ಕರ್ನಾಟಕ

karnataka

ಸಾಕ್ಷ್ಯಾಧಾರಗಳ ಕೊರತೆ: ತಬ್ಲಿಘಿ ಜಮಾತ್‌ನ 12 ಸದಸ್ಯರು ಖುಲಾಸೆ

By

Published : Aug 29, 2021, 4:26 PM IST

ಒಂಬತ್ತು ಥಾಯ್ಲೆಂಡ್‌ನ ಪ್ರಜೆಗಳು ಸೇರಿದಂತೆ ತಬ್ಲಿಘಿ ಜಮಾತ್‌ನ 12 ಸದಸ್ಯರನ್ನು ಶುಕ್ರವಾರ ಇಲ್ಲಿನ ನ್ಯಾಯಾಲಯವು ಸಾಕ್ಷಿಯ ಕೊರತೆಯಿಂದ ಖುಲಾಸೆಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿನ ಮರ್ಕಜ್​ನಲ್ಲಿ ತಬ್ಲಿಘಿ ಜಮಾತ್ ಸಭೆ ನಡೆಸಿದ ನಂತರ ಅವರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿನ ಮರ್ಕಜ್​ನಲ್ಲಿ ತಬ್ಲಿಘಿ ಜಮಾತ್ ಸಭೆ
ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿನ ಮರ್ಕಜ್​ನಲ್ಲಿ ತಬ್ಲಿಘಿ ಜಮಾತ್ ಸಭೆ

ಬರೇಲಿ (ಉತ್ತರ ಪ್ರದೇಶ): ಒಂಬತ್ತು ಥಾಯ್ ಪ್ರಜೆಗಳು ಸೇರಿದಂತೆ ತಬ್ಲಿಘಿ ಜಮಾತ್‌ನ 12 ಸದಸ್ಯರನ್ನು ಶುಕ್ರವಾರ ಇಲ್ಲಿನ ನ್ಯಾಯಾಲಯವು ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿದೆ.

ಒಂಬತ್ತು ಥಾಯ್ ಪ್ರಜೆಗಳು, ತಮಿಳುನಾಡಿನ ಇಬ್ಬರು ವ್ಯಕ್ತಿಗಳು ಮತ್ತು ಒಬ್ಬ ಸ್ಥಳೀಯ ಸೇರಿದಂತೆ ತಬ್ಲಿಘಿ ಜಮಾತ್‌ನ 12 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ರಕ್ಷಣಾ ಸಲಹೆಗಾರ ಮಿಲನ್ ಕುಮಾರ್ ಗುಪ್ತಾ ಹೇಳಿದ್ದಾರೆ.

ಸಾಂಕ್ರಾಮಿಕ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರನ್ನು ಕಳೆದ ವರ್ಷ ಶಹಜಾನ್‌ಪುರದ ಮಸೀದಿಯಿಂದ ಬಂಧಿಸಲಾಗಿತ್ತು. ಆರೋಪಿಗಳ ವಿರುದ್ಧ ಸಾಂಕ್ರಾಮಿಕ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ, ವಿದೇಶಿಯರ ಕಾಯ್ದೆ ಮತ್ತು ಪಾಸ್‌ಪೋರ್ಟ್ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಶಹಜಹಾನ್‌ಪುರದ ಸದರ್ ಪೊಲೀಸರು ಕೇಸು ದಾಖಲಿಸಿದ್ದರು.

ಕಳೆದ ಮಾರ್ಚ್‌ನಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿನ ಮರ್ಕಜ್​ನಲ್ಲಿ ತಬ್ಲಿಘಿ ಜಮಾತ್ ಸಭೆ ನಡೆಸಿದ ನಂತರ ಅವರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ಸಭೆಯಲ್ಲಿ ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಸೇರಿದಂತೆ ವಿವಿಧ ದೇಶಗಳ ಜನರು ಭಾಗವಹಿಸಿದ್ದರು.

ಇದನ್ನೂ ಓದಿ:'ಭಯೋತ್ಪಾದನೆ' ಕುರಿತ ಹೇಳಿಕೆಯಿಂದ ತಾಲಿಬಾನ್ ಉಲ್ಲೇಖ ಕೈಬಿಟ್ಟ ವಿಶ್ವಸಂಸ್ಥೆ ಭದ್ರತಾ ಮಂಡಳಿ!

ABOUT THE AUTHOR

...view details