ಕರ್ನಾಟಕ

karnataka

'ಇದು ಮಹಾಭಾರತ ಅಲ್ಲ' ಎನ್ನುತ್ತಿದ್ದಾರೆ ರಾಮ್​​ಗೋಪಾಲ್ ವರ್ಮಾ

By

Published : Jan 19, 2021, 2:24 PM IST

ರಾಮ್​​​ಗೋಪಾಲ್​ ವರ್ಮಾ 'ಇದಿ ಮಹಾಭಾರತಂ ಕಾದು' ಎಂಬ ವೆಬ್​ ಸೀರೀಸ್​​​​ವೊಂದನ್ನು ಮಾಡುತ್ತಿದ್ದು ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಸೀರೀಸ್​​ಗೆ ಸಂಬಂಧಿಸಿದ ಕೆಲವೊಂದು ವಿಚಾರಗಳನ್ನು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.

Idi Mahbharatam kadu
ರಾಮ್​​ಗೋಪಾಲ್ ವರ್ಮಾ

ವಿವಾದಾತ್ಮಕ ನಿರ್ದೇಶಕ ಎಂದೇ ಹೆಸರಾದ ರಾಮ್​​ಗೋಪಾಲ್ ವರ್ಮಾ ಲಾಕ್​ಡೌನ್ ಇದ್ದರೂ 3-4 ಸಿನಿಮಾಗಳನ್ನು ಮಾಡಿ ತಮ್ಮದೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಿದ್ದರು. ಈಗ ಅವರು ಮತ್ತಷ್ಟು ಸಿನಿಮಾ, ವೆಬ್​​ ಸೀರೀಸ್​​​ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವರು 'ಇದಿ ಮಹಾಭಾರತಂ ಕಾದು' ಎಂಬ ವೆಬ್ ಸೀರೀಸ್​​​ವೊಂದನ್ನು ಮಾಡುತ್ತಿದ್ದಾರೆ.

ಈ ಸೀರೀಸ್​​​​​​ಗೆ ಸಂಬಂಧಿಸಿದಂತೆ ಆರ್​​ಜಿವಿ ತಮ್ಮದೇ ಧ್ವನಿ ಇರುವ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. "ಈ ಪ್ರಪಂಚದಲ್ಲಿ ಮಹಾಭಾರತದ ಪಾತ್ರವರ್ಗದಂತೆ ಅನೇಕ ಮನುಷ್ಯರಿದ್ದಾರೆ, ಮಹಾಭಾರತದ ಘಟನೆಯಂತೆ ಅನೇಕ ಘಟನೆಗಳು ಒಂದಲ್ಲಾ ಒಂದು ಕಡೆ ಜರುಗುತ್ತಲೇ ಇರುವುದು ಎಲ್ಲರಿಗೂ ತಿಳಿದ ವಿಚಾರ. ಆಸ್ತಿ ಗಲಾಟೆ, ಭೂಮಿ ವಿವಾದ, ಮೋಸ ಮಾಡುವುದು, ಕೆಟ್ಟ ಚಟಗಳು, ಅತ್ಯಾಚಾರ, ಕೊಲೆ ಮಾಡುವುದು, ಮಾಡಿಸುವುದು, ಅಪಹರಿಸುವುದು..ಈ ಎಲ್ಲವೂ ಮಹಾಭಾರತ ಬರೆಯುವ ಮುಂಚಿನಿಂದ ನಡೆಯುತ್ತಲೇ ಇದೆ. ಮನುಷ್ಯರು ಈ ಭೂಮಿ ಮೇಲೆ ಇರುವವರೆಗೂ ಇದು ನಡೆಯುತ್ತಲೇ ಇರುತ್ತದೆ. ಇದೇ ರೀತಿಯ ಕಥೆಯನ್ನು ಆಧಾರವಾಗಿಟ್ಟುಕೊಂಡು ನಾನು ಸ್ಪಾರ್ಕ್ ಬ್ಯಾನರ್ ಜೊತೆ ಸೇರಿ ಇದಿ ಮಹಾಭಾರತಂ ಕಾದು ಎಂಬ ವೆಬ್ ಸೀರೀಸ್ ಮಾಡುತ್ತಿದ್ದೇನೆ".

ಇದನ್ನೂ ಓದಿ:'ಮಿ.ಲೆಲೆ' ಚಿತ್ರದಲ್ಲಿ ವರುಣ್ ಧವನ್ ಬದಲಿಗೆ ವಿಕ್ಕಿ ಕೌಶಲ್​​...?

"ತೆಲಂಗಾಣದ ಊರೊಂದರಲ್ಲಿ ಕೆಲವು ನಿವಾಸಿಗಳಿಗೆ ಮಹಾಭಾರತದಂತೆ ಕಷ್ಟದ ಪರಿಸ್ಥಿತಿ ಬಂದೊದಗಿದಾಗ ಅವರು ಆ ಕಷ್ಟಗಳನ್ನು ಹೇಗೆ ಎದುರಿಸಿದರು,ಅದರಿಂದ ಅವರಿಗೆ ಉಂಟಾದ ಸಮಸ್ಯೆಗಳೇನು ಎಂಬುದನ್ನು ಈ ಸೀರೀಸ್​​​ನಲ್ಲಿ ತೋರಿಸಲಾಗಿದೆ. ನಮ್ಮ ಸೀರೀಸ್ ಹೆಸರನ್ನು ಮತ್ತೆ ಕಿವಿಕೊಟ್ಟು ಕೇಳಿ, 'ಇದಿ ಮಹಾಭಾರತಂ ಕಾದು' (ಇದು ಮಹಾಭಾರತ ಅಲ್ಲ)" ಎಂದು ರಾಮ್​​​ಗೋಪಾಲ್ ವರ್ಮಾ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಈ ಸೀರೀಸ್ ಹೇಗಿರಲಿದೆ ಎಂಬುದನ್ನು ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ.

ABOUT THE AUTHOR

...view details