ಕರ್ನಾಟಕ

karnataka

ಪುಟಿನ್ ಜೊತೆ ಮಾತುಕತೆಗೆ ನಾನು ಸಿದ್ಧ - ವಿಫಲವಾದರೆ 3ನೇ ವಿಶ್ವ ಯುದ್ಧಕ್ಕೆ ದಾರಿ : ಝೆಲೆನ್ಸ್ಕಿ ಎಚ್ಚರಿಕೆ

By

Published : Mar 21, 2022, 9:48 AM IST

Russia Ukraine War  Ready for talks with Putin  Ukrainian President Volodymyr Zelenskyy  The Kyiv Independent  ರಷ್ಯಾ ಉಕ್ರೇನ್​ ಯುದ್ಧ  ಪುಟಿನ್ ಜೊತೆ ಮಾತುಕತೆಗೆ ನಾನು ಸಿದ್ಧ ಝೆಲೆನ್ಸ್ಕಿ  ದಿ ಕೀವ್ ಇಂಡಿಪೆಂಡೆಂಟ್  ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ವಿಫಲವಾದರೆ ಅದು ವಿಶ್ವ 3ನೇ ಯುದ್ಧ

ರಷ್ಯಾ - ಉಕ್ರೇನ್ ಯುದ್ಧ ಮುಂದುವರಿದಿದೆ. ಇದೇ ವೇಳೆ ಯುದ್ಧ ನಿಲ್ಲಿಸಲು ಸಂಧಾನ ಮಾತುಕತೆಗಳು ಜಾರಿಯಲ್ಲಿವೆ. ಈ ಮಧ್ಯೆ ಉಕ್ರೇನ್​ ಅಧ್ಯಕ್ಷ ಪುಟಿನ್​ ಜೊತೆ ನಾನು ಮಾತುಕತೆ ನಡೆಸಲು ಸಿದ್ಧವಾಗಿದ್ದೇನೆ. ಒಂದು ವೇಳೆ ನಮ್ಮಿಬ್ಬರ ಮಾತುಕತೆ ವಿಫಲವಾದ್ರೆ ಈ ಯುದ್ಧ ಸಂಪೂರ್ಣ ಜಾಗತಿಕ ಯುದ್ಧವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎಚ್ಚರಿಕೆ ನೀಡಿದ್ದಾರೆ.

ಕೀವ್( ಉಕ್ರೇನ್​​):ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧ. ಆದರೆ, ಮಾತುಕತೆ ವಿಫಲವಾದರೆ ಹೊಸ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಎಚ್ಚರಿಕೆ ನೀಡಿದ್ದಾರೆ.

ನಾನು ಪುಟಿನ್ ಜೊತೆ ಮಾತುಕತೆಗೆ ಸಿದ್ಧನಿದ್ದೇನೆ. ಆದರೆ, ಸಂಧಾನ ಪ್ರಯತ್ನಗಳು ವಿಫಲವಾದರೆ ಅದು 3ನೇ ವಿಶ್ವ ಸಮರ ಎಂದರ್ಥ ಎಂದು ಅಮೆರಿಕ ಟೆಲಿವಿಷನ್‌ಗೆ ನೀಡಿದ ಸಂದರ್ಶನದಲ್ಲಿ ಝೆಲೆನ್ಸ್ಕಿಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ ಈ ವಿಷಯ ಪುನರುಚ್ಚರಿಸಿ ದಿ ಕೀವ್ ಇಂಡಿಪೆಂಡೆಂಟ್ ಟ್ವೀಟ್ ಮಾಡಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನ್‌ನಲ್ಲಿ ಸಮರ ಕಾನೂನನ್ನು ವಿಸ್ತರಿಸುವ ಮಸೂದೆಗೆ ಸಹಿ ಹಾಕಿದ್ದಾರೆ. ಪ್ರಸ್ತುತ ಮಾರ್ಷಲ್ ಕಾನೂನನ್ನು ಮಾರ್ಚ್ 26 ರಿಂದ 30 ದಿನಗಳವರೆಗೆ ವಿಸ್ತರಿಸಿದೆ. ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ರಷ್ಯಾ ವಿಶೇಷ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದ ನಂತರ ಕೀವ್ ಸಮರ ಕಾನೂನು ಜಾರಿಗೆ ತಂದಿತ್ತು ಎಂದು ಉಕ್ರೇನ್ ಸಂಸತ್ತಿನ ಪತ್ರಿಕಾ ಸೇವೆ ತಿಳಿಸಿದೆ.

