ಕರ್ನಾಟಕ

karnataka

Asia Youth Para Games: 16 ಪದಕ ಗೆದ್ದ ಭಾರತೀಯ ಪ್ಯಾರಾ ಶಟ್ಲರ್​ಗಳು

By

Published : Dec 6, 2021, 9:54 PM IST

Asia Youth Para Games
16 ಪದಕ ಗೆದ್ದ ಭಾರತೀಯ ಪ್ಯಾರಾ ಶಟ್ಲರ್​ಗಳು

ಭಾರತೀಯ ಪ್ಯಾರಾ ಶಟ್ಲರ್​ಗಳು 4 ಚಿನ್ನ , 7 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಪಡೆದರು. ಮಹಿಳೆಯರ ಸಿಂಗಲ್ಸ್​ನಲ್ಲಿ ನಿತ್ಯಶ್ರೀ SH6 ಮತ್ತು ಸಂಜನಾ SL3 ವಿಭಾಗದಲ್ಲಿ ಚಿನ್ನ ಗೆದ್ದರು. ಪಲಕ್​ ಮತ್ತು ಸಂಜನಾ ಮಹಿಳಾ ಡಬಲ್ಸ್​(SL3-SU5) ನಲ್ಲಿ ಮತ್ತು ನೆಹಾಲ್​ ಗುಪ್ತಾ ಮತ್ತು ಅಭಿಜಿತ್​ ಸಖುಜಾ ಪುರುಷರ ಡಬಲ್ಸ್​(SL3-SL4) ವಿಭಾಗದಲ್ಲಿ ಸ್ವರ್ಣಕ್ಕೆ ಮುತ್ತಿಕ್ಕಿದರು.

ನವದೆಹಲಿ: ಟೋಕಿಯೋ ಪ್ಯಾರಾಲಿಂಪಿಯನ್ ಪಲಕ್ ಕೊಹ್ಲಿ, ಸಂಜನಾ ಕುಮಾರಿ ಮತ್ತು ಹಾರ್ದಿಕ್​ ಮಕ್ಕರ್​ ಅವರ ತಲಾ 3 ಪದಕಗಳ ಜೊತೆಗೆ ಭಾರತ ಪ್ಯಾರಾ ತಂಡ ಬೆಹ್ರೇನ್​​ನಲ್ಲಿ ಏಷ್ಯಾ ಯೂತ್​ ಪ್ಯಾರಾ ಗೇಮ್ಸ್​ನಲ್ಲಿ ಒಟ್ಟು 16 ಪದಕಗಳನ್ನು ಗೆದ್ದುಕೊಂಡಿದೆ.

ಭಾರತೀಯ ಪ್ಯಾರಾ ಶಟ್ಲರ್​ಗಳು 4 ಚಿನ್ನ , 7 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಪಡೆದರು. ಮಹಿಳೆಯರ ಸಿಂಗಲ್ಸ್​ನಲ್ಲಿ ನಿತ್ಯಶ್ರೀ SH6 ಮತ್ತು ಸಂಜನಾ SL3 ವಿಭಾಗದಲ್ಲಿ ಚಿನ್ನ ಗೆದ್ದರು. ಪಲಕ್​ ಮತ್ತು ಸಂಜನಾ ಮಹಿಳಾ ಡಬಲ್ಸ್​(SL3-SU5) ನಲ್ಲಿ ಮತ್ತು ನೆಹಾಲ್​ ಗುಪ್ತಾ ಮತ್ತು ಅಭಿಜಿತ್​ ಸಖುಜಾ ಪುರುಷರ್ ಡಬಲ್ಸ್​(SL3-SL4) ವಿಭಾಗದಲ್ಲಿ ಸ್ವರ್ಣಕ್ಕೆ ಮುತ್ತಿಕ್ಕಿದರು.

ಬೆಳ್ಳಿ ಪದಕ ವಿಜೇತರು: ನಿತ್ಯಶ್ರೀ ಮತ್ತು ಆದಿತ್ಯ ಕುಲಕರ್ಣಿ (ಮಿಶ್ರ ಡಬಲ್ಸ್, SH6), ಜ್ಯೋತಿ (ಮಹಿಳೆಯರ ಸಿಂಗಲ್ಸ್, SL4), ನವೀನ್ ಎಸ್ (ಪುರುಷರ ಸಿಂಗಲ್ಸ್, SL4), ಹಾರ್ದಿಕ್ ಮಕ್ಕರ್ (ಪುರುಷರ ಸಿಂಗಲ್ಸ್, SU5), ಕರಣ್ ಪನೀರ್ ಮತ್ತು ರುತಿಕ್ ರಘುಪತಿ (ಪುರುಷರ ಡಬಲ್ಸ್ SU5), ಹಾರ್ದಿಕ್ ಮತ್ತು ಸಂಜನಾ (ಮಿಶ್ರ ಡಬಲ್ಸ್, SL3-SU5).

ಕಂಚಿನ ಪದಕ ವಿಜೇತರು: ಪಲಕ್ ಕೊಹ್ಲಿ (ಮಹಿಳೆಯರ ಸಿಂಗಲ್ಸ್ SU5), ಪಲಕ್ ಮತ್ತು ನೇಹಾಲ್ ಗುಪ್ತಾ (ಮಿಶ್ರ ಡಬಲ್ಸ್, SL3-SU5), ನವೀನ್ ಎಸ್ ಮತ್ತು ಹಾರ್ದಿಕ್ ಮಕ್ಕರ್ (ಪುರುಷರ ಡಬಲ್ಸ್, SU5), ಆದಿತ್ಯ ಕುಲಕರ್ಣಿ (ಪುರುಷರ ಸಿಂಗಲ್ಸ್, SH6). ಡಿಸೆಂಬರ್​ 2ರಿಂದ 6ರವರೆಗೆ ನಡೆದ ಈ ಕೂಟದಲ್ಲಿ 30 ರಾಷ್ಟ್ರಗಳಿಂದ ಸುಮಾರು 700 ಪ್ಯಾರಾ ಶಟ್ಲರ್​ಗಳು ಈ ಯುವ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:BWF World Tour Finals : ಫೈನಲ್​ನಲ್ಲಿ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟ ಪಿವಿ ಸಿಂಧು

ABOUT THE AUTHOR

...view details