ಕರ್ನಾಟಕ

karnataka

ಜಾತ್ರೆಗೆ ಬಂದಿದ್ದ ಮಹಿಳೆಯರಿಗೆ ಬಳೆ ಕೊಡಿಸಿ, ತೊಡಿಸಿದ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌

By

Published : Aug 4, 2021, 10:13 PM IST

Updated : Aug 5, 2021, 5:46 PM IST

ಜಾತ್ರೆಯಲ್ಲಿ ಸೇರಿದ್ದ ಮಹಿಳೆಯರಿಗೆ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌ ಬಳೆ ಕೊಡಿಸಿದ್ದಲ್ಲದೆ, ತಮ್ಮ ಪಕ್ಕದಲ್ಲಿ ನಿಂತಿದ್ದ ಮಹಿಳೆಯೊಬ್ಬರಿಗೆ ತಾವೇ ಖುದ್ದು ಕೈ ಅಳತೆ ನೋಡಿ ಸರಿಯಾಗಿ ಹೊಂದಾಣಿಕೆಯಾಗುವ ಬಳೆಗಳನ್ನು ತೊಡಿಸಿದರು. ಬಳೆ ಮಾರುವ ಮಹಿಳೆಗೆ ತಮ್ಮ ಕಿಸೆಯಿಂದ ಐದು ಸಾವಿರ ರೂಪಾಯಿ ಕೊಟ್ಟು ಅಲ್ಲಿಂದ ತೆರಳಿದರು. ಪರಮೇಶ್ವರ್ ಅವರ ಈ ನಡೆಗೆ ಅಲ್ಲಿದ್ದವರೆಲ್ಲರೂ ಜೈಕಾರ ಕೂಗಿದರು..

Former DCM Parameshwar who gave women bangles in goddess fair in koratagere taluk
ಜಾತ್ರೆಗೆ ಬಂದಿದ್ದ ಮಹಿಳೆಯರಿಗೆ ಬಳೆ ಕೊಡಿಸಿದ ಮಾಜಿ ಡಿಸಿಎಂ ಪರಮೇಶ್ವರ್‌

ಕೊರಟಗೆರೆ(ತುಮಕೂರು): ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕೊರಟಗೆರೆ ವಿಧಾನಸಭಾ ಕ್ಷೇತ್ರದ ತುಂಬಾಡಿ ಗ್ರಾಮದಲ್ಲಿ ನಡೆಯುತ್ತಿದ್ದ ಗ್ರಾಮ ದೇವತೆ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಅಚಾನಕ್ಕಾಗಿ ಎದುರಾದ ಬಳೆ ಮಾರುವ ಮಹಿಳೆಯನ್ನು ಕಂಡು ಆಕೆಯ ಬಳಿಯಿದ್ದ ಬಳೆಗಳನ್ನೆಲ್ಲಾ ಖರೀದಿಸಿ ಜಾತ್ರೆಗೆ ಬಂದಿದ್ದ ಮಹಿಳೆಯರಿಗೆ ಕೊಡಿಸಿದ ಅಪರೂಪದ ಪ್ರಸಂಗ ನಡೆದಿದೆ.

ಜಾತ್ರೆಗೆ ಬಂದಿದ್ದ ಮಹಿಳೆಯರಿಗೆ ಬಳೆ ಕೊಡಿಸಿ, ತೊಡಿಸಿದ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌

ಬಳೆ ಮಾರುವ ಮಹಿಳೆ ಬಳಿಯಿದ್ದ ಉತ್ತಮ ಗುಣಮಟ್ಟದ ಬಳೆಗಳನ್ನು ಖರೀದಿಸಿ ಸುತ್ತಮುತ್ತಲು ಇದ್ದ ಮಹಿಳೆಯರಿಗೆ ತಮಗಿಷ್ಟವಾದ ಬಳೆ ತೆಗೆದುಕೊಳ್ಳುವಂತೆ ಸೂಚಿಸಿದರು. ಮುಗಿಬಿದ್ದ ಮಹಿಳೆಯರು ಅಲ್ಲಿದ್ದ ಬಳೆಗಳನ್ನು ಸಂತಸದಿಂದ ಪಡೆದರು.

ಜಾತ್ರೆಯಲ್ಲಿ ಸೇರಿದ್ದ ಮಹಿಳೆಯರಿಗೆ ಪರಮೇಶ್ವರ್‌ ಬಳೆ ಕೊಡಿಸಿದ್ದಲ್ಲದೆ, ತಮ್ಮ ಪಕ್ಕದಲ್ಲಿ ನಿಂತಿದ್ದ ಮಹಿಳೆಯೊಬ್ಬರಿಗೆ ತಾವೇ ಖುದ್ದು ಕೈ ಅಳತೆ ನೋಡಿ ಸರಿಯಾಗಿ ಹೊಂದಾಣಿಕೆಯಾಗುವ ಬಳೆಗಳನ್ನು ತೊಡಿಸಿದರು. ಬಳೆ ಮಾರುವ ಮಹಿಳೆಗೆ ತಮ್ಮ ಕಿಸೆಯಿಂದ ಐದು ಸಾವಿರ ರೂಪಾಯಿ ಕೊಟ್ಟು ಅಲ್ಲಿಂದ ತೆರಳಿದರು. ಪರಮೇಶ್ವರ್ ಅವರ ಈ ನಡೆಗೆ ಅಲ್ಲಿದ್ದವರೆಲ್ಲರೂ ಜೈಕಾರ ಕೂಗಿದರು.

ಇದನ್ನೂ ಓದಿ: ಶಾಸಕ ಬಿ ಸಿ ನಾಗೇಶ್​​ಗೆ ಸಚಿವಸ್ಥಾನ.. ಸ್ವಗ್ರಾಮದಲ್ಲಿ ಸಂಭ್ರಮಾಚರಣೆಗೆ ಬೆಂಬಲಿಗರ ಸಿದ್ಧತೆ..

ಇಂದು ತುಂಬಾಡಿ ಗ್ರಾಮ ದೇವತೆ ಜಾತ್ರೆಯಲ್ಲಿ ಶಾಸಕರಾದ ಡಾ. ಜಿ. ಪರಮೇಶ್ವರ್ ಪಾಲ್ಗೊಂಡು, ಗ್ರಾಮ ದೇವತೆಯ ದರ್ಶನ ಪಡೆದರು. ದಾರಿ ಮಧ್ಯೆ ಮಹಿಳೆಯರಿಗೆ ಬಳೆ ಕೊಡಿಸುವ ಮೂಲಕ ಬಳೆ ಮಾರುತ್ತಿದ್ದ ಮಹಿಳೆಗೆ ಒಳ್ಳೆಯ ಲಾಭವನ್ನು ಮಾಡಿಕೊಟ್ಟರು.

Last Updated :Aug 5, 2021, 5:46 PM IST

ABOUT THE AUTHOR

...view details