ಕರ್ನಾಟಕ

karnataka

ರೂಲ್ಸ್​​ ಉಲ್ಲಂಘಿಸಿ ಪೊಲೀಸರಿಗೆ ಅಣಕಿಸಿದ್ದ ವರ್ಮಾ... ಪೊಲೀಸರಿಂದ ತಿರುಗೇಟು

By

Published : Jul 22, 2019, 11:34 AM IST

Updated : Jul 22, 2019, 12:04 PM IST

ವಿಭಿನ್ನ ಮ್ಯಾನರಿಸಂನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿ ಸಂಚಾರ ನಿಯಮ ಉಲ್ಲಂಘಿಸಿ ಕಾನೂನಿನ ಕಂಟಕಕ್ಕೆ ಸಿಲುಕಿದ್ದಾರೆ.

ಚಿತ್ರಕೃಪೆ: ಟ್ವಿಟರ್​

ಹೈದರಾಬಾದ್​: ಕಾಂಟ್ರೊವರ್ಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಂಚಾರಿ ನಿಯಮ ಗಾಳಿಗೆ ತೂರಿ ಪೊಲೀಸರನ್ನು ಅಣಕಿಸಿದ್ದಕ್ಕೆ ಸರಿಯಾಗಿ ತಿರುಗೇಟು ಕೊಟ್ಟಿದ್ದಾರೆ.

ಇತ್ತೀಚಿಗಷ್ಟೆ ಆರ್​​ಜಿವಿ, ನಿರ್ದೇಶಕರುಗಳಾದ ಅಜಯ್ ಭೂಪತಿ ಹಾಗೂ ಅಗಸ್ಥ್ಯ ಜತೆ ರಾಯಲ್ ಎನ್​ಫೀಲ್ಡ್ ಬೈಕ್​ನಲ್ಲಿ ಥಿಯೇಟರ್​ಗೆ ತೆರಳಿದ್ದರು. ಪುರಿ ಜಗನ್ನಾಥ್ ಅವರ 'ಇಸ್ಮಾರ್ಟ್​ ಶಂಕರ್' ನೋಡಲು ಟ್ರಿಪಲ್​ ರೈಡಿಂಗ್​​ ಮಾಡಿದ್ದ ಅವರು, ಹೆಲ್ಮೆಟ್​ ಕೂಡ ಧರಿಸಿರಲಿಲ್ಲ. ಅಷ್ಟೇ ಅಲ್ಲದೆ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ, 'ಪೊಲೀಸರು ಎಲ್ಲಿದ್ದಾರೆ? ಬಹುಶಃ ಅವರೆಲ್ಲ ಚಿತ್ರಮಂದಿರದಲ್ಲಿ ಕುಳಿತು ಇಸ್ಮಾರ್ಟ್​ ಶಂಕರ್​ ಸಿನಿಮಾ ನೋಡ್ತಿರಬಹುದು' ಎಂದು ಅಪಹಾಸ್ಯದ ರೀತಿ ಟ್ವೀಟ್ ಮಾಡಿದ್ದರು.

ಆರ್​​ಜಿವಿಯ ಈ ಕ್ರಮಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ನೆಟಿಜನ್​​ಗಳು ವರ್ಮಾ ಬಳಸಿದ ಬೈಕ್ ನಂಬರ್ ಸಹಿತ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ, ಕ್ರಮಕ್ಕೆ ಆಗ್ರಹಿಸಿದ್ದರು. ​​​

ಇನ್ನು ಆರ್​​ಜಿವಿಗೆ ಖಡಕ್ ಪ್ರತ್ಯುತ್ತರ ಕೊಟ್ಟಿರುವ ಹೈದರಾಬಾದ್​ ಪೊಲೀಸರು, ಸಂಚಾರಿ ನಿಮಯ ಉಲ್ಲಂಘನೆ ಬಗ್ಗೆ ತಿಳಿಸಿ, ನಮ್ಮ ಕರ್ತವ್ಯ ನೆನಪಿಸಿದ್ದಕ್ಕೆ ಧನ್ಯವಾದಗಳು. ಇದೇ ರೀತಿಯ ಜವಾಬ್ದಾರಿಯನ್ನು ಸಂಚಾರಿ ನಿಮಯ ಪಾಲಿಸುವಲ್ಲಿ ನಿಮ್ಮಿಂದಲೂ ನಾವೂ ನಿರೀಕ್ಷಿಸುತ್ತೇವೆ ಎಂದಿದ್ದಾರೆ. ಜತೆಗೆ ಪೊಲೀಸರು ಕೇವಲ ಸಿನಿಮಾ ಮಾತ್ರವಲ್ಲ, ಪ್ರತಿನಿತ್ಯ ರಸ್ತೆ ಮೇಲೆ ನಿಮ್ಮಂತವರು ಮಾಡುವ ಡ್ರಾಮಾ, ಸರ್ಕಸ್​​ಗಳನ್ನೂ ನಾವು ನೋಡುತ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ.

Intro:Body:Conclusion:
Last Updated :Jul 22, 2019, 12:04 PM IST

ABOUT THE AUTHOR

...view details