ETV Bharat / entertainment

'3 ಈಡಿಯಟ್ಸ್' ಪಾರ್ಟ್-2ಗಾಗಿ ಅಭಿಮಾನಿಗಳ ಬೇಡಿಕೆ; 'ಕಂಗ್ರಾಜುಲೇಷನ್ಸ್‌' ಎಂದ ಶರ್ಮನ್​ ಜೋಶಿ

author img

By

Published : Feb 5, 2023, 10:55 AM IST

2009ರಲ್ಲಿ ಬಿಡುಗಡೆಯಾದ 'ತ್ರೀ ಈಡಿಯಟ್ಸ್' ಸಿನಿಮಾ ಭಾರಿ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾದ ಪಾರ್ಟ್​ 2 ಗಾಗಿ ಅಭಿಮಾನಿಗಳು ನಟರಲ್ಲಿ ಬೇಡಿಕೆ ಇಟ್ಟಿದ್ದಾರೆ.

3 idiots
3 ಈಡಿಯಟ್ಸ್

ಸ್ನೇಹ ಬಾಂಧವ್ಯವನ್ನು ಸುಂದರವಾಗಿ ಹೆಣೆದಿರುವ ಬಾಲಿವುಡ್​ ಸೂಪರ್‌ಹಿಟ್​ ಸಿನಿಮಾ 'ತ್ರೀ ಈಡಿಯಟ್ಸ್'. ನಟರಾದ ಅಮೀರ್​ ಖಾನ್​, ಶರ್ಮನ್​ ಜೋಶಿ ಮತ್ತು ಆರ್.ಮಾಧವನ್ ಅಭಿನಯಿಸಿರುವ ಸಿನಿಮಾ ಇದಾಗಿತ್ತು. ಚಿತ್ರದ ಹಾಡುಗಳಂತೂ ಇಂದಿಗೂ ಸಿನಿಮಾಪ್ರಿಯರ ಹಾಟ್‌ ಫೇವರಿಟ್‌ ಆಗಿವೆ. ಇದೀಗ ಈ ಮೂವರು 14 ವರ್ಷದ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು 'ತ್ರೀ ಈಡಿಯಟ್ಸ್' ಮುಂದುವರಿದ ಭಾಗಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಶರ್ಮನ್​ ಜೋಶಿ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, 'ಕಂಗ್ರಾಜುಲೇಷನ್ಸ್'​ ಸಿನಿಮಾವನ್ನು 3 ಈಡಿಯಟ್ಸ್ ಪ್ರೊಮೋಟ್​ ಮಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಈ ದೃಶ್ಯದಲ್ಲಿ ಮೂವರು ನಟರು ಕ್ರಿಕೆಟ್​ ಮೈದಾನದಲ್ಲಿ ಕಾಣಿಸಿಕೊಂಡಿದ್ದು, ಕೆಂಪು ಬಣ್ಣದ ಸಮವಸ್ತ್ರ ಧರಿಸಿದ್ದಾರೆ.

'ಕಂಗ್ರಾಜುಲೇಷನ್ಸ್'​ಗೆ ಥ್ಯಾಂಕ್ಸ್​: ವಿಡಿಯೋದಲ್ಲಿ ಶರ್ಮನ್​ ಅವರು ಚಿತ್ರದ ಬಗ್ಗೆ ಮಾತನಾಡುತ್ತಿದ್ದರು. ಅಷ್ಟರಲ್ಲಿ ಮಾಧವನ್​ ಬಂದು ಅವರ ಮಾತಿಗೆ ಅಡ್ಡಿಪಡಿಸಿದರು. ಅವರು ಮತ್ತೆ ತಮ್ಮ ಚಿತ್ರದ ಬಗ್ಗೆ ಮಾತನಾಡಲು ಪ್ರಾರಂಭಿಸುವಾಗ ಅಮೀರ್​ ಖಾನ್​ ಎಂಟ್ರಿ ಕೊಟ್ಟರು. ಬಳಿಕ ಚಿತ್ರದ ಶೀರ್ಷಿಕೆಯ ಬಗ್ಗೆ ಇಬ್ಬರು ಗೊಂದಲಕ್ಕೊಳಗಾದರು ಮತ್ತು ಶರ್ಮನ್​ ಅವರು ತಮ್ಮನ್ನು ಅಭಿನಂದಿಸುತ್ತಿದ್ದಾರೆ ಎಂದು ಭಾವಿಸಿ ಥ್ಯಾಂಕ್ಸ್​ ಹೇಳಿದರು. ಇದು ಅಭಿಮಾನಿಗಳ ನಗುವಿಗೆ ಕಾರಣವಾಯಿತು.

