ETV Bharat / sports

BWF World Tour Finals : ಫೈನಲ್​ನಲ್ಲಿ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟ ಪಿವಿ ಸಿಂಧು

author img

By

Published : Dec 5, 2021, 3:28 PM IST

BWF World Tour Finals
ವಿ ಸಿಂಧು ವಿಶ್ವ ಟೂರ್​ ಫೈನಲ್ಸ್

ಇದೊಂದು ಒಳ್ಳೆಯ ಪಂದ್ಯವಾಗಿತ್ತು. ​ಸೆಯಾಂಗ್​ ಒಳ್ಳೆಯ ಆಟಗಾರ್ತಿಯಾಗಿದ್ದಾರೆ. ಅವರ ವಿರುದ್ಧ ಆಡುವುದು ಸುಲಭದ ಮಾತಲ್ಲ. ಆದರೂ ನಾನು ಪೈಪೋಟಿ ನೀಡಲು ತಯಾರಾಗಿ ಬಂದಿದ್ದೆ. ನಾನು ಆರಂಭದಲ್ಲೇ ಅವರಿಗೆ ಪಾಯಿಂಟ್​ ಕೊಟ್ಟಿದ್ದರಿಂದ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ..

ಬಾಲಿ(ಇಂಡೋನೇಷಿಯಾ) : ಎರಡು ಬಾರಿಯ ಒಲಿಂಪಿಕ್​ ಪದಕ ವಿಜೇತೆ ಪಿವಿ ಸಿಂಧು ವಿಶ್ವ ಟೂರ್​ ಫೈನಲ್ಸ್​ನ ಪ್ರಶಸ್ತಿ ಸುತ್ತಿನಲ್ಲಿ ಸೋಲು ಕಾಣುವ ಮೂಲಕ ರನ್ನರ್​ ಅಪ್​ಗೆ ತೃಪ್ತಿಪಟ್ಟಿದ್ದಾರೆ.

ಭಾನುವಾರ ನಡೆದ ಫೈನಲ್​​ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಸಿಂಧು 6ನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಆನ್​ ಸೆಯಾಂಗ್ ವಿರುದ್ಧ 16-21, 12-21ರ ಅಂತರದಲ್ಲಿ ಸೋಲುಂಡರು.

ಅದ್ಭುತ ಫಾರ್ಮ್​ನಲ್ಲಿದ್ದ 19 ವರ್ಷದ ಯಂಗ್​ ವಿರುದ್ಧ ಭಾರತೀಯ ಶಟ್ಲರ್​ ಮಂಕಾದರು. ಆರಂಭದಿಂದಲೂ ಸಿಂಧು ಮೇಲೆ ಒತ್ತಡ ಹೇರಿದ 6ನೇ ಶ್ರೇಯಾಂಕದ ಶಟ್ಲರ್, ಯಾವುದೇ ಹಂತದಲ್ಲಿ ತಿರುಗಿ ಬೀಳಲು ಅವಕಾಶ ನೀಡದೇ ಕೇವಲ 39 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡರು.

ಒಲಿಂಪಿಕ್ಸ್​ ನಂತರ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಸೆಯಾಂಗ್​ ವರ್ಷದ ಕೊನೆಯ ಟೂರ್ನಮೆಂಟ್​ ಸೇರಿದಂತೆ ಸತತ 3 ಟೈಟಲ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಅವರು ಇಂಡೋನೇಷಿಯಾ ಮಾಸ್ಟರ್ಸ್ ಮತ್ತು ಇಂಡೋನೇಷಿಯಾ ಓಪನ್​ ಪ್ರಶಸ್ತಿಗಳನ್ನು ಗೆದ್ದಿದ್ದರು.

ಇನ್ನು ಪಿವಿ ಸಿಂಧು 3ನೇ ಬಾರಿ ಫೈನಲ್ ತಲುಪಿದರೂ ರನ್ನರ್​ ಅಪ್​ಗೆ ತೃಪ್ತಿಪಟ್ಟುಕೊಂಡು 60,000 ಡಾಲರ್​ ಮೊತ್ತವನ್ನು ಪಡೆದರು. 2018ರಲ್ಲಿ ಪಿವಿ ಸಿಂಧು ವರ್ಷದ ಕೊನೆಯ ಟೂರ್ನಮೆಂಟ್​ನಲ್ಲಿ ಚಾಂಪಿಯನ್​ ಆಗಿದ್ದರು.

ಇದೊಂದು ಒಳ್ಳೆಯ ಪಂದ್ಯವಾಗಿತ್ತು. ​ಸೆಯಾಂಗ್​ ಒಳ್ಳೆಯ ಆಟಗಾರ್ತಿಯಾಗಿದ್ದಾರೆ. ಅವರ ವಿರುದ್ಧ ಆಡುವುದು ಸುಲಭದ ಮಾತಲ್ಲ. ಆದರೂ ನಾನು ಪೈಪೋಟಿ ನೀಡಲು ತಯಾರಾಗಿ ಬಂದಿದ್ದೆ. ನಾನು ಆರಂಭದಲ್ಲೇ ಅವರಿಗೆ ಪಾಯಿಂಟ್​ ಕೊಟ್ಟಿದ್ದರಿಂದ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ.

ಇದು ಸ್ವಲ್ಪ ಬೇಸರವಾಗಿದೆ. ಆದರೆ, ಈ ಸೋಲಿನಿಂದ ಸಾಕಷ್ಟು ಕಲಿತಿದ್ದೇನೆ. ಬಾಲಿಯಲ್ಲಿ 3 ಒಳ್ಳೆಯ ವಾರಗಳನ್ನು ಕಳೆದಿದ್ದೇನೆ. ಇಲ್ಲಿಂದ ಸಾಕಷ್ಟು ಸಕಾರಾತ್ಮಕ ಅಂಶಗಳನ್ನು ಪಡೆದಿರುವೆ. ಮುಂಬರುವ ವಿಶ್ವಚಾಂಪಿಯನ್​ಶಿಪ್​ಗೆ ತಯಾರಿ ಮಾಡಿಕೊಳ್ಳುವೆ ಎಂದು ಪಂದ್ಯ ಸೋತ ನಂತರ ಪಿವಿ ಸಿಂಧು ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್ ಶಾಲೆಯಲ್ಲಿ ಮಕ್ಕಳಿಗೆ ನೀರಜ್ ಚೋಪ್ರಾ ತರಬೇತಿ: ವಿಡಿಯೋ ಹಂಚಿಕೊಂಡ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.