ಕರ್ನಾಟಕ

karnataka

6 ಬ್ಯಾಂಕ್​ಗಳ ಖಾಸಗೀಕರಣಕ್ಕೆ ಡೋರ್​ ಒಪನ್: ಯಾವೆಲ್ಲಾ Banks ನೀತಿ ಆಯೋಗದ ಪಟ್ಟಿಯಲ್ಲಿವೆ?

By

Published : Jun 4, 2021, 7:05 PM IST

Updated : Jun 4, 2021, 7:21 PM IST

ಯುಕೋ, ಐಒಬಿ, ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ಎಂಬ ಆರು ಬ್ಯಾಂಕ್​ಗಳಿಗೆ ಮಾತ್ರ ಖಾಸಗೀಕರಣದ ಬಾಗಿಲು ತೆರೆಯಲಾಗಿದೆ. ಐದು ದೊಡ್ಡ ಪಿಎಸ್‌ಬಿಗಳಾದ ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ ಮತ್ತು ಇತರ ಪಿಎಸ್‌ಬಿಗಳನ್ನು ವೀಲಿನವಾಗುತ್ತಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಖಾಸಗೀಕರಣಗೊಳಿಸುತ್ತಿಲ್ಲ.

Bank for privatisation
Bank for privatisation

ನವದೆಹಲಿ:ಹೂಡಿಕೆ ಪ್ರಕ್ರಿಯೆಯ ಭಾಗವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಖಾಸಗೀಕರಣಗೊಳ್ಳಲು ಎರಡು ಸಾರ್ವಜನಿಕ ವಲಯದ ಬ್ಯಾಂಕ್​ಗಳು (ಪಿಎಸ್‌ಬಿ) ಮತ್ತು ಒಂದು ಸಾರ್ವಜನಿಕ ವಲಯದ ವಿಮೆದಾರರ ಹೆಸರನ್ನು ನೀತಿ ಆಯೋಗ ಸರ್ಕಾರಕ್ಕೆ ಸಲ್ಲಿಸಿದೆ.

ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (ಡಿಐಪಿಎಎಂ) ಮತ್ತು ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್) ನೀತಿ ಆಯೋಗ ಸೂಚಿಸಿದ ಹೆಸರುಗಳನ್ನು ಪರಿಶೀಲಿಸುತ್ತದೆ. ಈ ವರ್ಷ ಖಾಸಗೀಕರಣಕ್ಕಾಗಿ ಹಣಕಾಸು ಕ್ಷೇತ್ರದಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸೆಂಟ್ರಲ್ ಬ್ಯಾಂಕ್ ಖಾಸಗೀಕರಣಕ್ಕೆ ಒಲವು ತೋರಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆದರೆ, ಭಾರತೀಯ ಸಾಗರೋತ್ತರ ಬ್ಯಾಂಕ್ ಸಹ ಈ ವರ್ಷ ಅಥವಾ ಮುಂದಿನ ದಿನಗಳಲ್ಲಿ ಒಲವು ತೋರಬಹುದು ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ, ಯುನೈಟೆಡ್ ಇಂಡಿಯಾ ವಿಮೆಯನ್ನು ಮೂರು ಸಾಮಾನ್ಯ ವಿಮಾದಾರರಲ್ಲಿ ಖಾಸಗೀಕರಣದ ಅಭ್ಯರ್ಥಿಯಾಗಿ ಆಯ್ಕೆ ಮಾಡಬಹುದು. ಹಣಕಾಸು ವಲಯದ ತಜ್ಞರು ಈ ಮೂವರಲ್ಲಿ ಕನಿಷ್ಠ ಋಣಪರಿಹಾರ ಅನುಪಾತ ಹೊಂದಿರುವ ಓರಿಯಂಟಲ್ ಇನ್ಶುರೆನ್ಸ್​ಗೆ ಸಾಗರೋತ್ತರ ಕಾರ್ಯಾಚರಣೆಗಳನ್ನು ಹೊಂದಿರದ ಕಾರಣ ಅನುಕೂಲವಾಗಬಹುದು. ಖಾಸಗಿ ಹೂಡಿಕೆದಾರರನ್ನು ಆಹ್ವಾನಿಸುವುದೂ ಸುಲಭ ಆಗಬಹುದು ಎಂದರು.