ಇದನ್ನೂ ಓದಿ: 5,000 ಕೋಟಿ ಪ್ರೀತಿ, 3,000 ಕೋಟಿ ಮೆಚ್ಚುಗೆ, 2 ಬಿಲಿಯನ್ ಸ್ಮೈಲ್ಸ್ .. ಏನಿದು ಶಾರುಖ್​​​​​​​​​ ಕೊಟ್ಟ ಉತ್ತರ!

'ಗೋಲ್ಮಾಲ್'​ ನಟ ವಿಡಿಯೋವನ್ನು ಹಂಚಿಕೊಂಡ ಕೂಡಲೇ ನೆಟ್ಟಿಗರು ಕೆಂಪು ಹೃದಯಗಳು ಮತ್ತು ಬೆಂಕಿಯ ಇಮೋಜಿ ಕಳುಹಿಸಿ ಕಮೆಂಟ್​ ವಿಭಾಗವನ್ನು ತುಂಬಿದ್ದಾರೆ. ಅಲ್ಲದೇ "ಮೂವರನ್ನು ಒಟ್ಟಿಗೆ ಕಂಡು ಬಹಳ ಸಂತೋಷವಾಯಿತು. ನಾವು 'ತ್ರಿ ಈಡಿಯಟ್ಸ್ ಪಾರ್ಟ್​ 2' ಗಾಗಿ ಕಾಯುತ್ತಿದ್ದೇವೆ" ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ಇದಕ್ಕೆ ಅತಿ ಹೆಚ್ಚು ಜನರು ಒಪ್ಪಿಗೆಯನ್ನಿತ್ತು ಪ್ರತಿಕ್ರಿಯಿಸಿದ್ದಾರೆ. ಗೆಳೆತನದ ಸುಂದರ ಬಾಂಧವ್ಯವನ್ನು ಕಟ್ಟಿಕೊಟ್ಟ ಈ ಸಿನಿಮಾ ಮತ್ತೆ ತೆರೆ ಮೇಲೆ ಮೂಡಿಬರಲು ಫ್ಯಾನ್ಸ್​ ಹವಣಿಸುತ್ತಿದ್ದಾರೆ. ಇಂದಿಗೂ ಈ ಮೂವರು ಸ್ನೇಹಿತರ​ ಕಥೆ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಹಾಗೆಯೇ ಉಳಿದಿರುವುದು ನಟರ ಪಾಲಿಗೆ ಅದೃಷ್ಟವೇ ಸರಿ.

ಫೆ.3 ರಂದು ಕಂಗ್ರಾಜುಲೇಷನ್ಸ್​ ರಿಲೀಸ್: ಖ್ಯಾತ ನಿರ್ದೇಶಕ ರೆಹಾನ್​ ಚೌಧರಿಯ 'ಕಂಗ್ರಾಜುಲೇಷನ್ಸ್'​ ಸಿನಿಮಾ ಫೆಬ್ರವರಿ 3 ರಂದು ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಯೋಗ್ಯ ಪ್ರತಿಕ್ರಿಯೆಯನ್ನು ಚಿತ್ರ ಪಡೆದಿದೆ. ಇದು ಗುಜರಾತಿ ನಾಟಕ ಚಲನಚಿತ್ರವಾಗಿದ್ದು, ಶರ್ಮನ್​ ಜೋಶಿ, ಮಾನಸಿ ಪರೇಖ್ ಗೋಹಿಲ್, ಜಯೇಶ್ ಬರ್ಬಹ್ಯಾ, ಅಮಿ ಭಯಾನಿ, ಅರ್ಚನ್ ತ್ರಿವೇದಿ, ಸ್ವಾತಿ ಡೇವ್ ಮತ್ತು ಇತರೆ ಕಲಾವಿದರು ನಟಿಸಿದ್ದಾರೆ. ಇನ್ನೂ '3 ಈಡಿಯಡ್ಸ್'​ ಚಿತ್ರವು 2009ರಲ್ಲಿ ಬಿಡುಗಡೆಗೊಂಡು ಭಾರೀ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾವನ್ನು ರಾಜ್​ಕುಮಾರ್​ ಹಿರಾನಿ ನಿರ್ದೇಶಿಸಿದ್ದರು.

ಇದನ್ನೂ ಓದಿ: 'ಭಾವವೆಂಬ ಹೂವು ಅರಳಿ' ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಗಾಯಕಿ ವಾಣಿ ಜಯರಾಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.