ಕರ್ನಾಟಕ

karnataka

ಇಟಲಿಯಲ್ಲಿ ಕಾರು ಅಪಘಾತಕ್ಕೊಳಗಾದ ಶಾರುಖ್ ಖಾನ್ ಅಭಿನಯದ ಸ್ವದೇಸ್​​​ ಚಿತ್ರನಟಿ - ಈಗ ಪರಿಸ್ಥಿತಿ ಹೇಗಿದೆ?!

By ETV Bharat Karnataka Team

Published : Oct 4, 2023, 2:29 PM IST

ಭಾರತೀಯ ನಟಿ ಗಾಯತ್ರಿ ಜೋಶಿ ದಂಪತಿ ಇಟಲಿಯಲ್ಲಿ ಕಾರು ಅಪಘಾತಕ್ಕೊಳಗಾಗಿದ್ದಾರೆ.

Gayatri Joshi met car accident
ಗಾಯತ್ರಿ ಜೋಶಿ ದಂಪತಿ ಕಾರು ಅಪಘಾತ

ಬಾಲಿವುಡ್​​ ಸೂಪರ್​ ಸ್ಟಾರ್ ಶಾರುಖ್ ಖಾನ್ ಅಭಿನಯದ ಸ್ವದೇಶ್​​ ಚಿತ್ರದಲ್ಲಿನ ಪಾತ್ರಕ್ಕಾಗಿ ಹೆಸರುವಾಸಿಯಾದ ನಟಿ ಗಾಯತ್ರಿ ಜೋಶಿ ಇಟಲಿಯಲ್ಲಿ ಕಾರು ಅಪಘಾತಕ್ಕೊಳಗಾಗಿದ್ದಾರೆ. ಭೀಕರ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ ಈ ಭೀಕರ ಅಪಘಾತದ ದೃಶ್ಯ.

ವೃದ್ಧ ದಂಪತಿ ಕೊನೆಯುಸಿರು: ಈ ಅಪಘಾತ ದೊಡ್ಡ ಮಟ್ಟದಲ್ಲಿ ಸಂಭವಿಸಿದ್ದು, ವೃದ್ಧ ದಂಪತಿ ಕೊನೆಯುಸಿರೆಳೆದಿದ್ದಾರೆ. ಮೃತರು ಹೊರದೇಶದವರು. ಭಾರತೀಯ ಚಿತ್ರರಂಗದಲ್ಲಿ ಕೆಲ ಕಾಲ ಗುರುತಿಸಿಕೊಂಡಿದ್ದ ನಟಿ ಗಾಯತ್ರಿ ಜೋಶಿ ಹಾಗೂ ಅವರ ಪತಿ ವಿಕಾಸ್ ಒಬೆರಾಯ್ ಅವರು ಸುರಕ್ಷಿತವಾಗಿದ್ದಾರೆ. ಅದೃಷ್ಟವಶಾತ್​, ದಂಪತಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂಬುದು ಖಚಿತವಾಗಿದೆ. ಮಾಹಿತಿ ತಿಳಿಸಿದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ದುರಂತದಲ್ಲಿ ಗಾಯತ್ರಿ ಜೋಶಿ ದಂಪತಿ ಪಾರು...ವರದಿಗಳ ಪ್ರಕಾರ, ಇಟಲಿಯ ಸಾರ್ಡಿನಿಯಾದಲ್ಲಿ (Sardinia) ಈ ಭೀಕರ ಅಪಘಾತ ಸಂಭವಿಸಿದೆ. ಐಶಾರಾಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸ್ವಿಟ್ಜರ್​ಲ್ಯಾಂಡ್​​​ ದಂಪತಿ, ಅಗ್ನಿ ಅವಘಢದಲ್ಲಿ ಸಾವನ್ನಪ್ಪಿದ್ದಾರೆ. ಗಾಡಿ ಹೊತ್ತಿ ಉರಿದ ಪರಿಣಾಮ ದಂಪತಿಯ ಅಸುನೀಗಿದರು. ಅಪಘಾತಕ್ಕೊಳಗಾದ ಮತ್ತೊಂದು ಗಾಡಿಯಲ್ಲಿ ಇದ್ದ ಗಾಯತ್ರಿ ಜೋಶಿ ಮತ್ತು ಅವರ ಪತಿ ಸಂಪೂರ್ಣ ಸುರಕ್ಷಿತರಾಗಿದ್ದಾರೆ. ಸ್ವತಃ ದಂಪತಿಯೇ ಸುದ್ದಿವಾಹಿನಿಯೊಂದಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಆ್ಯಕ್ಸಿಡೆಂಟ್​ ವಿಡಿಯೋ ವೈರಲ್​:ಲ್ಯಾಂಬೋರ್ಗಿನಿ (ಗಾಯತ್ರಿ ಅವರಿದ್ದ ಗಾಡಿ ಎನ್ನುವ ಮಾಹಿತಿ ಇದೆ) ಮತ್ತು ಫೆರಾರಿ ಗಾಡಿಗಳು ಏಕಕಾಲದಲ್ಲಿ ಕ್ಯಾಂಪರ್ ವ್ಯಾನ್ ಅನ್ನು ಹಿಂದಿಕ್ಕಲು ಪ್ರಯತ್ನಿಸಿದ ವೇಳೆ ಅಪಘಾತ ಸಂಭವಿಸಿದೆ. ಫೆರಾರಿಯಲ್ಲಿ ಬೆಂಕಿ ಹೊತ್ತಿದ್ದು, ವ್ಯಾನ್ ಪಲ್ಟಿಯಾಯಿತು. ಕೆಲ ವಾಹನಗಳು ಈ ಅಪಘಾತದಲ್ಲಿ ನುಜ್ಜುಗುಜ್ಜಾದವು. ಈ ಘಟನೆಯು ಸಾರ್ಡಿನಿಯಾ ಸೂಪರ್‌ಕಾರ್ ಟೂರ್‌ನಲ್ಲಿ ಸಂಭವಿಸಿದೆ. ಐಷಾರಾಮಿ ಕಾರುಗಳು ಟೆಯುಲಾಡಾದಿಂದ ಓಲ್ಬಿಯಾಕ್ಕೆ ಪ್ರಯಾಣ ನಡೆಸುತ್ತವೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಭಾರತದ ದಂಪತಿ ಸುರಕ್ಷಿತವಾಗಿದ್ದಾರೆ. ಅಪಘಾತದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ:ಸೆಟ್ಟೇರಿತು ರಜನಿಕಾಂತ್​ ಮುಖ್ಯಭೂಮಿಕೆಯ 'ತಲೈವರ್​​ 170'...ಅಭಿಮಾನಿಗಳಲ್ಲಿ ಕುತೂಹಲ

