ಕರ್ನಾಟಕ

karnataka

ಗಣೇಶ ಮೂರ್ತಿಗಳ ನಿಮಜ್ಜನದ ವೇಳೆ ದುರಂತ: ಪ್ರತ್ಯೇಕ ಘಟನೆಯಲ್ಲಿ 7 ಜನರ ಸಾವು

By

Published : Sep 9, 2022, 10:11 PM IST

people-drowned-during-idol-immersion-in-mahendragarh
ಗಣೇಶ ಮೂರ್ತಿಗಳ ನಿಮಜ್ಜನದ ವೇಳೆ ದುರಂತ: ಪ್ರತ್ಯೇಕ ಘಟನೆಯಲ್ಲಿ 7 ಜನರ ಸಾವು

ಹರಿಯಾಣದಲ್ಲಿ ಗಣೇಶ ಮೂರ್ತಿಗಳ ನಿಮಜ್ಜನದ ವೇಳೆ ಏಳು ಜನರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸೋನಿಪತ್/ಮಹೇಂದ್ರಗಢ:ಹರಿಯಾಣದಲ್ಲಿ ಗಣೇಶ ಮೂರ್ತಿಗಳ ನಿಮಜ್ಜನದ ವೇಳೆ ಭಾರಿ ದುರಂತ ಸಂಭವಿಸಿದೆ. ಸೋನಿಪತ್‌ ಹಾಗೂ ಮಹೇಂದ್ರಗಢ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಏಳು ಜನರು ಮೃತಪಟ್ಟಿದ್ದಾರೆ.

ಮಹೇಂದ್ರಗಢ ಜಿಲ್ಲೆಯ ಮೊಹಲ್ಲಾ ಧಾನಿಯ ಗಣೇಶ ಮಂಡಲದಿಂದ ನಿಮಜ್ಜನದ ವೇಳೆ ದೊಡ್ಡ ಕಾಲುವೆಯಲ್ಲಿ ವಿಗ್ರಹವನ್ನು ಮುಳುಗಿಸುವಾಗ ಬಲವಾದ ಪ್ರವಾಹಕ್ಕೆ ಹಲವರು ಕೊಚ್ಚಿ ಹೋಗಿದ್ದಾರೆ. ಇದರಲ್ಲಿ ನಾಲ್ವರು ಮೃತಪಟ್ಟಿದ್ದು, 5 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಇತ್ತ, ಸೋನಿಪತ್‌ನ ಮಿಮಾರ್‌ಪುರ ಘಾಟ್‌ನಲ್ಲಿ ಮೂವರು ಜನರು ಯಮುನಾ ನದಿಯಲ್ಲಿ ಸಾವನ್ನಪ್ಪಿದ್ದಾರೆ. ಗಣೇಶ ಮೂರ್ತಿ ನಿಮಜ್ಜನದ ವೇಳೆ ಮೂವರೂ ಯಮುನಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹಗಳ ಪತ್ತೆಗಾಗಿ ಕ್ರಮ ವಹಿಸಿದ್ದಾರೆ.

ಇದನ್ನೂ ಓದಿ:ಗಣೇಶನ ಪಾದ ಮುಟ್ಟಿದ ದಲಿತ ಬಾಲಕ: ನೀರಿನ ಬಾಟಲಿ ಮುಟ್ಟಿದ ಎಂಬ ಕಾರಣಕ್ಕೆ ತಂದೆ, ಮಗನ ಮೇಲೆ ಹಲ್ಲೆ

ABOUT THE AUTHOR

...view details