ಕರ್ನಾಟಕ

karnataka

ಮದುವೆ ಮುಗಿಸಿ ಹಿಂತಿರುಗುವ ವೇಳೆ ಮರಕ್ಕೆ ಡಿಕ್ಕಿ ಹೊಡೆದ ಕಾರು; 6 ಮಂದಿ ಸಾವು

By ETV Bharat Karnataka Team

Published : Nov 18, 2023, 12:46 PM IST

Road accident in Jharkhand: ಜಾರ್ಖಂಡ್​ನ ಗಿರಿದಿಹ್​ನಲ್ಲಿ ರಸ್ತೆ ಅಪಘಾತ ಸಂಭವಿಸಿ 6 ಮಂದಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ.

6 people died in road accident in Giridih
ರಸ್ತೆ ಅಪಘಾತ

ಗಿರಿದಿಹ್(ಜಾರ್ಖಂಡ್‌) :ಮದುವೆ ಮೆರವಣಿಗೆ ಮುಗಿಸಿ ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದು 6 ಮಂದಿ ಸಾವನ್ನಪ್ಪಿರುವ ದುರ್ಘಟನೆ ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ನಡೆದಿದೆ. ಮುಫಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗ್ಮಾರಾ ಬಳಿ ಶನಿವಾರ ಮುಂಜಾನೆ ಈ ಭೀಕರ ಅಪಘಾತ ಸಂಭವಿಸಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಮುಫಸಿಲ್ ಪೊಲೀಸ್ ಠಾಣೆ ಪ್ರಭಾರಿ ಕಮಲೇಶ್ ಪಾಸ್ವಾನ್ ಘಟನಾ ಸ್ಥಳಕ್ಕೆ ಆಗಮಿಸಿದಾಗ ಸ್ಥಳದಲ್ಲಿ 5 ಜನ ಸಾವನ್ನಪ್ಪಿದ್ದರು. ತಕ್ಷಣವೇ ಗಾಯಗೊಂಡ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಸದರ್ ಆಸ್ಪತ್ರೆಗೆ ದಾಖಲಿಸಿದರು. ಇಲ್ಲಿ ಚಿಕಿತ್ಸೆ ವೇಳೆ ಇನ್ನೊಬ್ಬ ವ್ಯಕ್ತಿ ಮೃತಪಟ್ಟಿದ್ದು ಸಾವಿನ ಸಂಖ್ಯೆ 6 ಕ್ಕೆ ಏರಿದೆ.

ಇನ್ನು ಅಫಘಾತಕ್ಕೆ ಅತೀ ವೇಗದ ಚಾಲನೆಯೇ ಕಾರಣ ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಮರಕ್ಕೆ ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಅಪಘಾತ ನಡೆದಾಗ ಅಲ್ಲಿದ್ದ ಸಾರ್ವಜನಿಕರು ಆಗಲೇ ಕಾರಿನೊಳಗೆ ಸಿಲುಕಿದ್ದವರ ರಕ್ಷಣೆ ಮುಂದಾಗಿ ಬಳಿಕ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಮುಫಸಿಲ್ ಪೊಲೀಸ್ ಠಾಣೆ ಪ್ರಭಾರಿ ಕಮಲೇಶ್ ಪಾಸ್ವಾನ್ ತಮ್ಮ ಠಾಣಾ ತಂಡದೊಂದಿಗೆ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಸೇರಿದಂತೆ ಸಾವನ್ನಪ್ಪಿದವರ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದರು. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯಬೇಕಿದೆ.

ಪೊಲೀಸ್​ ಮಾಹಿತಿ ಪ್ರಕಾರ, ಇದು ಮೊಹಮ್ಮದ್ ಎಂಬುವರ ಪುತ್ರ ಚಂದ್ ರಸಿದ್ ಅವರ ಮದುವೆ ಕಾರ್ಯಕ್ರಮವಾಗಿತ್ತು. ನವೆಂಬರ್ 17 ರ ರಾತ್ರಿ ಮದುವೆ ಕಾರ್ಯಕ್ರಮ ಮುಗಿದು ಹಾಗೇ ಥೋರಿಯಾದಿಂದ ಟಿಕೋಡಿಹ್​ಗೆ ಮೆರವಣಿಗೆ ನಡೆದಿದೆ. ಬಳಿಕ ಸುಮಾರು 10 ಮಂದಿ ಕಾರಿನಲ್ಲಿ ಮತ್ತೆ ಮರಳಲು ಥೋರಿಯಾಗೆ ತೆರಳಿದ್ದರು. ದುರದೃಷ್ಟವಶಾತ್​ ಮುಫಸಿಲ್ ಪೊಲೀಸ್ ಠಾಣೆ ವ್ಯಾಪ್ತಿಗೆ ಕಾರು ತಲುಪುವ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ವೇಗವಾಗಿ ಬಂದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಕುರಿತು ಮಾಹಿತಿ ಪಡೆದ ಕಾಂಗ್ರೆಸ್ ಮುಖಂಡ ನರೇಶ್ ವರ್ಮಾ ಕೂಡ ಸದರ್ ಆಸ್ಪತ್ರೆಗೆ ಆಗಮಿಸಿ ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಸಂತಾಪ ಹೇಳಿದ್ದಾರೆ. ಇನ್ನು, ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸಿಪಿಐ(ಎಂಎಲ್) ಮುಖಂಡ ರಾಜೇಶ್ ಸಿನ್ಹಾ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ವೈದ್ಯಕೀಯ ಪವಾಡ: ಗರ್ಭದಲ್ಲೇ ಅವಳಿ ಮಕ್ಕಳ ಮೊದಲ ಭ್ರೂಣ ಸಾವು, 125 ದಿನದ ಬಳಿಕ ಜನಿಸಿದ ಎರಡನೇ ಶಿಶು

ABOUT THE AUTHOR

...view details