ಕರ್ನಾಟಕ

karnataka

ತೆಲುಗು ನಟ ಸತ್ಯದೇವ್ ಜೊತೆ ಡಾಲಿ ಧನಂಜಯ್​ ಸಿನಿಮಾ; ಶೀಘ್ರದಲ್ಲೇ 'ಝೀಬ್ರಾ' ತೆರೆಗೆ

By ETV Bharat Karnataka Team

Published : Nov 20, 2023, 2:02 PM IST

Daali Dhananjay starrer next movie Zebra: ಟಾಲಿವುಡ್​ ನಟ ಸತ್ಯದೇವ್​ ಮತ್ತು ಡಾಲಿ ಧನಂಜಯ್​ ಕಾಂಬೋದಲ್ಲಿ 'ಝೀಬ್ರಾ' ಎಂಬ ಪ್ಯಾನ್​ ಇಂಡಿಯಾ ಸಿನಿಮಾ ತಯಾರಾಗುತ್ತಿದೆ.

Daali Dhananjay next movie Zebra with tollywood actor sathyadev
ತೆಲುಗು ನಟ ಸತ್ಯದೇವ್ ಜೊತೆ ಡಾಲಿ ಧನಂಜಯ್​ ಸಿನಿಮಾ

ಸ್ಯಾಂಡಲ್​ವುಡ್​ ಮಾತ್ರವಲ್ಲದೇ ತೆಲುಗು ಸಿನಿಮಾ ರಂಗದಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿರುವ ನಟ ಡಾಲಿ ಧನಂಜಯ್​. 'ಪುಷ್ಪ 2' ಸಿನಿಮಾ ಶೂಟಿಂಗ್​ ನಂತರ ಇದೀಗ ಸೈಲೆಂಟ್​ ಆಗಿಯೇ ಮತ್ತೊಂದು ತೆಲುಗು ಚಿತ್ರದ ಶೂಟಿಂಗ್​ ಮುಗಿಸಿದ್ದಾರೆ. ಟಾಲಿವುಡ್​ ನಟ ಸತ್ಯದೇವ್​ ಮತ್ತು ಧನಂಜಯ್​ ಕಾಂಬಿನೇಷನ್‌ನಲ್ಲಿ 'ಝೀಬ್ರಾ' ಎಂಬ ಪ್ಯಾನ್​ ಇಂಡಿಯಾ ಸಿನಿಮಾ ತಯಾರಾಗುತ್ತಿದೆ. ಇದರ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಆರಂಭವಾಗಿವೆ.

'ಝೀಬ್ರಾ' ಮಾಸ್​ ಎಂಟರ್​ಟೈನರ್​ ಸಿನಿಮಾ. ಚಿತ್ರದಲ್ಲಿ ಡಾಲಿ ನೆಗೆಟಿವ್​ ಶೇಡ್​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಇಬ್ಬರೂ ಕೂಡ ಈ ಚಿತ್ರದಲ್ಲಿ ನಾಯಕರಾಗಿದ್ದು, ಎರಡು ಸ್ಟಾರ್​ ನಟರ 26ನೇ ಸಿನಿಮಾ ಅನ್ನೋದು ವಿಶೇಷ.

ಚಿತ್ರವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದು, ಕಥೆ, ಚಿತ್ರಕಥೆ ಕೂಡ ಅವರದ್ದೇ. 'ಝೀಬ್ರಾ'ಗೆ ಕೆಜಿಎಫ್​ ಚಿತ್ರ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಪ್ರಿಯಾ ಭವಾನಿ ಶಂಕರ್‌, ಸತ್ಯರಾಜ್‌, ಸುನೀಲ್‌ ವರ್ಮ, ಜೆನಿಫರ್‌, ಸುರೇಶ್‌ ಚಂದ್ರ ಮೆನನ್‌, ಕಲ್ಯಾಣಿ ನಟರಾಜ್‌ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಝೀಬ್ರಾ ತೆಲುಗು ಮತ್ತು ಕನ್ನಡದಲ್ಲಿ ಮೂಡಿ ಬರಲಿದೆ.

ತೆಲುಗು ನಟ ಸತ್ಯದೇವ್ ಜೊತೆ ಡಾಲಿ ಧನಂಜಯ್​ ಸಿನಿಮಾ

ಹ್ಯಾಟ್ರಿಕ್​ ಗೆಲುವು:ಕನ್ನಡ ಚಿತ್ರರಂಗದಲ್ಲಿ ನಟರಾಕ್ಷಸ ಜನಪ್ರಿಯತೆಯ ಡಾಲಿ ಧನಂಜಯ್​ ನಟನೆಯ ಜೊತೆಗೆ ಚಿತ್ರ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಜೊತೆ ತಮ್ಮದೇ ಡಾಲಿ ಪಿಕ್ಚರ್ಸ್​ ಸಂಸ್ಥೆಯಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ ನಿರ್ಮಾಪಕರಾಗಿ ಸಕ್ಸಸ್​ ಕಂಡಿದ್ದ ಧನಂಜಯ್​ ಅವರ ಮತ್ತೊಂದು ಚಿತ್ರವೂ ಬ್ಲಾಕ್​ಬಸ್ಟರ್​ ಹಿಟ್​ ಆಗಿದೆ.

'ಬಡವ ರಾಸ್ಕಲ್' ಸಿನಿಮಾದಲ್ಲಿ ನಟನೆಯ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದ ಡಾಲಿ, ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸುವ ಜೊತೆಗೆ ಮೊದಲ ಪ್ರಯತ್ನದಲ್ಲೇ ದೊಡ್ಡ ಮಟ್ಟದ ಗೆಲುವು ದಾಖಲಿಸಿದರು. ಅದೇ ಹುಮ್ಮಸ್ಸಿನಲ್ಲಿ ಡಾಲಿ ಮತ್ತೊಂದು ಸಿನಿಮಾಗೆ ಬಂಡವಾಳ ಹೂಡಿ ಗೆಲುವು ಕಂಡರು. ಡಾಲಿ ನಿರ್ಮಾಣದಲ್ಲಿ ಮೂಡಿಬಂದ ಎರಡನೇ ಸಿನಿಮಾ 'ಹೆಡ್ ಬುಷ್'. ಇದು ಕೂಡ ಸೂಪರ್​ ಹಿಟ್​ ಆಯಿತು. ಇದಾಗಿ ಮೂರನೇ ಸಿನಿಮಾ 'ಟಗರು ಪಲ್ಯ' ಕೂಡ ಬ್ಲಾಕ್​ಬಸ್ಟರ್​ ಆಗಿದೆ. ಈ ಮೂಲಕ ನಿರ್ಮಾಣದಲ್ಲಿ ದಾಖಲೆ ಬರೆದಿರುವ ಡಾಲಿ ಹ್ಯಾಟ್ರಿಕ್​ ಗೆಲುವು ದಾಖಲಿಸಿದ್ದಾರೆ.

ಇದನ್ನೂ ಓದಿ:'ಟಗರು ಪಲ್ಯ'ಗೆ ಫುಲ್​ ಡಿಮ್ಯಾಂಡ್​​; ಸಿನಿಮಾ ರಿಮೇಕ್​ಗೂ ಹೆಚ್ಚಾಯ್ತು ಬೇಡಿಕೆ

ABOUT THE AUTHOR

...view details