ಕರ್ನಾಟಕ

karnataka

ಮೇಘಾಲಯ: ನೂತನ ಸಿಎಂ ಕಾನ್ರಾಡ್​ ಸಂಗ್ಮಾ ನಾಳೆ ಪ್ರಮಾಣ ವಚನ

By

Published : Mar 6, 2023, 2:32 PM IST

ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್​ಪಿಪಿ ಸರ್ಕಾರ ರಚಿಸಲಿದೆ. ಮಾ.7 ರಂದು ಪ್ರಮಾಣ ವಚನ ಸಮಾರಂಭ ನಡೆಯಲಿದೆ.

ಮೇಘಾಲಯ: ನೂತನ ಸಿಎಂ ಕಾನ್ರಾಡ್​ ಸಂಗ್ಮಾ ನಾಳೆ ಪ್ರಮಾಣ ವಚನ
Conrad Sangma to form govt in Meghalaya, swearing-in ceremony on 7th March

ಶಿಲ್ಲಾಂಗ್ (ಮಣಿಪುರ) :ಮೇಘಾಲಯದಲ್ಲಿ ಸರ್ಕಾರ ರಚನೆಯ ಅನಿಶ್ಚಿತತೆ ಕೊನೆಗೂ ಅಂತ್ಯಗೊಂಡಿದೆ. ರಾಜ್ಯದಲ್ಲಿ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಪಕ್ಷ ಸರ್ಕಾರ ರಚಿಸಲಿದೆ. UDP ಮತ್ತು THE PDF ಸರ್ಕಾರ ರಚಿಸಲು ಕಾನ್ರಾಡ್ ಸಂಗ್ಮಾಗೆ ಬೆಂಬಲ ನೀಡಿವೆ. ಎರಡೂ ಪಕ್ಷಗಳ ಅಧ್ಯಕ್ಷರು ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ತಿಳಿಸಿ ಕಾನ್ರಾಡ್ ಸಂಗ್ಮಾ ಅವರಿಗೆ ಪತ್ರ ಬರೆದಿದ್ದಾರೆ. ಮಾರ್ಚ್ 2 ರಂದು ಪ್ರಕಟವಾದ ಮೇಘಾಲಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಎನ್​ಪಿಪಿ 26 ಸ್ಥಾನಗಳನ್ನು ಗೆದ್ದಿರುವುದನ್ನು ಸ್ಮರಿಸಬಹುದು. ಆದರೆ ಸರ್ಕಾರ ರಚಿಸಲು 26 ಸ್ಥಾನಗಳು ಸಾಕಾಗುವುದಿಲ್ಲ. ಮತ್ತೊಂದೆಡೆ ಯಾವುದೇ ಒಂದು ಪಕ್ಷಕ್ಕೆ ಸರ್ಕಾರ ರಚಿಸುವಷ್ಟು ಸ್ಥಾನಗಳು ಬಂದಿಲ್ಲ. ಹೀಗಾಗಿ ರಾಜ್ಯದಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎಂಬ ಬಗ್ಗೆ ಅನಿಶ್ಚಿತತೆ ಉಂಟಾಗಿತ್ತು.

