ಕರ್ನಾಟಕ

karnataka

100 ಕೋಟಿಯತ್ತ ರಶ್ಮಿಕಾ ಸಿನಿಮಾ: ರಣ್​​ಬೀರ್​​ ವೃತ್ತಿಜೀವನದಲ್ಲಿ ಹೊಸ ದಾಖಲೆ ಸೃಷ್ಟಿಗೆ 'ಅನಿಮಲ್'​ ಸಜ್ಜು!

By ETV Bharat Karnataka Team

Published : Dec 1, 2023, 2:42 PM IST

ರಶ್ಮಿಕಾ ಮಂದಣ್ಣ ಮತ್ತು ರಣ್​ಬೀರ್​ ಕಪೂರ್​​ ಮುಖ್ಯಭೂಮಿಕೆಯ 'ಅನಿಮಲ್'​ ಸಿನಿಮಾ ಮೊದಲ ದಿನವೇ ಬರೋಬ್ಬರಿ 100 ಕೋಟಿ ರೂ. ಗಳಿಸುವ ಸಾಧ್ಯತೆಗಳಿವೆ.

ranbir rashmika animal
ರಣ್​ಬೀರ್ ರಶ್ಮಿಕಾ ಅನಿಮಲ್​​

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಹುನಿರಿಕ್ಷಿತ ಸಿನಿಮಾ ಅನಿಮಲ್ ಇಂದು ತೆರೆಗಪ್ಪಳಿಸಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಪಾಸಿಟಿವ್​​ ರೆಸ್ಪಾನ್ಸ್​ ಸ್ವೀಕರಿಸಿದೆ. ಮತ್ತೊಂದೆಡೆ ವಿಕ್ಕಿ ಕೌಶಲ್ ಅಭಿನಯದ ಸ್ಯಾಮ್ ಬಹದ್ದೂರ್ ಸಿನಿಮಾ ಕೂಡ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್​​ ಪೈಪೋಟಿ ಏರ್ಪಟ್ಟಿದೆ.

ಎರಡೂ ಸಿನಿಮಾಗಳ ಸದ್ದು ಜೋರಾಗೇ ಕೇಳಿ ಬರುತ್ತಿದೆ. ರಣ್​​ಬೀರ್‌ ಕಪೂರ್​​ ವೃತ್ತಿಜೀವನಲ್ಲಿ ಮತ್ತೊಂದು ದೊಡ್ಡ ಯಶಸ್ಸು ಸಿಗುವ ಲಕ್ಷಣಗಳು ಗೋಚರಿಸಿವೆ. ಗ್ಯಾಂಗ್​ಸ್ಟರ್ ಡ್ರಾಮಾ, ತಂದೆ ಮಗನ ಸಂಬಂಧದಲ್ಲಿನ ಅಂತರವನ್ನು ಎತ್ತಿ ಹಿಡಿದಿದೆ. ಆ್ಯಕ್ಷನ್​ ಪ್ಯಾಕ್ಡ್ ಸಿನಿಮಾ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರ ಗಮನ ಸೆಳೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ಆರಂಭಿಕ ಪ್ರತಿಕ್ರಿಯೆಗಳು ಸಹ ಸಕಾರಾತ್ಮಕವಾಗೇ ಇದೆ. ಬಾಕ್ಸ್​ ಆಫೀಸ್​ ಅಂಕಿ ಅಂಶ ರಣ್​ಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ವೃತ್ತಿಜೀವನದಲ್ಲಿ ಮೈಲಿಗಲ್ಲು ಸ್ಥಾಪಿಸಲಿದೆ ಎಂದು ಕೆಲ ಸಿನಿ ಪಂಡಿತರು ಅಂದಾಜಿಸಿದ್ದಾರೆ.

