ಕರ್ನಾಟಕ

karnataka

ಪಿಎಸ್ಐ ಪರೀಕ್ಷೆ ಅಕ್ರಮ: ಕಲಬುರಗಿ ನಗರ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದ ಸಿಐಡಿ

By

Published : Jul 25, 2022, 2:31 PM IST

ಪಿಎಸ್​ಐ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರ ಪೊಲೀಸ್​ ಆಯಕ್ತರನ್ನು ಸಿಐಡಿ ತಂಡ ಪ್ರಶ್ನಿಸಿದೆ.

CID questioned Kalaburagi Nagar Police Commissioner, CID questioned Kalaburagi Nagar Police Commissioner over PSI scam, PSI scam news, PSI requirement sacm case, Kalaburagi crime news, ಕಲಬುರಗಿ ನಗರ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದ ಸಿಐಡಿ, ಪಿಎಸ್‌ಐ ಹಗರಣ ಕುರಿತು ಕಲಬುರಗಿ ನಗರ ಪೊಲೀಸ್ ಆಯುಕ್ತರನ್ನು ಸಿಐಡಿ ವಿಚಾರಣೆ, ಪಿಎಸ್‌ಐ ಹಗರಣ ಸುದ್ದಿ, ಫಿಎಸ್​ಐ ನೇಮಕಾತಿ ಹಗರಣ ಪ್ರಕರಣ, ಕಲಬುರಗಿ ಅಪರಾಧ ಸುದ್ದಿ,
ಲಬುರಗಿ ನಗರ ಪೊಲೀಸ್ ಆಯುಕ್ತರಿಗೆ ಪ್ರಶ್ನಿಸಿದ ಸಿಐಡಿ

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ವಿಚಾರದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಬಂಧನದ ನಂತರ ಇದೀಗ ಕಲಬುರಗಿ ನಗರ ಪೊಲೀಸ್ ಆಯುಕ್ತ ವೈ.ಎಸ್. ರವಿಕುಮಾರ್‌ಗೆ ಕಂಟಕ ಎದುರಾಯ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕಂದ್ರೆ ರವಿಕುಮಾರ್​ಗೆ ಪತ್ರಗಳ ಮೂಲಕ ಸಿಐಡಿ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಸಿಐಡಿ ಕೇಳಿರುವ ಪ್ರಶ್ನೆಗಳು...

  • ಜ್ಞಾನಜ್ಯೋತಿ ಶಾಲೆಗೆ ಅಂದು ಡಿವೈಎಸ್ಪಿ ಎಸ್.ಎಸ್.ಹುಲ್ಲೂರ್ ಬಿಡುಗಡೆ ಮಾಡಿದ್ದೇಕೆ?
  • ಹುಲ್ಲೂರ್​ ಅವರನ್ನು ಪರೀಕ್ಷಾ ಕೇಂದ್ರದಿಂದ ಬಿಡುಗಡೆಗೆ ರಾಯಚೂರು ಎಸ್ಪಿ ಅವರು ಪತ್ರ ಬರೆದಿದ್ದಾರೆಯೇ?
  • ಪರೀಕ್ಷಾ ಕೇಂದ್ರದಿಂದ ಬಿಡುಗಡೆ ಮಾಡುವಂತೆ ಹುಲ್ಲೂರ ಆಯುಕ್ತರ ಕಚೇರಿಗೆ ಮನವಿ ಪತ್ರ ಕೊಟ್ಟಿದಾರೆಯೇ?
  • ಡಿವೈಎಸ್​ಪಿ ಹುಲ್ಲೂರ್ ಸ್ಥಳಕ್ಕೆ ಹೊಸಮನಿ ನೇಮಿಸದಕ್ಕೆ, ಹೊಸಮನಿ ಜಾಗಕ್ಕೆ ಯಾರನ್ನು ನೇಮಕ ಮಾಡಲಾಗಿತ್ತು?
  • ಪಿಎಸ್​ಐ ಪರೀಕ್ಷೆ ವೇಳೆ ಲೋಹಶೋಧಕ ಯಂತ್ರ (ಮೆಟಲ್ ಡಿಟೆಕ್ಟರ್) ಇದ್ರು ಸಹ ಪರೀಕ್ಷೆ ಒಳಗಡೆ ಡಿವೈಸ್ ತೆಗೆದುಕೊಂಡು ಹೋಗಿದ್ದಾರೆ. ಆದರೆ ಬಾಗಿಲಲ್ಲಿ ಇರುವ ನಿಮ್ಮ ಸಿಬ್ಬಂದಿ ಯಾಕೆ ಇದನ್ನು ಪತ್ತೆ ಮಾಡಲಿಲ್ಲ?
  • ಡಿವೈಎಸ್ಪಿ ಹುಲ್ಲೂರ್​ರನ್ನು ದಿಢೀರನೆ ಯಾಕೆ ಆ ಕೇಂದ್ರದಿಂದ ಬದಲಾವಣೆ ಮಾಡಲಾಗಿತ್ತು?
  • ಕೇಂದ್ರಕ್ಕೆ ನೇಮಕವಾದ ಡಿವೈಎಸ್​ಪಿ ಹೊಸಮನಿಗೆ ಪರೀಕ್ಷಾ ತರಬೇತಿ ನೀಡಲಾಗಿತ್ತಾ?
  • ಅಕ್ರಮ‌ ನಡೆದ ಹಲವು ಕೇಂದ್ರಗಳಲ್ಲಿ ಮೆಟಲ್ ಡಿಟಕ್ಟರ್ ಲೋಪ್ ಕಂಡು ಬಂದಿರುವುದು ಯಾಕೆ?

ಇದೇ ರೀತಿ ಅನೇಕ ವಿಷಯಗಳ ಬಗ್ಗೆ ಮಾಹಿತಿ ಸಿಐಡಿ ಕೇಳಿದೆ. ಪಿಎಸ್ಐ ಅಕ್ರಮ ಪ್ರಕರಣ ದಿನಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ವೈ ಎಸ್ ರವಿಕುಮಾರ್​ಗೆ ಸಿಐಡಿ ಎರಡನೇ ಬಾರಿಗೆ ಪ್ರಶ್ನೆ ಕೇಳಿ ಪತ್ರ ಬರೆದಿದ್ದು, ಮೊದಲನೆ ಪತ್ರಕ್ಕೆ ಉತ್ತರಿಸಿದ ರವಿಕುಮಾರ್​ ಅವರು ಎರಡನೇ ಪತ್ರಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details