ಕರ್ನಾಟಕ

karnataka

ಗಣಿ ಬರ್ತ್​​ಡೇ ಸ್ಪೆಷಲ್...​​​ ‘ಸಕತ್’​​​ ಬಳಿಕ ‘ರಾಯಗಢ’ದಲ್ಲಿ ಮಿಂಚಲು ತಯಾರಿ

By

Published : Jun 30, 2020, 7:46 PM IST

Updated : Jun 30, 2020, 7:53 PM IST

ಸಕತ್ ಚಿತ್ರದ ನಂತರ ಗಣಿ ಸುನಿ ಹ್ಯಾಟ್ರಿಕ್ ಕಾಂಬಿನೇಶನ್​​​ನಲ್ಲಿ ಸ್ಟೋರಿ ಆಫ್ ‘ರಾಯಗಢ’ ಟೈಟಲ್​ನಲ್ಲಿ ಮಾಸ್ ಸಿನಿಮಾ ಮಾಡೋಕೆ ಈ ಜೋಡಿ ರೆಡಿಯಾಗಿದೆ. ಅಲ್ಲದೆ ಚಿತ್ರಕ್ಕಾಗಿ ಗಣೇಶ್ 15 ದಿನಗಳ ಹಿಂದೆ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ.

Golden star ganesh next project Raigada movie first look released for his Birth day special
ಗಣಿ ಬರ್ತ್​​ಡೇ ಸ್ಪೆಷಲ್​​​ ‘ಸಕತ್’​​​ ಬಳಿಕ ‘ರಾಯಗಢ’ದಲ್ಲಿ ಮಿಂಚಲು ತಯಾರಿ

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಡಬಲ್ ಧಮಾಕ ಕಾದಿದೆ. ಹೌದು, ಜುಲೈ 2ರಂದು ಮಳೆ ಹುಡುಗನ ಹುಟ್ಟು ಹಬ್ಬಕ್ಕೆ ಸಿಂಪಲ್ ಸುನಿ ಕಾಂಬಿನೇಷನ್​​ನಲ್ಲಿ ಸೆಟ್ಟೇರಲಿರುವ "ಸಕತ್" ಚಿತ್ರದ ಪೋಸ್ಟರ್ ಲಾಂಚ್ ಮಾಡುವುದಾಗಿ ನಿರ್ದೇಶಕ ಸುನಿ ಘೋಷಿಸಿದ್ದರು.

ಅದರೆ ಈಗ ಎರಡು ದಿನ ಮುಂಚಿತವಾಗಿ ಗಣಿ ಫ್ಯಾನ್ಸ್​​ಗೆ ಸಿಂಪಲ್ ಸುನಿ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಚಮಕ್ ಚಿತ್ರದ ನಂತರ ಮತ್ತೊಮ್ಮೆ ಸಕತ್ ಚಿತ್ರದಲ್ಲಿ ಈಜೋಡಿ ಜೊತೆಯಾಗೋಕೆ ರೆಡಿಯಾಗಿತ್ತು. ಈಗ ಈ ಜೋಡಿ ಕಾಂಬಿನೇಷನಲ್ಲಿ ಮತ್ತೊಂದು ಮಾಸ್ ಚಿತ್ರವನ್ನು ಅನೌನ್ಸ್ ಮಾಡಿ, ಚಿತ್ರದ ಟೈಟಲ್ ಪೋಸ್ಟರ್ ಅನ್ನು ಸಹ ರಿವಿಲ್ ಮಾಡಿದ್ದಾರೆ.

ಸಕತ್ ಚಿತ್ರದ ನಂತರ ಗಣಿ-ಸುನಿ ಹ್ಯಾಟ್ರಿಕ್ ಕಾಂಬಿನೇಶನ್​​​ನಲ್ಲಿ ಸ್ಟೋರಿ ಆಫ್ ‘ರಾಯಗಢ’ ಟೈಟಲ್​ನಲ್ಲಿ ಮಾಸ್ ಸಿನಿಮಾ ಮಾಡೋಕೆ ಈ ಜೋಡಿ ರೆಡಿಯಾಗಿದೆ.

‘ರಾಯಗಢ’ ಚಿತ್ರದಲ್ಲಿ ಗಣೇಶ್ ಗಾಗಿಯೇ ನಿರ್ದೇಶಕ ಸಿಂಪಲ್ ಸುನಿ ಮಾಸ್ ಕಥೆ ಹೆಣೆದಿದ್ದು. ಗೋಲ್ಡನ್​ ಸ್ಟಾರ್​ ಹುಟ್ಟುಹಬ್ಬದ ಪ್ರಯುಕ್ತ ಸ್ಟೋರಿ ಆಫ್ ರಾಯಗಢದ ಫಸ್ಟ್ ಲುಕ್ ರಿವಿಲ್​ ಮಾಡಿದ್ದಾರೆ.

ಅಲ್ಲದೆ ಚಿತ್ರಕ್ಕಾಗಿ ಗಣೇಶ್ 15 ದಿನಗಳ ಹಿಂದೆ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ‘ಸಕತ್’ ಚಿತ್ರದ ಬಳಿಕ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ.

Last Updated :Jun 30, 2020, 7:53 PM IST

ABOUT THE AUTHOR

...view details