ಕರ್ನಾಟಕ

karnataka

ರಾಜ್​​​​, ಅಂಬಿ ಸಮಾಧಿಗೆ ಟಾಲಿವುಡ್​ ನಟ ಜಗಪತಿ ಬಾಬು ನಮನ‌

By

Published : Aug 2, 2019, 12:19 PM IST

ರಾಬರ್ಟ್​​​ ಸಿನಿಮಾದಲ್ಲಿ ಜಗಪತಿ ವಿಲನ್​ ಅಥವಾ ಪೋಷಕ ನಟನಾಗಿ ಕಾಣಿಸಿಕೊಂಡಿದ್ದಾರಾ ಎನ್ನುವ ಗುಟ್ಟು ಇನ್ನೂ ರಟ್ಟಾಗಿಲ್ಲ.

ನಟ ಜಗಪತಿ ಬಾಬು ನಮನ‌

ಟಾಲಿವುಡ್ ಫೇಮಸ್ ನಟ ಜಗಪತಿ ಬಾಬು ದಿವಂಗತ ನಟ ಡಾ. ರಾಜಕುಮಾರ್​​ ಹಾಗೂ ಅಂಬರೀಶ್ ಸಮಾಧಿಗೆ ಭೇಟಿ ನೀಡಿದ್ದಾರೆ. ರಾಬರ್ಟ್​ ಶೂಟಿಂಗ್​​ ನಿಮಿತ್ತ ಕಂಠೀರವ ಸ್ಟುಡಿಯೋಗೆ ಆಗಮಿಸಿದ್ದ ಅವರು ಅಲ್ಲೇ ಇರುವ ಅಂಬಿ-ರಾಜ್​ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ರಾಜಕುಮಾರ್​​ ಸಮಾಧಿಗೆ ನಟ ಜಗಪತಿ ಬಾಬು ನಮನ‌

ಚಾಲೆಂಜಿಂಗ್ ಸ್ಟಾರ್ ದರ್ಶನ್​ ನಟನೆಯ 'ರಾಬರ್ಟ್'​ ಚಿತ್ರದ ಶೂಟಿಂಗ್ ಪಾಂಡಿಚೇರಿ ಹಾಗೂ ಬೆಂಗಳೂರಿನಲ್ಲಿ ಭರದಿಂದ ಸಾಗಿದೆ. ಇದೀಗ 'ರಾಬರ್ಟ್' ಅಡ್ಡಕ್ಕೆ ಜಗಪತಿ ಎಂಟ್ರಿ ಆಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ‌ ರಾಬರ್ಟ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಇಲ್ಲಿರುವ ವರನಟ ಡಾ. ರಾಜ್ ಕುಮಾರ್, ಅಂಬರೀಶ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಗೆ ತೆರೆಳಿ ನಮನ ಸಲ್ಲಿಸಿದ್ದಾರೆ. ಈ ವೇಳೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಸೇರಿದಂತೆ ಚಿತ್ರತಂಡ ಹಾಜರಿತ್ತು.

ಪಾರ್ವತಮ್ಮ ರಾಜಕುಮಾರ್​​ ಸಮಾಧಿಗೆ ನಟ ಜಗಪತಿ ಬಾಬು ನಮನ‌

ಇನ್ನು ಈಗಾಗಲೇ ಡಿಬಾಸ್​ ದರ್ಶನ್​ ಮತ್ತು ಜಗಪತಿ ಬಾಬು ನಡುವಿನ ದೃಶ್ಯಗಳನ್ನ ನಿರ್ದೇಶಕ ತರುಣ್ ಸುಧೀರ್ ಚಿತ್ರೀಕರಿಸಿಕೊಂಡಿದ್ದಾರಂತೆ‌‌. ಆದರೆ, ಈ ಸಿನಿಮಾದಲ್ಲಿ ಜಗಪತಿ ಅವರದ್ದು ವಿಲನ್​ ಪಾತ್ರವಾ ಅಥವಾ ಪೋಷಕ ನಟನಾಗಿ ಅಭಿನಯಿಸಿದ್ದಾರಾ ಎನ್ನುವ ಗುಟ್ಟು ಇನ್ನೂ ರಟ್ಟಾಗಿಲ್ಲ.

Intro:ಅಣ್ಣಾವ್ರ ಹಾಗೂ ಅಂಬಿ‌ಸಮಾಧಿ ಬಳಿ ಭೇಟಿ ಕೊಟ್ಟ ಸೌಥ್ ಇಂಡಿಯಾ ಸ್ಟಾರ್ ಜಗಪತಿ ಬಾಬು..!!


ಖ್ಯಾತ ಸೌತ್ ಇಂಡಿಯಾ ಸ್ಟಾರ್‌ ಜಗಪತಿ‌ಬಾಬು ಕಂಠೀರವ ಸ್ಟೂಡಿಯೊ ದಲ್ಲಿರುವ ಡಾ.ರಾಜ್ ಕುಮಾರ್ ಹಾಗೂ ಅಂಬರೀಶ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ‌ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಜಗಪತಿ ಬಾಬು. ಅಣ್ಣಾವ್ರ ಹಾಗೂ ಅಂಬಿ ಸಮಾದಿ ಬಳಿಗೆ ಭೇಟಿ ನೀಡಿದ್ದಾರೆ. ಇನ್ನೂ ಅಣ್ಣಾವ್ರ ಸಮಾದಿಗೆ ರಾಜ್ ಕುಮಾರ್ ಪುತ್ರಿ ಲಕ್ಷ್ಮಿ ಮತ್ತು ವರದ ರಾಜು ಜೊತೆ ಜಗಪತಿ ಬಾಬು ಪೂಜೆ ಸಲ್ಲಿಸಿದ್ದಾರೆ. Body:ರಾಬರ್ಟ್ ಚಿತ್ರಿದ ಚಿತ್ರೀಕರಣದ
ಸದ್ಯ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದು ಜಗಪತಿ ಬಾಬು ರಾಬರ್ಟ್ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ .ಇನ್ನು ದರ್ಶನ್ ಅಭಿನಯದ ರಾಬರ್ಟ್‌ ಚಿತ್ರದಲ್ಲಿ ಜಗಪತಿ ಬಾಬು ಲೀಡ್ ರೋಲ್ ಪ್ಲೇ ಮಾಡ್ತಿದ್ದು, ತರುಣ್ ಸುಧೀರ್ ರಾಬರ್ಟ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ರೆ ಉಮಾಪತಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸತೀಶ ಎಂಬಿConclusion:

ABOUT THE AUTHOR

...view details