ಕರ್ನಾಟಕ

karnataka

ನಟಿ ಊರ್ವಶಿ ಧೋಲಾಕಿಯಾ ಕಾರಿಗೆ ಡಿಕ್ಕಿ ಹೊಡೆದ ಶಾಲಾ ಬಸ್!

By

Published : Feb 5, 2023, 3:49 PM IST

ಶನಿವಾರದಂದು ನಟಿ ಊರ್ವಶಿ ಧೋಲಾಕಿಯಾ ಕಾರು ಅಪಘಾತ ಸಂಭವಿಸಿದೆ.

Actress Urvashi Dholakia
ನಟಿ ಊರ್ವಶಿ ಧೋಲಾಕಿಯಾ

ಮುಂಬೈ (ಮಹಾರಾಷ್ಟ್ರ):ಭಾರತೀಯ ಕಿರುತೆರೆ ನಟಿ ಮತ್ತು ಬಿಗ್ ಬಾಸ್ ಸೀಸನ್ 6 ವಿಜೇತೆ ಊರ್ವಶಿ ಧೋಲಾಕಿಯಾ (Urvashi Dholakia) ಕಾರು ಅಪಘಾತಕ್ಕೀಡಾಗಿದೆ. ಶನಿವಾರ ಮುಂಬೈನಲ್ಲಿ ಈ ಕಾರು ಅಪಘಾತ ನಡೆದಿದೆ. ನಟಿ ಊರ್ವಶಿ ಧೋಲಾಕಿಯಾ ತಮ್ಮ ಶೂಟಿಂಗ್‌ ಸೆಟ್​ಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೀರಾ ರೋಡ್ ಫಿಲ್ಮ್ ಸ್ಟುಡಿಯೋಗೆ ಹೋಗುತ್ತಿದ್ದ ಸಂದರ್ಭ ಕಾಶಿಮಿರಾದಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಹಿಂದಿನಿಂದ ಊರ್ವಶಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.

ಪ್ರಾಣಾಪಾಯದಿಂದ ಪಾರಾದ ಊರ್ವಶಿ ಧೋಲಾಕಿಯಾ: ಅದೃಷ್ಟವಶಾತ್ ಕಾರು ಅಪಘಾತದಲ್ಲಿ ಊರ್ವಶಿ ಧೋಲಾಕಿಯಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೊಡ್ಡ ಅವಘಡ ಸಂಭವಿಸಿಲ್ಲ. ಇನ್ನು, ಊರ್ವಶಿ ಧೋಲಾಕಿಯಾ ಪೊಲೀಸ್ ಠಾಣೆಯಲ್ಲಿ ಶಾಲಾ ಬಸ್ ಚಾಲಕನ ವಿರುದ್ಧ ಯಾವುದೇ ಪ್ರಕರಣವನ್ನು ಸಹ ದಾಖಲಿಸಲಿಲ್ಲ. ಕಾಶಿಮಿರಾ ಪೊಲೀಸರು ನಟಿಯ ಕಾರು ಚಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ನಟಿ ಊರ್ವಶಿ ಧೋಲಾಕಿಯಾ