ಓದಿ:ಮುಂದಿನ 12 ಗಂಟೆಯಲ್ಲಿ ತೀವ್ರತೆ ಪಡೆದುಕೊಳ್ಳಲಿದೆ ಅಸನಿ ಚಂಡಮಾರುತ.. ಕರಾವಳಿ ಪ್ರದೇಶಗಳಿಗೆ ಎಚ್ಚರಿಕೆ!

ಮತ್ತೊಂದೆಡೆ, ರಷ್ಯಾದ ಮಿಲಿಟರಿ ಲಾಂಗ್​-ರೇಂಜ್​ ಹೈಪರ್ಸಾನಿಕ್ ಮತ್ತು ಕ್ರೂಸ್ ಕ್ಷಿಪಣಿಗಳೊಂದಿಗೆ ಉಕ್ರೇನಿಯನ್ ಮಿಲಿಟರಿ ನೆಲೆಗಳ ಮೇಲೆ ಹೊಸ ಸರಣಿಯ ದಾಳಿ ಆರಂಭಿಸಿದೆ. ಕಿನ್ಜಾಲ್ ಹೈಪರ್ಸಾನಿಕ್ ಕ್ಷಿಪಣಿಯನ್ನು ಮೈಕೊಲೈವ್​ ಕಪ್ಪು ಸಮುದ್ರದ ಬಂದರಿನ ಬಳಿಯ ಕೋಸ್ಟಿಯಾಂಟಿನಿವ್ಕಾದ ಮೇಲೆ ಉಡಾಯಿಸಿದ್ದು, ಇಂಧನ ಡಿಪೋವನ್ನು ಹೊಡೆದುರುಳಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೊರ್ ಕೊನಾಶೆಂಕೋವ್ ಹೇಳಿದ್ದಾರೆ.

ರಷ್ಯಾ ಕಿನ್ಜಾಲ್​ ಬಳಸಿ ನಮ್ಮ ಇಂಧನ ಡಿಪೋವನ್ನು ಹೊಡೆದುರುಳಿಸಲಾಗಿದೆ. ಇದರ ಶಬ್ದದ ವೇಗ 10 ಪಟ್ಟು ವೇಗದಲ್ಲಿರುತ್ತೆ. 2,000 ಕಿಲೋಮೀಟರ್ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಈ ಕ್ಷಿಪಣಿ ಹೊಂದಿದೆ. ಇದಕ್ಕೂ ಮುನ್ನ ದಿನ ಪಶ್ಚಿಮ ಉಕ್ರೇನ್‌ನ ಕಾರ್ಪಾಥಿಯನ್ ಪರ್ವತಗಳಲ್ಲಿನ ಡಿಲಿಯಾಟಿನ್‌ನಲ್ಲಿ ಯುದ್ಧ ಸಾಮಗ್ರಿ ಡಿಪೋವನ್ನು ನಾಶಮಾಡಲು ಕಿಂಜಾಲ್ ಅನ್ನು ಮೊದಲ ಬಾರಿಗೆ ಯುದ್ಧದಲ್ಲಿ ಬಳಸಲಾಯಿತು ಎಂದು ರಷ್ಯಾದ ಮಿಲಿಟರಿ ಹೇಳಿದೆ.

ABOUT THE AUTHOR

...view details