ಕರ್ನಾಟಕ

karnataka

Rapid fire: ಇಂಗ್ಲೆಂಡ್‌ನಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಏನಿಷ್ಟ? ಅವರ ಉತ್ತರ ಹೀಗಿತ್ತು..

By

Published : Jun 16, 2021, 10:05 AM IST

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಲವು ಆಟಗಾರರಿಗೆ ರ‍್ಯಾಪಿಡ್ ಫೈರ್​​ ಏರ್ಪಡಿಸಿತ್ತು. ಈ ಕಾರ್ಯಕ್ರಮದಲ್ಲಿ ಅಂಜಿಕ್ಯ ರಹಾನೆ, ಇಶಾಂತ್​ ಶರ್ಮಾ, ಮೊಹಮ್ಮದ್​ ಶಮಿ, ಆರ್​.ಅಶ್ವಿನ್​ ಹಾಗು ಚೇತೇಶ್ವರ್​ ಪೂಜಾರ ಭಾಗವಹಿಸಿದ್ದರು.

A fun round of rapid-fire with
ಬಿಸಿಸಿಐ ರ‍್ಯಾಪಿಡ್ ಫೈರ್

ಸದ್ಯ ಭಾರತ ಕ್ರಿಕೆಟ್ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಪಂದ್ಯಕ್ಕಾಗಿ ಇಂಗ್ಲೆಂಡ್​​ ಪ್ರವಾಸ ಕೈಗೊಂಡಿದೆ. ಡಬ್ಲ್ಯೂಟಿಸಿ ಮ್ಯಾಚ್​ಗಾಗಿ ಟೀಂ ಇಂಡಿಯಾದ ಆಟಗಾರರು ಅಭ್ಯಾಸ​ ಪಂದ್ಯಗಳ ಜೊತೆ ನೆಟ್​​ನಲ್ಲಿ ಬೆವರು ಹರಿಸುತ್ತಿದ್ದಾರೆ. ಇದರ ಮಧ್ಯೆ ಫನ್​​ ಎಂಬಂತೆ ಬಿಸಿಸಿಐ ಕೆಲವು ಆಟಗಾರರಿಗೆ ರ‍್ಯಾಪಿಡ್ ಫೈರ್ ಪ್ರಶ್ನೆಗಳನ್ನು​​ ಕೇಳಿದಾಗ ಅವರ ಉತ್ತರಗಳು ಇಂಟರೆಸ್ಟಿಂಗ್ ಆಗಿದ್ದವು.

ಲಂಡನ್‌ನಲ್ಲಿ ಚಿತ್ರೀಕರಿಸಿದ ಮೂರು ಬಾಲಿವುಡ್ ಚಲನಚಿತ್ರಗಳಾವುವು?, ಇಂಗ್ಲೆಂಡ್​​ನಲ್ಲಿ ನಿಮ್ಮ ನೆಚ್ಚಿನ ಬ್ರೇಕ್‌ಫಾಸ್ಟ್​ ಯಾವುದು?, ಇಂಗ್ಲೆಂಡ್​ನಲ್ಲಿ ನೀವು ಮಾಡುವ ಮೂರು ಕೆಲಸಗಳೇನು.. ಎಂದೆಲ್ಲಾ ಕೇಳಲಾಗಿದೆ. ಈ ವಿಡಿಯೋ ನೋಡಿ..

ಇದಕ್ಕೆ ಉತ್ತರಿಸಿದ ಆಟಗಾರರೆಲ್ಲರೂ ಬೇಯಿಸಿದ ಮೊಟ್ಟೆ, ಬೇಯಿಸಿದ ಬೀನ್ಸ್ ಎಂದು ಹೇಳುತ್ತಾರೆ. ಆದರೆ ಪೂಜಾರಾ ಮಾತ್ರ ನಾನು ಸಸ್ಯಾಹಾರಿಯಾಗಿದ್ದು ಬ್ರೌನ್ ಟೋಸ್ಟ್, ಆಲೂ ಟೋಸ್ಟ್, ಬೇಯಿಸಿದ ಬೀನ್ಸ್ ಇಷ್ಟಪಡುತ್ತೇನೆ ಎಂದರು.

ಲಂಡನ್‌ನಲ್ಲಿ ಚಿತ್ರೀಕರಿಸಿದ ಮೂರು ಬಾಲಿವುಡ್ ಚಲನಚಿತ್ರಗಳ ಬಗ್ಗೆ ಕೇಳಿದಾಗ, ಡಿಡಿಎಲ್​​ಜೆ, ಹೌಸ್​​ಫುಲ್​, ನಮಸ್ತೆ ಲಂಡನ್​, ಕ್ವೀನ್​, ಕಲ್​​ ಹೋನ ಹೋ ಎಂದು ಆಟಗಾರರು ಉತ್ತರಿಸಿದ್ದಾರೆ.

ಶಮಿ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಇಲ್ಲಿನ ವಾತಾವರಣವನ್ನು ಆನಂದಿಸುವುದು, ಶಾಪಿಂಗ್ ಮಾಡುವುದನ್ನು ಇಷ್ಟಪಡುತ್ತೇನೆ. ಅದರ ಹೊರತಾಗಿ, ರಸ್ತೆಗಳಲ್ಲಿ ವಾಕಿಂಗ್​ ಇಷ್ಟ. ಉದ್ಯಾನವನಗಳು ಮತ್ತು ಕಾಫಿ ಅಂಗಡಿಗಳಲ್ಲಿ ನನ್ನ ಕುಟುಂಬದೊಂದಿಗೆ ಮೋಜು ಮಾಡಲು ಬಯಸುತ್ತೇನೆ. ಬೆಳಗ್ಗೆ ಉಪಹಾರದ ನಂತರ ವಿವಿಧ ಕಾಫಿಗಳನ್ನು ಆನಂದಿಸುವುದಾಗಿ ಹೇಳಿದರು.

ಅಶ್ವಿನ್​ ಉತ್ತರಿಸಿ, ನನಗೆ ಲಂಡನ್‌ನ ಎಲ್ಲಾ ಬೀದಿಗಳನ್ನು ಸುತ್ತುವುದು, ರಸ್ತೆಗಳ ಪಕ್ಕದಲ್ಲಿರುವ ಕಾಫಿ ಅಂಗಡಿಗಳಲ್ಲಿ ಮೋಜು ಮಾಡುತ್ತಾ ಸಮಯ ಕಳೆಯುವುದು ಖುಷಿ ಕೊಡುತ್ತದೆ ಎಂದರು.

ಪೂಜಾರ ಮಾತನಾಡುತ್ತಾ, ನಾನು ಹೊಸ ಸ್ಥಳಗಳನ್ನು ನೋಡಲು ಇಷ್ಟಪಡುತ್ತೇನೆ. ಹಾಗೆಯೇ ಲಾಂಗ್​ ಡ್ರೈವ್​,ವಿವಿಧ ಬಗೆಯ ಕಾಫಿಗಳನ್ನು ಸವಿಯುವುದಿಷ್ಟ ಎಂದರು. ಇಶಾಂತ್​ ಶರ್ಮಾ ಪ್ರತಿಕ್ರಿಯಿಸುತ್ತಾ, ನಾನು ಇಲ್ಲಿಗೆ ಅನೇಕ ಬಾರಿ ಬಂದಿದ್ದೇನೆ, ಎಲ್ಲೆಡೆ ಸುತ್ತಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details