ಬಾಲಿವುಡ್​ ಸೂಪರ್​ ಸ್ಟಾರ್​ ರಣ್​​ಬೀರ್ ಕಪೂರ್ ತಮ್ಮ ಹಿಂದಿನ ಸಿನಿಮಾಗಳ ಯಶಸ್ಸು ಮೀರಿ ಮೈಲಿಗಲ್ಲು ಸಾಧಿಸಲು ಸಿದ್ಧರಾಗಿದ್ದಾರೆ. ನಟನ ವೃತ್ತಿಜೀವನದಲ್ಲಿ 'ಬ್ರಹ್ಮಾಸ್ತ್ರ' ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ. ಅನಿಮಲ್​​ ಬ್ರಹ್ಮಾಸ್ತ್ರವನ್ನು ಹಿಂದಿಕ್ಕುವ ಸಾಧ್ಯತೆಗಳಿವೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿರುವುದರಿಂದ ಸಿನಿಮಾ ಮೇಲಿನ ಉತ್ಸಾಹ, ನಿರೀಕ್ಷೆ, ಕುತೂಹಲ ಗರಿಗೆದರಿವೆ. ಅಲ್ಲದೇ, ರಶ್ಮಿಕಾ ಮತ್ತು ರಣ್​ಬೀರ್​​ ಅವರಂತಹ ಸ್ಟಾರ್ ನಟರ ಸಿನಿಮಾ ಆದ ಹಿನ್ನೆಲೆ ಸದ್ದು ಜೋರಾಗೇ ಕೇಳಿ ಬರುತ್ತಿದೆ. ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಿನಿಮಾ ಮೊದಲ ದಿನ ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂ. ಮೀರಲಿದೆ. ಭಾರತದಲ್ಲೇ ಬರೋಬ್ಬರಿ 60 ಕೋಟಿ ರೂ.ಗಳ ವ್ಯವಹಾರ ನಡೆಸಲಿದೆ ಎಂದು ಚಿತ್ರರಂಗದ ತಜ್ಞರು ಊಹಿಸಿದ್ದಾರೆ.

ಒರ್ಮ್ಯಾಕ್ಸ್ ಮಾಹಿತಿ ಪ್ರಕಾರ, ಅನಿಮಲ್‌ ಸಿನಿಮಾದ ಹಿಂದಿ ಆವೃತ್ತಿಯೊಂದೇ ಭಾರತದಲ್ಲಿ 48.7 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 9 ಕೋಟಿ ರೂ. ವ್ಯವಹಾರ ನಡೆಯಲಿದೆ. ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ಸಿನಿಮಾಗೆ ಪಾಸಿಟಿವ್​ ವಿಮರ್ಷೆ ಕೊಟ್ಟಿದ್ದು, "Animal mania" ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ:ಅನಿಮಲ್ ಬಿಡುಗಡೆ: ಪ್ರೇಕ್ಷಕರ ಮನ ಗೆದ್ದ ರಣಬೀರ್​ ಕಪೂರ್​; ನೆಟ್ಟಿಗರು ಹೇಳಿದ್ದೇನು?

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಅಡ್ವಾನ್ಸ್ ಟಿಕೆಟ್ಸ್ ಮಾರಾಟ ಮಾಡಿರುವ ಸಿನಿಮಾಗಳಲ್ಲಿ ಒಂದಾಗಿದೆ. ಬಾಹುಬಲಿ 2, ಜವಾನ್, ಪಠಾಣ್​​, ಮತ್ತು ಕೆಜಿಎಫ್ 2 ನಂತಹ ಸಿನಿಮಾಗಳ ಬಳಿಕ 'ಅನಿಮಲ್​' ಉತ್ತಮ ವ್ಯವಹಾರ ನಡೆಸಿರುವ ಚಿತ್ರವಾಗಿ ಹೊರಹೊಮ್ಮಿದೆ. ಸಿನಿಮಾ ಬಿಡುಗಡೆಗೂ ಮುನ್ನ ಆನ್​ಲೈನ್​ನಲ್ಲಿ ಹೆಚ್ಚು ಟಿಕೆಟ್ಸ್ ಸೇಲ್​ ಆಗಿರುವ ಐದನೇ ಚಿತ್ರ 'ಅನಿಮಲ್​'. ಸಿನಿಮಾ ಬಿಡುಗಡೆಯ ಹಿಂದಿನ ದಿನ ಬರೋಬ್ಬರಿ 5 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ.

ಇದನ್ನೂ ಓದಿ:'ಸ್ಯಾಮ್​​ ಬಹದ್ದೂರ್': ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡಿದ ದೇಶದ ಮೊದಲ ಫೀಲ್ಡ್‌ ಮಾರ್ಷಲ್ ಕಹಾನಿ

ರಣ್​ಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ ತೆರೆಕಂಡ ಮೊದಲ ದಿನ ಭಾರತದಲ್ಲಿ 36 ಕೋಟಿ ರೂಪಾಯಿ ಗಳಿಸಿತ್ತು. ಇದು ನಟನ ವೃತ್ತಿಜೀವನದಲ್ಲೇ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾವಾಗಿದೆ. ಅನಿಮಲ್ ಭಾರತದಲ್ಲಿ 60 ಕೋಟಿ ರೂ. ಸಮೀಪಿಸುವ ನಿರೀಕ್ಷೆ ಇದೆ.​ ಚಿತ್ರದಲ್ಲಿ ಅನಿಲ್​ ಕಪೂರ್ ಮತ್ತು ಬಾಬಿ ಡಿಯೋಲ್​ ಸಹ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ABOUT THE AUTHOR

...view details