ಕರ್ನಾಟಕ

karnataka

ನಾಳೆ ಮಹಿಳಾ ಐಪಿಎಲ್‌​ ಹರಾಜು: 30 ಸ್ಥಾನಕ್ಕೆ 165 ಆಟಗಾರ್ತಿಯರ ಸ್ಪರ್ಧೆ

By ETV Bharat Karnataka Team

Published : Dec 8, 2023, 7:23 PM IST

ಚೊಚ್ಚಲ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ ಯಶಸ್ವಿಯಾಗಿದ್ದು ಎರಡನೇ ಸೀಸನ್​ಗೆ ತಯಾರಿ ಆರಂಭವಾಗಿದೆ. ಡಿಸೆಂಬರ್​ 9ರಂದು ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಂಬೈಯಲ್ಲಿ ನಡೆಯಲಿದೆ.

Womens Premier League 2024
Womens Premier League 2024

ಮುಂಬೈ(ಮಹಾರಾಷ್ಟ್ರ): 2023ರಲ್ಲಿ ಚೊಚ್ಚಲ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್ (ಡಬ್ಲ್ಯುಪಿಎಲ್) ನಡೆಯಿತು. ಪುರುಷರ ಐಪಿಎಲ್​ ರೀತಿಯ ಜನಮನ್ನಣೆ ಪಡೆಯದಿದ್ದರೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಎರಡನೇ ಸೀಸನ್​ಗೆ ಬಿಸಿಸಿಐ ತಯಾರಿ ಆರಂಭಿಸಿದ್ದು, ನಾಳೆ ಹರಾಜು ಪ್ರಕ್ರಿಯೆ ನಿಗದಿಯಾಗಿದೆ.

165 ಆಟಗಾರ್ತಿಯರು ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ. ಹರಾಜು ಪಟ್ಟಿಯಲ್ಲಿ 104 ಭಾರತೀಯರು ಮತ್ತು 61 ವಿದೇಶಿಯರಿದ್ದಾರೆ. 21 ವಿದೇಶಿ ಕ್ರಿಕೆಟಿಗರು ಸೇರಿದಂತೆ 60 ಆಟಗಾರ್ತಿಯರನ್ನು ಐದು ಫ್ರಾಂಚೈಸಿಗಳು ಉಳಿಸಿಕೊಂಡಿವೆ. 29 ಆಟಗಾರ್ತಿಯರನ್ನು ತಂಡಗಳು ಕೈಬಿಟ್ಟಿವೆ. ಪ್ರಸ್ತುತ ಹರಾಜಿನಲ್ಲಿ ಐದು ತಂಡಗಳಿಂದ ಒಟ್ಟು 30 ಸ್ಥಾನ ಖಾಲಿ ಇದ್ದು, ಇದರಲ್ಲಿ 9 ವಿದೇಶಿಯರಿದ್ದಾರೆ.

ಹರಾಜಿನಲ್ಲಿ ಹೆಚ್ಚಿನ ಮೂಲ ಬೆಲೆ ಹೊಂದಿರುವುದು ಕೇವಲ ಇಬ್ಬರು ಆಟಗಾರ್ತಿಯರು. ವೆಸ್ಟ್ ಇಂಡೀಸ್‌ನ ಡಿಯಾಂಡ್ರಾ ಡಾಟಿನ್ ಮತ್ತು ಆಸ್ಟ್ರೇಲಿಯಾದ ಕಿಮ್ ಗಾರ್ತ್ 50 ಲಕ್ಷ ರೂ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿದ್ದಾರೆ.

