ಕರ್ನಾಟಕ

karnataka

ಬಿಜೆಪಿ ಟೋಪಿ ತೊಟ್ಟ ಸೂರತ್ ತರಕಾರಿ​ ವ್ಯಾಪಾರಿಗಳು: ಇದು ಪೂರ್ವ ನಿಯೋಜಿತ ಎಂದ ಎಎಪಿ, ಕಾಂಗ್ರೆಸ್​​

By

Published : Nov 17, 2022, 1:05 PM IST

ಯಾವುದೇ ಒತ್ತಾಯ ಇಲ್ಲದೇ, ಸ್ವಯಂ ಪೂರ್ವಕವಾಗಿ ನಮ್ಮ ನಿಷ್ಠೆ ಬಿಜೆಪಿ ಅಭ್ಯರ್ಥಿಗಳಿಗೆ ಎನ್ನುತ್ತಿರುವ ಮಾರಾಟಗಾರರು ಸೂರತ್​ ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಬಿಜೆಪಿ ಚಿಹ್ನೆಯ ಟೋಪಿ ತೊಟ್ಟು ಮಾರಾಟದಲ್ಲಿ ತೊಡಗಿದ್ದಾರೆ.
ಬಿಜೆಪಿ ಟೋಪಿ ತೊಟ್ಟು ಮಾರಾಟದಲ್ಲಿ ನಿರತರಾದ ಸೂರತ್ ತರಕಾರಿ​ ವ್ಯಾಪಾರಿಗಳು; ಇದು ಪೂರ್ವ ನಿಯೋಜಿತ ಯೋಜನೆ ಎಂದ ಎಎಪಿ, ಕಾಂಗ್ರೆಸ್​​
http://10.10.50.90:6060/reg-lowres/15-November-2022/62aac9cc285e25614db9ee9a8097eac6_1511a_1668459957_779.jpg

ಸೂರತ್​​: ದಿನದಿಂದ ದಿನಕ್ಕೆ ಗುಜರಾತ್​​ ಚುನಾವಣಾ ಕಣ ರಂಗೇರುತ್ತಿದೆ. ಮತದಾರರನ್ನು ಸೆಳೆಯಲು ಕಾಂಗ್ರೆಸ್​, ಎಎಪಿ ಮತ್ತು ಬಿಜೆಪಿ ಇನ್ನಿಲ್ಲದ ಯತ್ನ ನಡೆಸುತ್ತಿದೆ. ಈ ನಡುವೆ ಸೂರತ್​ ಹಣ್ಣು ಮತ್ತು ತರಕಾರಿ ಮಾರಾಟಗಾರರು ಬಿಜೆಪಿಯ ಟೋಪಿ, ಶಾಲು ತೊಟ್ಟು ನಮ್ಮ ಒಲವು ಕಮಲ ಪಕ್ಷಕ್ಕೆ ಎಂಬುದನ್ನು ಬಹಿರಂಗವಾಗಿ ಸ್ಪಷ್ಟ ಪಡಿಸುತ್ತಿದ್ದಾರೆ.

ಯಾವುದೇ ಒತ್ತಾಯ ಇಲ್ಲದೇ, ಸ್ವಯಂಪೂರ್ವಕವಾಗಿ ನಮ್ಮ ನಿಷ್ಠೆ ಬಿಜೆಪಿ ಅಭ್ಯರ್ಥಿಗಳಿಗೆ ಎನ್ನುತ್ತಿರುವ ಮಾರಾಟಗಾರರು ಸೂರತ್​ ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಬಿಜೆಪಿ ಚಿಹ್ನೆಯ ಟೋಪಿ ತೊಟ್ಟು ಮಾರಾಟದಲ್ಲಿ ತೊಡಗಿದ್ದಾರೆ. ಇನ್ನು ತಾವು ಸ್ವಯಂ ಇಚ್ಛೆಯಿಂದ ಬಿಜೆಪಿಗೆ ಬೆಂಬಲಿಸುತ್ತಿದ್ದು, ನಾವು ಪ್ರಚಾರ ಸಾಮಗ್ರಿಗಳಾಗಿಲ್ಲ ಎಂಬುದನ್ನು ಮಾರಾಟಗಾರರು, ಗ್ರಾಹಕರಿಗೆ ಸ್ಪಷ್ಟಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಬಿಜೆಪಿಗೆ ಬಹಿರಂಗವಾಗಿ ಬೆಂಬಲಿಸುತ್ತಿರುವುದಕ್ಕೆ ತಮ್ಮದೇ ಆದ ಕಾರಣಗಳನ್ನು ನೀಡಿದ್ದಾರೆ. ಆದರೆ, ಪ್ರತಿಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್​ ಇದನ್ನು ಪೂರ್ವ ನಿಯೋಜಿತ ಕಾರ್ಯ ಎಂದು ಟೀಕಿಸಿದೆ.

ಸಾಮಾನ್ಯವಾಗಿ, ಪಕ್ಷದ ಸದಸ್ಯರು ಮತ್ತು ಬೆಂಬಲಿಗರು ತಮ್ಮ ಪಕ್ಷಗಳ ಪರವಾಗಿ ಪ್ರಚಾರದ ವೇಳೆ ಈ ರೀತಿ ಟೋಪಿಗಳನ್ನು ತೊಡುತ್ತಾರೆ. ಸೂರತ್​ನ ಈ ಮಾರಾಟಗಾರರು ಬಿಜೆಪಿ ಟೋಪಿ ಮತ್ತು ಶಾಲು ತೊಟ್ಟು ಪ್ರಚಾರಕ ಕಾರ್ಯಕರ್ತರಂತೆ ಕಂಡು ಬಂದರು. ತರಕಾರಿ ಮಾರುಕಟ್ಟೆಯಲ್ಲಿ ಇಡೀ ದಿನ ಈ ರೀತಿ ಪಕ್ಷದ ಚಿಹ್ನೆಗಳನ್ನು ತೊಟ್ಟು ಮಾರಾಟದಲ್ಲಿ ತೊಡಗಿರುವ ಇವರನ್ನು ಬಿಜೆಪಿಯ ಸ್ಟಾರ್​ ಪ್ರಚಾರಕರು ಎಂದು ಕರೆಯಲಾಗುತ್ತಿದೆ.

