ಕರ್ನಾಟಕ

karnataka

ಆಜಾದಿ ಕಾ ಅಮೃತ್​ ಮಹೋತ್ಸವ: ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ಮೋದಿ

By

Published : Aug 15, 2021, 7:45 AM IST

Updated : Aug 15, 2021, 8:23 AM IST

ದೇಶದ ಜನತೆ ಸ್ವಾತಂತ್ರ್ಯ ದಿನದ ಅಮೃತ್​ ಮಹೋತ್ಸವ ಆಚರಿಸುತ್ತಿದ್ದು, ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

PM Modi
ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ಮೋದಿ

ನವದೆಹಲಿ:ಕೋವಿಡ್​ ಸಾಂಕ್ರಾಮಿಕದ ನಡುವೆಯೂ ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದ್ದಾರೆ.

ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ಮೋದಿ

ಮೋದಿಯವರು ದೇಶದ ಪ್ರಧಾನಿಯಾಗಿ ಕೆಂಪು ಕೋಟೆ ಮೇಲೆ ಸತತ 8ನೇ ಬಾರಿಗೆ ಧ್ವಜಾರೋಹಣ ಮಾಡಿದ್ದು, ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ನಮೋ ಮಾಡುತ್ತಿರುವ ಮೂರನೇ ಬಾರಿಯ ಸ್ವಾತಂತ್ರ್ಯೋತ್ಸವ ಭಾಷಣ ಇದಾಗಿದೆ.

ಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ಮೋದಿ ಅವರು ರಾಜ್‌ಘಾಟ್​ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮಿಸಿದರು. ಬಳಿಕ ಕೆಂಪು ಕೋಟೆಗೆ ಆಗಮಿಸಿ ಗಾರ್ಡ್ ಆಫ್​ ಆನರ್​ ಸ್ವೀಕರಿಸಿದರು.

Last Updated :Aug 15, 2021, 8:23 AM IST

ABOUT THE AUTHOR

...view details