ಎಂದು ಅವರು ತಿಳಿಸಿದರು.

ಐಸಿಸಿಯ ಅಂದಾಜು ವಾರ್ಷಿಕ ಆದಾಯದ ಶೇ. 38.5: ನಿರೀಕ್ಷೆಯಂತೆ, ಭಾರತದ ಪರಿಷ್ಕೃತ ಆದಾಯದ ಪಾಲನ್ನು ಡರ್ಬನ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಅನುಮೋದಿಸಲಾಗಿದೆ. ಅಂದರೆ, ಸುಮಾರು ಶೇಕಡ 72ರಷ್ಟು ಲಾಭ ಅವರಿಗೆ ಸಿಗಲಿದೆ. ಬಿಸಿಸಿಐ 2024ರಿಂದ 2027 ರವರೆಗೆ ಪ್ರತಿ ವರ್ಷ ಸುಮಾರು 230 ಮಿಲಿಯನ್ ಡಾಲರ್​ ಗಳಿಸುತ್ತದೆ. ಇದು ಐಸಿಸಿಯ ಅಂದಾಜು ವಾರ್ಷಿಕ ಆದಾಯದ ಶೇ38.5 ಪ್ರತಿಶತದಷ್ಟು ಎಂದು ಅವರು ವಿವರಿಸಿದ್ದಾರೆ.

  • The BCCI has witnessed a significant uplift of 72 percent in its revenue share from the ICC. (To Cricbuzz)

    India's share went to 38.5% from 22.4% in ICC revenue, approximately USD 600 million. pic.twitter.com/yiXrjQyzEc

    — CricketMAN2 (@ImTanujSingh) July 14, 2023 " class="align-text-top noRightClick twitterSection" data=" ">

ಬಿಸಿಸಿಐ ಪಾಲಿನಲ್ಲಿ ಇದು ಅದ್ಭುತ ಏರಿಕೆ: ಬಿಸಿಸಿಐ ಪಾಲಿನಲ್ಲಿ ಇದು ಅದ್ಭುತ ಏರಿಕೆಯಾಗಿದೆ. ನಮ್ಮ ಸಾಮೂಹಿಕ ಪ್ರಯತ್ನ ಹಾಗೂ ನಮ್ಮ ರಾಜ್ಯ ಸಂಘಗಳು ಮತ್ತು ಬಿಸಿಸಿಐನ ನನ್ನ ಸಹೋದ್ಯೋಗಿಗಳ ಒಗ್ಗಟ್ಟಿನ ಪ್ರಯತ್ನದಿಂದಾಗಿ ಈ ಸಾಧನೆಯನ್ನು ಸಾಧಿಸಲಾಗಿದೆ. ಭಾರತವು ಈ ಪಾಲನ್ನು ಪಡೆಯುವಲ್ಲಿ ಐಸಿಸಿ ಸಹವರ್ತಿ ಸದಸ್ಯರೊಂದಿಗಿನ ನಮ್ಮ ಬಲವಾದ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ಸಂಬಂಧಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಜಯ್ ಶಾ ತಿಳಿಸಿದರು.

ಇದನ್ನೂ ಓದಿ: ಭಾರತ vs ವೆಸ್ಟ್​ ಇಂಡೀಸ್​ ಟೆಸ್ಟ್: ರೋಹಿತ್ 'ಯಶ್ವಸಿ' ಜೊತೆಯಾಟ... ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಯುವ ಬ್ಯಾಟರ್​ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.