ಬಹುತೇಕ ವ್ಯಾಪಾರಿಗಳಿಂದ ಈ ರೀತಿ ಮಾರಾಟ:ಸೂರತ್​ನ ಸಿಟಿ ಲೈಟ್​​ ಪ್ರದೇಶದಲ್ಲಿ ಬಹುತೇಕ ತರಕಾರಿ ಮಾರಾಟಗಾರರು ಬಿಜೆಪಿ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಲ್ಲಿ ಬಹುತೇಕರು ಉತ್ತರ ಭಾರತೀಯರಾಗಿದ್ದಾರೆ. ಅವರು ರಸ್ತೆಯಲ್ಲಿ ಕುಳಿತು ತರಕಾರಿ ಮಾರಾಟ ಮಾಡುತ್ತಿದ್ದರು. ಅವರಿಗೆ ಈಗ ಬಿಜೆಪಿ ಸರ್ಕಾರ ಮಾರುಕಟ್ಟೆ ಪ್ರದೇಶ ನೀಡಿ, ಉತ್ತಮ ಜೀವನ ನಿರ್ವಹಣೆಗೆ ಸಹಾಯ ಮಾಡಿದೆ. ಈ ಹಿನ್ನೆಲೆ ಇಲ್ಲಿನ ಮಾರುಕಟ್ಟೆ ವ್ಯಾಪಾರಿಗಳು ಮುಕ್ತವಾಗಿ ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ.

ಒತ್ತಾಯ ಪೂರ್ವಕವಾಗಿ ಟೋಪಿ ತೋಡಿಸಿದ ಆರೋಪ:ಬಿಜೆಪಿ ಟಿಕೆಟ್​ ಪಡೆಯುವಲ್ಲಿ ವಿಫಲರಾಗಿರುವ ಬಿಜೆಪಿ ಕಾರ್ಪೊರೇಟರ್​​​ ವೃಜೇಶ್​ ಉಂಡಕಟ್​ ಒತ್ತಾಯಪೂರ್ವಕವಾಗಿ ಮಾರಾಟಗಾರರಿಗೆ ಬಿಜೆಪಿ ಕ್ಯಾಪ್​ ತೊಡುವಂತೆ ಮಾಡಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ತಮ್ಮ ಪಕ್ಷವು ಸಾಮಾನ್ಯ ಜನರಿಗಾಗಿ ಹೋರಾಡುತ್ತಿರುವುದರಿಂದ, ವಿವಿಧ ವರ್ಗಗಳಿಂದ ನೇರ ಬೆಂಬಲವನ್ನು ಪಡೆಯುತ್ತಿದೆ ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಾರೆ.

ಆರೋಪ ನಿರಾಕರಿಸಿದ ಬಿಜೆಪಿ:ಸೂರತ್ ತರಕಾರಿ ಮಾರುಕಟ್ಟೆಯ ಹಣ್ಣು ಮತ್ತು ತರಕಾರಿ ಮಾರಾಟಗಾರರ ವಿಷಯಲ್ಲೂ ಇದೇ ಆಗಿದ್ದು, ಅವರು ಸ್ವ - ಇಚ್ಛೆಯಿಂದ ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ಇದನ್ನು ಟೀಕಿಸಿ ಮಾತನಾಡಿರುವ ಎಎಪಿ ವಕ್ತಾರೆ ಯೋಗೇಶ್​ ಜಡ್ವಾನಿ, ಇದು ಪೂರ್ವ-ನಿಯೋಜಿತ ನಿರ್ವಹಣೆ ಆಗಿದ್ದು, ಸಾಮಾನ್ಯ ಮತ್ತು ಬಡ ಜನರಿಗೆ ಬಿಜೆಪಿ ಒತ್ತಡ ಎದುರಿಸಲು ಸಾಧ್ಯವಾಗುವುದಿಲ್ಲ. ಬಿಜೆಪಿ ಅವರನ್ನು ಹಾದಿತಪ್ಪಿಸುತ್ತಿದೆ. ಆದರೆ, ಮತದಾನದ ದಿನ ಅವರೆಲ್ಲ ನಿಸ್ಸಂಶಯವಾಗಿ ಎಎಪಿ ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ ಎಂದರು.

ಕಾಂಗ್ರೆಸ್​ ವಕ್ತಾರ ಅನೂಪ್​ ರಜಪೂತ್​ ಮಾತನಾಡಿ, ಬಿಜೆಪಿ ಒತ್ತಾಯ ಪೂರ್ವಕವಾಗಿ ಈ ಕೆಲಸ ಮಾಡಿಸುತ್ತಿದೆ. ಇದನ್ನು ವಿರೋಧಿಸಿದರೆ, ಅವರು ವಿರೋಧ ವ್ಯಕ್ತಪಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್ ಚುನಾವಣೆ​: ನಾಮಪತ್ರ ಸಲ್ಲಿಕೆಗೆ ಐಷಾರಾಮಿ ಲಂಬೋರ್ಗಿನಿ ಕಾರಲ್ಲಿ ಬಂದ ಕಾಂಗ್ರೆಸ್​ ಅಭ್ಯರ್ಥಿ

ABOUT THE AUTHOR

...view details