ಕರ್ನಾಟಕ

karnataka

ಮೋದಿ ಸರ್ಕಾರ ಹೊಸ ಪಾಸ್​​ಪೋರ್ಟ್​ಗಳ ಮೇಲೆ 'ಕಮಲ' ಚಿಹ್ನೆ ಮುದ್ರಿಸಿದ್ದು ಏಕೆ?

By

Published : Dec 13, 2019, 2:24 PM IST

Updated : Dec 13, 2019, 2:51 PM IST

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು, 'ದೇಶದ ಪ್ರತಿಷ್ಠಿತ ಪಾಸ್‌ಪೋರ್ಟ್‌ನಲ್ಲಿಯೂ ಬಿಜೆಪಿ ರಾಜಕೀಯ ಮಾಡುತ್ತಿದೆ' ಎಂದು ಆರೋಪಿಸಿದವು. ನಕಲಿ ಪಾಸ್‌ಪೋರ್ಟ್‌ಗಳನ್ನು ಪತ್ತೆ ಹಚ್ಚುವ ಉದ್ದೇಶಿತ ಭದ್ರತೆಯ ಭಾಗವಾಗಿ ಭಾರತದ ಹೊಸ ಪಾಸ್‌ಪೋರ್ಟ್‌ಗಳ ಮೇಲೆ 'ಕಮಲ' ಚಿಹ್ನೆ ಮುದ್ರಿಸಲಾಗುತ್ತಿದೆ ಎಂದು ಬಿಜೆಪಿ ಪ್ರತಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿದೆ.

BJP
ಬಿಜೆಪಿ

ನವದೆಹಲಿ: ಹೊಸ ಪಾಸ್‌ಪೋರ್ಟ್‌ಗಳ ಮೇಲೆ ಕಮಲ ಚಿಹ್ನೆಯನ್ನು ಮುದ್ರಿಸುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಲೋಕಸಭೆಯಲ್ಲಿ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.

ನಕಲಿ ಪಾಸ್‌ಪೋರ್ಟ್‌ಗಳನ್ನು ಪತ್ತೆ ಹಚ್ಚುವ ಉದ್ದೇಶಿತ ಭದ್ರತೆಯ ಭಾಗವಾಗಿ ಭಾರತದ ಹೊಸ ಪಾಸ್‌ಪೋರ್ಟ್‌ಗಳ ಮೇಲೆ 'ಕಮಲ' ಚಿಹ್ನೆ ಮುದ್ರಿಸಲಾಗುತ್ತಿದೆ. ರಾಷ್ಟ್ರೀಯ ಹೂವಾದ ಕಮಲದ ಪ್ರತೀಕವಾಗಿ ಈ ಚಿಹ್ನೆಯನ್ನು ಬಳಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಭವಿಷ್ಯದಲ್ಲಿ ಈ ರೀತಿಯ ರಾಷ್ಟ್ರೀಯ ಚಿಹ್ನೆಗಳಾಗಿರುವ ಇತರೆ ವಸ್ತುಗಳ ಚಿತ್ರಗಳನ್ನು ಪಾಸ್‌ಪೋರ್ಟ್‌ನಲ್ಲಿ ಬಳಸಲಾಗುವುದು. ಈ ಕುರಿತು ಅನವಶ್ಯಕ ವಿವಾದ ಸೃಷ್ಟಿಸುವುದರಲ್ಲಿ ಅರ್ಥವಿಲ್ಲ. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಮಾರ್ಗಸೂಚಿಗಳ ಭಾಗವಾಗಿ ಹೊಸ ಭದ್ರತಾ ವೈಶಿಷ್ಟ್ಯಗಳನ್ನು ಅದರಲ್ಲಿ ಪರಿಚಯಿಸಲಾಗಿದೆ ಎಂದು ಹೇಳಿದರು.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿತ್ತು. ದೇಶದ ಪ್ರತಿಷ್ಠಿತ ಪಾಸ್‌ಪೋರ್ಟ್‌ನಲ್ಲಿಯೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಲಾಗಿತ್ತು. ಬಿಜೆಪಿ ಪ್ರತಿಪಕ್ಷಗಳ ಆರೋಪವನ್ನು ತಳಿಹಾಕಿದೆ.

Last Updated : Dec 13, 2019, 2:51 PM IST

ABOUT THE AUTHOR

...view details