ಕರ್ನಾಟಕ

karnataka

ನನ್ನ ಪ್ರಕಾರ ಕೋತ್ವಾಲ್ ಶಿಷ್ಯರು ಬಿಜೆಪಿಯಲ್ಲಿದ್ದಾರೆ: ರಾಮಲಿಂಗಾ ರೆಡ್ಡಿ

By

Published : Feb 18, 2022, 3:12 PM IST

ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿರುವ ರಾಮಲಿಂಗಾ ರೆಡ್ಡಿ, ನನ್ನ ಪ್ರಕಾರ ಕೊತ್ವಾಲ್ ಶಿಷ್ಯರು ಹಿಂದೆಯೇ ಬಿಜೆಪಿ ಸೇರಿದ್ದಾರೆ ಎಂದು ಹೇಳಿದ್ದಾರೆ.

ramalinga-reddy-reacted-to-the-ct-ravi-statement
ರಾಮಲಿಂಗಾ ರೆಡ್ಡಿ

ಬೆಂಗಳೂರು: ನನ್ನ ಪ್ರಕಾರ ಕೋತ್ವಾಲ್ ಶಿಷ್ಯರು ಬಿಜೆಪಿಯಲ್ಲಿದ್ದಾರೆ ಎಂದು ರಾಮಲಿಂಗಾರೆಡ್ಡಿ ಸಿಟಿ ರವಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರಿ 47 ವರ್ಷ ಆಯ್ತು. ರಾಮಚಂದ್ರ ತೀರಿ 40 ವರ್ಷ ಆಯ್ತು.

ನನ್ನ ಗ್ರಹಿಕೆ ಪ್ರಕಾರ ರಾಮಚಂದ್ರ ಶಿವಮೊಗ್ಗದವರು. ಹಾಗಾಗಿ ಕೊತ್ವಾಲ್ ಶಿಷ್ಯರು ಹಿಂದೆಯೇ ಬಿಜೆಪಿ ಸೇರಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಗಡಿಪಾರಾಗಿದ್ದವರು. ಅವರು ಗೃಹ ಮಂತ್ರಿಯಾಗಿಲ್ವೇ. ಅವರ ಬಗ್ಗೆ ಸಿ.ಟಿ.ರವಿ ಮಾತನಾಡಲಿ ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ಈಗಾಗಲೇ ಕಾಂಗ್ರೆಸ್ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು. ಈಶ್ವರಪ್ಪನವರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವುದಕ್ಕೆ ಈ ಕೂಡಲೇ ಈಶ್ವರಪ್ಪ ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈಶ್ವರಪ್ಪ ಯಾವ ಬಗೆಯ ರಾಷ್ಟ್ರಭಕ್ತರು ಎಂಬುದು ಗೊತ್ತಾಗುತ್ತಿಲ್ಲ. ಅಲ್ಲದೇ ಬಿಜೆಪಿ ನಾಯಕರು ಅವರ ಪರವಾಗಿದ್ದು, ಇವರೆಲ್ಲ ಯಾವ ಬಗೆಯ ರಾಷ್ಟ್ರ ಭಕ್ತರು ಎಂಬುದು ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಧರಣಿ ಮಾಡುತ್ತಿರುವುದು ಮತಬ್ಯಾಂಕಿನ ರಾಜಕಾರಣ ಎಂಬುದಕ್ಕೆ ಪ್ರತಿಕ್ರಿಯಿದ ಇವರು ನಾವು ಮತಬ್ಯಾಂಕ್ ಗಾಗಿ ಮಾಡುತ್ತಿಲ್ಲ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿಯವರಿಗೆ ಸುಳ್ಳು ಹೇಳುವುದಕ್ಕೆ ಟ್ರೈನಿಂಗ್ ಮೊದಲೇ ಆಗಿರುತ್ತದೆ. ಈಶ್ವರಪ್ಪನವರೇ ಇದನ್ನು ಒಪ್ಪಿಕೊಂಡಿದ್ರು. ಇವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.

ಓದಿ :ಹಿಜಾಬ್ ಬೆನ್ನಲ್ಲೇ ತಲೆ ಎತ್ತಿದ ಸಿಂಧೂರ ವಿವಾದ; ವಿದ್ಯಾರ್ಥಿಗೆ ಕಾಲೇಜು ಪ್ರವೇಶ ನಿರಾಕರಣೆ ಆರೋಪ

ABOUT THE AUTHOR

...view details