ಪ್ರಾಂಪ್ಟ್ ಕೋಆಪರೆಟಿವ್​ ಆ್ಯಕ್ಷನ್​ (ಪಿಸಿಎ) ಚೌಕಟ್ಟಿನಲ್ಲಿ ಇರುವ ಬ್ಯಾಂಕ್​ಗಳು ಅಥವಾ ದುರ್ಬಲ ಬ್ಯಾಂಕ್​ಗಳನ್ನು ಖಾಸಗೀಕರಣದಿಂದ ಹೊರಗಿಡಲಾಗುವುದು ಎಂದು ಸರ್ಕಾರ ಈ ಹಿಂದೆ ಸೂಚಿಸಿತ್ತು. ಅವುಗಳು ಖರೀದಿದಾರರು ನಿರಾಸಕ್ತಿ ತಳಿಹಬಹುದು ಎಂಬ ಲೆಕ್ಕಾಚಾರ ಸರ್ಕಾರದ್ದು.

ಇದನ್ನೂ ಓದಿ: 'ಬ್ಲೂ' ಸಬ್‌ಸ್ಕ್ರಿಪ್ಶನ್ ಸೇವೆ ಪರಿಚಯಿಸಿದ ಟ್ವಿಟರ್: ಶುಲ್ಕವೆಷ್ಟು, ಏನೆಲ್ಲಾ ಅನುಕೂಲ?

ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್ ಎಂಬ ಮೂರು ಪಿಎಸ್‌ಬಿಗಳನ್ನು ಸರ್ಕಾರದ ಹೂಡಿಕೆ ಯೋಜನೆಯಿಂದ ಹೊರಗಿಡಬಹುದಿತ್ತು. ಆದರೆ ಕಳೆದ 3-4 ತ್ರೈಮಾಸಿಕಗಳಲ್ಲಿ ಲಾಭದಾಯಕತೆ ಮತ್ತು ಆಸ್ತಿ ಗುಣಮಟ್ಟ (ನಿವ್ವಳ ಎನ್‌ಪಿಎ ಪರಿಭಾಷೆ) ಕೆಲವು ಪ್ರಮುಖ ನಿಯತಾಂಕಗಳಲ್ಲಿ ಸುಧಾರಣೆಯ ಚಿಹ್ನೆಗಳು ಗೋಚರಿಸಿದ್ದರಿಂದ ಅವುಗಳನ್ನು ಪಿಸಿಎಯಿಂದ ಹೊರಗೆ ತರಬಹುದು. ಇದು ಖಾಸಗೀಕರಣಕ್ಕಾಗಿ ಪರಿಗಣಿಸಲು ಅನುವು ಮಾಡಿಕೊಡುತ್ತದೆ.

ಇದಲ್ಲದೇ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಸೆಂಟ್ರಲ್ ಬ್ಯಾಂಕ್ ಎರಡೂ ಪಶ್ಚಿಮ ಕೇಂದ್ರಿತ ಬ್ಯಾಂಕ್​ಗಳಾಗಿವೆ. ಅಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಉಪಸ್ಥಿತಿಯು ಈಗಾಗಲೇ ಪ್ರಬಲವಾಗಿದೆ. ಇದು ಹೆಚ್ಚಿನ ಖಾಸಗಿ ವಲಯದ ಪ್ರವೇಶಕ್ಕೆ ಅನುವು ಮಾಡಿಕೊಡುತ್ತದೆ.

ಐದು ದೊಡ್ಡ ಪಿಎಸ್‌ಬಿಗಳಾದ ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ ಮತ್ತು ಇತರ ಪಿಎಸ್‌ಬಿಗಳನ್ನು ವೀಲಿನವಾಗುತ್ತಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಖಾಸಗೀಕರಣಗೊಳಿಸುತ್ತಿಲ್ಲ.

ಯುಕೋ, ಐಒಬಿ, ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ಎಂಬ ಆರು ಬ್ಯಾಂಕ್​ಗಳಿಗೆ ಮಾತ್ರ ಖಾಸಗೀಕರಣದ ಬಾಗಿಲು ತೆರೆಯಲಾಗಿದೆ.

Last Updated :Jun 4, 2021, 7:21 PM IST

ABOUT THE AUTHOR

...view details