ನಟಿ ಗಾಯತ್ರಿ ಜೋಶಿ ಕುರಿತು..2000ರಲ್ಲಿ ಫೆಮಿನಾ ಮಿಸ್ ಇಂಡಿಯಾ ಇಂಟರ್​ ನ್ಯಾಷನಲ್​ ಪ್ರಶಸ್ತಿಯನ್ನು ಗೆದ್ದ ನಂತರ ಗಾಯತ್ರಿ ಜನಪ್ರಿಯರಾದರು. ಸಾಕಷ್ಟು ಮೆಚ್ಚು ಸ್ವೀಕರಿಸಿದ 2004ರ ಸಿನಿಮಾ ಸ್ವದೇಸ್‌ ಮೂಲಕ ನಟನೆ ಪ್ರಾರಂಭಿಸಿದರು. ಬಾಲಿವುಡ್​ ಕಿಂಗ್​ ಖಾನ್​ ಶಾರುಖ್​​ ಜೊತೆ ಗಾಯತ್ರಿ ಅವರು ಗೀತಾ ಪಾತ್ರದಲ್ಲಿ ಕಾಣಿಸಿಕೊಂಡರು. ತಮ್ಮ ಚೊಚ್ಚಲ ಚಿತ್ರದಲ್ಲಿನ ಅಭಿನಯಕ್ಕಾಗಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರೂ ಗಾಯತ್ರಿ ಅವರು ಸಿನಿಮಾಗಳಿಂದ ದೂರವಿರಲು ನಿರ್ಧಾರ ಕೈಗೊಂಡರು. 2005 ರಲ್ಲಿ ಉದ್ಯಮಿ ವಿಕಾಸ್ ಒಬೆರಾಯ್ ಅವರನ್ನು ಮದುವೆ ಆಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ:ಧರ್ಮಣ್ಣನ 'ರಾಜಯೋಗ' ಆರಂಭ...ಮಹಿಳೆಯರಿಂದ ಟ್ರೇಲರ್​ ಅನಾವರಣ

ABOUT THE AUTHOR

...view details