ಕರ್ನಾಟಕ

karnataka

ಕವಿವಿ ಘಟಿಕೋತ್ಸವ: ಗ್ರಾಮ ಪಂಚಾಯತ್​ ವಾಟರ್​ ಮ್ಯಾನ್​ ಮಗಳಿಗೆ 9 ಚಿನ್ನದ ಪದಕ

By

Published : Jun 8, 2022, 8:54 AM IST

ಕರ್ನಾಟಕ ವಿಶ್ವವಿದ್ಯಾಲಯದ 72 ನೇಯ ವಾರ್ಷಿಕ ಘಟಿಕೋತ್ಸವದಲ್ಲಿ ಗ್ರಾಮ ಪಂಚಾಯತ್​ನ ಡಿ ದರ್ಜೆ ನೌಕರನ ಮಗಳು ಪತ್ರಿಕೋದ್ಯಮ ವಿಭಾಗದಲ್ಲಿ 9 ಚಿನ್ನದ ಪದಕ ಪಡೆದು ಕೊಂಡಿದ್ದಾರೆ.

Karnatak University
ಕವಿವಿ ಘಟಿಕೋತ್ಸವ

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯಿತಿ ಡಿ ದರ್ಜೆ ನೌಕರರಾಗಿರುವ ನಾಗೇಶ ಜೋಡಳ್ಳಿ ಮತ್ತು ಗೃಹಿಣಿ ಮಹಾದೇವಿ ಅವರ ಮಗಳಾದ ಸುಜಾತ ಜೋಡಳ್ಳಿ ಎಂ.ಎ ಪದವಿಯಲ್ಲಿ 9 ಚಿನ್ನದ ಪದಕ ಪಡೆದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ 72ನೇ ಘಟಿಕೋತ್ಸವದಲ್ಲಿ ಸುಜಾತ ಜೋಡಳ್ಳಿ ಅವರಿಗೆ ಪತ್ರಿಕೋದ್ಯಮ ವಿಭಾಗದ ಒಂಬತ್ತು ಪದಕಗಳು ಲಭಿಸಿವೆ.

ಕವಿವಿ 72 ನೇ ಘಟಿಕೋತ್ಸವದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ಕೊಡಮಾಡುವ, ಕುಮಾರ ಮಹಾದೇವ ಸ್ವರ್ಣಪದಕ, ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ ಸ್ವರ್ಣಪದಕ, ಕೆ.ಎಂ.ರಾಜಶೇಖರಪ್ಪ ಹಿರೇಮಠ ಸ್ವರ್ಣಪದಕ, ಮೋಹರೆ ಹನುಮಂತರಾಯ್ ಸ್ವರ್ಣಪದಕ, ಕೆ.ಶಾಮರಾವ ಸ್ವರ್ಣಪದಕ, ಲಕ್ಷ್ಮಣ ಶ್ರೀಪಾದ ಭಟ್ ಜೋಶಿ ಸ್ಮಾರಕ ಸ್ವರ್ಣಪದಕ, ಎಸ್. ವೀರೇಶ್ ನೀಲಕಂಠಶಾಸ್ತ್ರಿ ಸಂಗನಹಾಲ ಸ್ವರ್ಣಪದಕ, ಆರ್.ಎಸ್.ಚಕ್ರವರ್ತಿ ಸ್ವರ್ಣಪದಕ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸ್ವರ್ಣಪದಕ ಸೇರಿದಂತೆ ಇಂದುಮತಿ ಡಾ.ಪಾಟೀಲ ಪುಟ್ಟಪ್ಪ, ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ನಗದು ಪುರಸ್ಕಾರಗಳನ್ನು ಕುಮಾರಿ ಸುಜಾತಾ ಜೋಡಳ್ಳಿಯವರು ಪಡೆದುಕೊಂಡಿದ್ದಾರೆ.

ಗ್ರಾಮ ಪಂಚಾಯತ್​ ವಾಟರ್​ ಮ್ಯಾನ್​ ಮಗಳಿಗೆ 9 ಚಿನ್ನದ ಪದಕ

ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರಾವಾರ ಕಚೇರಿಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆಯುತ್ತಿದ್ದಾರೆ. ಚಿನ್ನದ ಹುಡುಗಿ ಸುಜಾತಾ ಮಾತನಾಡಿ, ತಂದೆ, ತಾಯಿ ಹಾಗೂ ಸ್ನೇಹಿತೆ ವಿದ್ಯಾಳ ಸಹಾಯ, ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು. ಮಾಧ್ಯಮದಲ್ಲಿಯೇ ವೃತ್ತಿ ಆರಂಭಿಸುವುದು ನನ್ನ ಆಶಯವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಆತ್ಮನಿರ್ಭರ ಭಾರತಕ್ಕೆ ಶಿಕ್ಷಣ ಪೂರಕವಾಗಲಿ: ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

ABOUT THE AUTHOR

...view details