ಏತನ್ಮಧ್ಯೆ, ಸರ್ಕಾರ ರಚನೆಯಲ್ಲಿ ಮುಂದುವರೆದಿದ್ದ ಅನಿಶ್ಚಿತತೆಯ ನಡುವೆ ತೃಣಮೂಲ ಕಾಂಗ್ರೆಸ್‌ನ ಮುಕುಲ್ ಸಂಗ್ಮಾ ಕೂಡ ಸರ್ಕಾರ ರಚಿಸಲು ಪ್ರಯತ್ನ ನಡೆಸಿದ್ದರು. ಆದರೆ ಯುಪಿಡಿ ಮತ್ತು ಪಿಡಿಎಫ್ ಭಾನುವಾರ ಕಾನ್ರಾಡ್​ ಸಂಗ್ಮಾ ಅವರಿಗೆ ಬೆಂಬಲ ನೀಡಿದ ನಂತರ ಕಾನ್ರಾಡ್ ಅವರ ಸರ್ಕಾರ ರಚನೆಗೆ ದಾರಿ ಸುಗಮವಾಯಿತು. ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ ಪಕ್ಷ ಈಗ ಒಟ್ಟು 45 ಶಾಸಕರೊಂದಿಗೆ ಸರ್ಕಾರ ರಚಿಸಲಿದೆ. ಈ ಬಾರಿಯ ಚುನಾವಣಾ ಫಲಿತಾಂಶದಲ್ಲಿ ಯುಡಿಪಿ ಪಕ್ಷ 11 ಸ್ಥಾನ ಮತ್ತು ಪಿಡಿಎಫ್ ಪಕ್ಷ 2 ಸ್ಥಾನ ಪಡೆದಿದ್ದವು. ಆರಂಭದಲ್ಲಿ, ಕಾನ್ರಾಡ್ ಸಂಗ್ಮಾ ಅವರು ಒಟ್ಟು 32 ಶಾಸಕರನ್ನು ಹೊಂದಿದ್ದರು. ಇವರಲ್ಲಿ ಇಬ್ಬರು ಬಿಜೆಪಿ, ಇಬ್ಬರು ಎಚ್‌ಎಸ್‌ಪಿಡಿಪಿ ಮತ್ತು ಇಬ್ಬರು ಸ್ವತಂತ್ರ ಶಾಸಕರು ಸೇರಿದ್ದಾರೆ.

ಮಾರ್ಚ್ 7 ರಂದು ಮೇಘಾಲಯದಲ್ಲಿ ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಮೇಘಾಲಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ತಲಾ ಐದು ಸ್ಥಾನಗಳನ್ನು ಗೆದ್ದಿವೆ. ವಾಯ್ಸ್ ಆಫ್ ದಿ ಪೀಪಲ್ಸ್ ಪಾರ್ಟಿ ನಾಲ್ಕು ಸ್ಥಾನಗಳನ್ನು ಮತ್ತು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಎರಡು ಸ್ಥಾನಗಳನ್ನು ಗೆದ್ದಿವೆ. ಮೇಘಾಲಯ ವಿಧಾನಸಭೆಯ ಒಟ್ಟು ಸದಸ್ಯರ ಬಲ 60 ಆಗಿದೆ. ಈಶಾನ್ಯ ರಾಜ್ಯಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿಯವರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಪ್ರಧಾನಿಯವರೊಂದಿಗೆ ಆಗಮಿಸುವ ಸಾಧ್ಯತೆಯಿದೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಂಡಿದೆ. ನಾಗಾಲ್ಯಾಂಡ್‌ನಲ್ಲಿ ಮಿತ್ರಪಕ್ಷವಾದ ಎನ್‌ಡಿಪಿಪಿಯ ನೆರವಿನೊಂದಿಗೆ ಸರ್ಕಾರ ರಚಿಸಲಿದೆ. ಎಲ್ಲಾ ಮೂರು ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟದ ಗೆಲುವಿನ ನಂತರ, ದೆಹಲಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಜನರು ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಂಬುತ್ತಾರೆ ಎಂಬುದನ್ನು ಚುನಾವಣಾ ಫಲಿತಾಂಶಗಳು ತೋರಿಸುತ್ತವೆ ಎಂದು ಹೇಳಿದರು.

ಇದನ್ನೂ ಓದಿ : ಚುನಾವಣೆ ಫಲಿತಾಂಶ: ಮೇಘಾಲಯ ಮುಖ್ಯಮಂತ್ರಿ ನಿವಾಸದಲ್ಲಿ ಸಂಭ್ರಮಾಚರಣೆ

ABOUT THE AUTHOR

...view details