ಕೊಮೊಲಿಕಾ ಪಾತ್ರಕ್ಕೆ ಹೆಸರುವಾಸಿ: ಕಸೌತಿ ಝಿಂದಗಿ ಕೇ ಸಿರಿಯಲ್​ನಲ್ಲಿ ಜನಪ್ರಿಯ ಕೊಮೊಲಿಕಾ ಪಾತ್ರಕ್ಕೆ ಹೆಸರುವಾಸಿಯಾಗಿರುವ ನಟಿ ಊರ್ವಶಿ ಧೋಲಾಕಿಯಾ ಅವರು ಚಂದ್ರಕಾಂತ: ಏಕ್ ಮಾಯಾವಿ ಪ್ರೇಮ್ ಗಾಥಾ, ಬಯ್ತಾಬ್ ದಿಲ್ ಕೀ ತಮನ್ನಾ ಹೈ ಮತ್ತು ಕಭಿ ಸೌತಾನ್ ಕಭಿ ಸಹೇಲಿಯಂತಹ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪಾ ಇಂಪಾಸಿಬಲ್‌ನಲ್ಲಿಯೂ ಪಾತ್ರ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಊರ್ವಶಿ ಧೋಲಾಕಿಯಾ ಇತ್ತೀಚೆಗೆ ವೆಬ್ ಸೀರೀಸ್ ಅವೈಧ್ (Avaidh)ನಲ್ಲಿ ಕಾಣಿಸಿಕೊಂಡಿದ್ದರು. ಈ ಸರಣಿಯು ಅಕ್ರಮ ಸಂಬಂಧಗಳ ಸಾಮಾನ್ಯ ವಿಷಯದ ಆಧಾರದ ಮೇಲೆ ಎಂಟು ವಿಭಿನ್ನ ಸಣ್ಣ ಕಥೆಗಳನ್ನು ಒಳಗೊಂಡಿದೆ. ಇದರಲ್ಲಿ ಊರ್ವಶಿ ತಮ್ಮ ಉದ್ಯೋಗಿ ವಿಕ್ಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಕೇತ್ಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಊರ್ವಶಿ ಧೋಲಾಕಿಯಾ ವೃತ್ತಿಜೀವನ:ಊರ್ವಶಿ ತಮ್ಮ 6ನೇ ವಯಸ್ಸಿನಲ್ಲಿಯೇ ಟಿವಿ ಜಾಹೀರಾತೊಂದರಲ್ಲಿ ನಟಿಸಿದ್ದರು. ಈ ಜಾಹೀರಾತಿನ ಮೂಲಕ ನಟನೆಗೂ ಎಂಟ್ರಿ ಕೊಟ್ಟರು. ಬಾಲ್ಯದಲ್ಲಿ ಅವರು ದೂರದರ್ಶನ ಟಿವಿ ಶೋ 'ಶ್ರೀಕಾಂತ್' ನಲ್ಲಿ ರಾಜಲಕ್ಷ್ಮಿಯಾಗಿ ಕಾಣಿಸಿಕೊಂಡರು. ಇದರ ನಂತರ ಅವರು 'ದೇಖ್ ಭಾಯಿ ದೇಖ್' (1993) ಮತ್ತು 'ವಕ್ತ್ ಕಿ ರಾಫ್ತಾರ್' ಟಿವಿ ಶೋಗಳಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ:'ಬಾಯ್ಕಾಟ್​ ಭಯದ ನಡುವೆ ಪ್ರೇಕ್ಷಕರು ಗೆಲ್ಲಿಸಿಕೊಟ್ಟರು': ಪಠಾಣ್​​ ನಿರ್ದೇಶಕ ಸಿದ್ಧಾರ್ಥ್ ಆನಂದ್

ಉತ್ತಮ ನಟನೆಯಿಂದಾಗಿ 'ಕಸೌತಿ ಝಿಂದಗಿ ಕೇ' ಟಿವಿ ಶೋನಲ್ಲಿ ಊರ್ವಶಿ ಅವರಿಗೆ ಕೊಮೊಲಿಕಾ ಪಾತ್ರ ಸಿಕ್ಕಿತು. ಈ ಶೋನಲ್ಲಿ ಅವರು ಖಳನಾಯಕರ ಪಾತ್ರ ನಿರ್ವಹಿಸಿದ್ದಾರೆ. ಶೋನಲ್ಲಿ ಅವರ ನೋಟವು ತುಂಬಾ ಆಕರ್ಷಕವಾಗಿತ್ತು. ಅವರ ಮೇಕಪ್ ಮತ್ತು ಡ್ರೆಸ್ಸಿಂಗ್ ಸೆನ್ಸ್ ಬಹಳ ಚರ್ಚೆಯಾಗಿತ್ತು. ಇದಾದ ನಂತರ ಊರ್ವಶಿ 'ನಾಗಿನ್' (2015), 'ನಾಗಿನ್-6' (2022) ಮತ್ತು 'ಚಂದ್ರಕಾಂತ' (2017-18) ನಂತಹ ಅನೇಕ ಶೋಗಳಲ್ಲಿ ಕಾಣಿಸಿಕೊಂಡರು. ಅಲ್ಲದೇ, ಊರ್ವಶಿ ಧೋಲಾಕಿಯಾ ಬಾಲಿವುಡ್​ ಸೂಪರ್​ಸ್ಟಾರ್ ಸಲ್ಮಾನ್​​ ಖಾನ್​ ನಡೆಸಿಕೊಡುವ 'ಬಿಗ್ ಬಾಸ್' ರಿಯಾಲಿಟಿ ಶೋ ಸೀಸನ್​ 6ರ ವಿಜೇತರೂ ಆಗಿದ್ದಾರೆ.

ಇದನ್ನೂ ಓದಿ:'3 ಈಡಿಯಟ್ಸ್' ಪಾರ್ಟ್-2ಗಾಗಿ ಅಭಿಮಾನಿಗಳ ಬೇಡಿಕೆ; 'ಕಂಗ್ರಾಜುಲೇಷನ್ಸ್‌' ಎಂದ ಶರ್ಮನ್​ ಜೋಶಿ

ABOUT THE AUTHOR

...view details