ಐದು ಫ್ರಾಂಚೈಸಿಗಳ ಪೈಕಿ ಗುಜರಾತ್ ಜೈಂಟ್ಸ್ ಹೆಚ್ಚಿನ ಹಣ ಹೊಂದಿದೆ. ಹೆಚ್ಚಿನ ಆಟಗಾರರೂ ಸಹ ತಂಡಕ್ಕೆ ಬೇಕಾಗಿದ್ದಾರೆ. ಗುಜರಾತ್ ಜೈಂಟ್ಸ್ 5.95 ಕೋಟಿ, ಯುಪಿ ವಾರಿಯರ್ಸ್​​ 4 ಕೋಟಿ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು 3.35 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್​ 2.25 ಕೋಟಿ ಮತ್ತು ಮುಂಬೈ ಇಂಡಿಯನ್ಸ್​ 2.10 ಕೋಟಿ ಹಣ ಹೊಂದಿದೆ. ಜಿಟಿಗೆ 10, ಆರ್​ಸಿಬಿಗೆ 7, ಮುಂಬೈ, ಯುಪಿಗೆ ತಲಾ 5 ಮತ್ತು ಡೆಲ್ಲಿ 3 ಆಟಗಾರ್ತಿಯರ ಅಗತ್ಯವಿದೆ.

ಯಾರ ಮೇಲೆ ಹೆಚ್ಚು ನಿರೀಕ್ಷೆ?:ಇಂಗ್ಲೆಂಡ್‌ನ ಡ್ಯಾನಿ ವ್ಯಾಟ್, ಶ್ರೀಲಂಕಾದ ಚಾಮರಿ ಅಥಾಪತ್ತು, ಭಾರತದ ಪ್ರಿಯಾ ಪುನಿಯಾ, ವೆಸ್ಟ್ ಇಂಡೀಸ್‌ನ ಡಿಯಾಂಡ್ರಾ ಡಾಟಿನ್, ಯುಪಿ ವಾರಿಯರ್ಸ್​ನಿಂದ ಹೊರಬಂದ ಸಿಮ್ರಾನ್ ಶೇಖ್ ಈ ಬಾರಿಯ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯುವ ನಿರೀಕ್ಷೆ ಇದೆ.

ತಂಡಗಳ ಆಯ್ಕೆ ಏನು?: ಮುಂಬೈ ಇಂಡಿಯನ್ಸ್​:ಚೊಚ್ಚಲ ಆವೃತ್ತಿಯ ಪ್ರಶಸ್ತಿ ಗೆದ್ದ ಎಂಐ ಗೆಲುವಿಗೆ ಕೊಡುಗೆ ನೀಡದ ಹೆಚ್ಚಿನ ಆಟಗಾರ್ತಿಯರನ್ನು ಉಳಿಸಿಕೊಂಡಿದೆ. ಭವಿಷ್ಯದ ಉದ್ದೇಶದಿಂದ ಭಾರತೀಯ ಯುವ ಆಟಗಾರ್ತಿಯರ ಖರೀದಿಗೆ ಎದುರು ನೋಡುತ್ತಿದೆ.

ಗುಜರಾತ್​: ಜಿಟಿ ತಂಡಕ್ಕೆ ಹೆಚ್ಚಿನ ಆಟಗಾರ್ತಿಯರ ಅಗತ್ಯವಿದೆ. ತಂಡದೊಂದಿಗೆ ಗುರುತಿಸಿಕೊಂಡಿರುವ ಭಾರತದ ಮಾಜಿ ಕ್ರಿಕೆಟಿಗ ಡಬ್ಲ್ಯುವಿ ರಾಮನ್ ಗುಜರಾತ್​ ಆಲ್​ರೌಂಡರ್​ಗಳ ಮೇಲೆ ಕಣ್ಣಿಟ್ಟಿದೆ. ಜೊತೆಗೆ ವೇಗದ ಬೌಲರ್​ಗಳನ್ನು ಖರೀದಿಸುವ ಚಿಂತನೆಯಲ್ಲಿದೆ ಎಂದಿದ್ದಾರೆ.

ಇದನ್ನೂ ಓದಿ:ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ: ಹೆಚ್ಚು ಗೆದ್ದವರು ಯಾರು?

ABOUT THE AUTHOR

...view details