ಕರ್ನಾಟಕ

karnataka

ಜಿಲ್ಲೆಗಳ ಅಭಿವೃದ್ಧಿ ಹೊಣೆ: ಸಚಿವರಿಗೆ ಮತ್ತೊಂದು ಟಾಸ್ಕ್​ ನೀಡಿದ ಪಂಜಾಬ್​ ಸಿಎಂ

By

Published : Jul 17, 2022, 1:51 PM IST

ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್ ತಮ್ಮ ಸಚಿವರಿಗೆ ಮತ್ತೊಂದು ಟಾಸ್ಕ್​ ನೀಡಿದ್ದಾರೆ. ಜಿಲ್ಲೆಗಳನ್ನು ಹಂಚಿಕೆ ಮಾಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದ್ದಾರೆ.

ಪಂಜಾಬ್​ ಸಚಿವರಿಗೆ ಮತ್ತೊಂದು ಟಾಸ್ಕ್​ ನೀಡಿದ ಸಿಎಂ ಭಗವಂತ್​ ಮಾನ್​
ಪಂಜಾಬ್​ ಸಚಿವರಿಗೆ ಮತ್ತೊಂದು ಟಾಸ್ಕ್​ ನೀಡಿದ ಸಿಎಂ ಭಗವಂತ್​ ಮಾನ್​

ಚಂಡೀಗಢ:ಹಲವಾರು ಜನಪರ ಕಾರ್ಯಗಳನ್ನು ಜಾರಿ ಮಾಡುತ್ತಿರುವ ಪಂಜಾಬ್ ಸಿಎಂ ಭಗವಂತ್​ ಮಾನ್ ಇದೀಗ ಮತ್ತೊಂದು ಅಂಥಹದ್ದೇ ಹೆಜ್ಜೆಯನ್ನಿಟ್ಟಿದ್ದಾರೆ. ತಮ್ಮ ಸಂಪುಟದ 14 ಸಚಿವರಿಗೆ ರಾಜ್ಯದ ಜಿಲ್ಲೆಗಳನ್ನು ಹಂಚಿಕೆ ಮಾಡಿ ಅಲ್ಲಿನ ಸಮಸ್ಯೆ ಮತ್ತು ನಿಂತಿರುವ ಕಾಮಗಾರಿಗಳಿಗೆ ವೇಗ ನೀಡುವ ಟಾಸ್ಕ್​ ನೀಡಿದ್ದಾರೆ.

ಜಿಲ್ಲೆಯ ಜವಾಬ್ದಾರಿ ವಹಿಸಿಕೊಂಡಿರುವ ಸಚಿವರು ನಿರಂತರವಾಗಿ ಅಲ್ಲಿಗೆ ಭೇಟಿ ನೀಡಬೇಕು. ಜನರ ಜೊತೆಗೂಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಬೇಕು. ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿ ಸಭೆ ನಡೆಸುವ ಮೂಲಕ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಸಿಎಂ ತಾಕೀತು ಮಾಡಿದ್ದಾರೆ. ವಿಶೇಷ ಅಂದರೆ ಯಾವೊಬ್ಬ ಸಚಿವರಿಗೆ ತವರು ಜಿಲ್ಲೆಯನ್ನು ಹಂಚಿಕೆ ಮಾಡಿಲ್ಲ.

ಈ ಸಂಬಂಧ ಸ್ವತಃ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿ ಸಚಿವರಿಗೆ ನೀಡಿರುವ ಜಿಲ್ಲಾವಾರು ಜವಾಬ್ದಾರಿಗಳ ಪಟ್ಟಿಯನ್ನೂ ಹಂಚಿಕೊಂಡಿದ್ದಾರೆ.

"ಸರ್ಕಾರದ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ಜನಕಲ್ಯಾಣ ಯೋಜನೆಗಳ ಲಾಭ ಸಿಗಲಿದೆ. ಪ್ರತಿಯೊಂದು ಸಣ್ಣ ಸಮಸ್ಯೆಗೂ ಪರಿಹಾರ ಸಿಗಲಿದೆ. ಇದರೊಂದಿಗೆ ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ. ಹೊಸ ಯೋಜನೆಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಸಚಿವ ಸಂಪುಟದ ಸಹೋದ್ಯೋಗಿಗಳು ನಿರ್ವಹಿಸಲಿದ್ದಾರೆ. ಪಂಜಾಬ್ ಮತ್ತು ಪಂಜಾಬಿಗಳ ಸುಧಾರಣೆಗೆ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಗುಂಡೇರಿಸಿಕೊಂಡು ಗುರಾಯಿಸಿದ್ದಕ್ಕೆ ಬಾಟಲಿಯಲ್ಲಿ ಹೊಡೆದಾಡಿದ ರೌಡಿಗಳು

ABOUT THE AUTHOR

...view details