ಕರ್ನಾಟಕ

karnataka

ಲಂಡನ್​ನಲ್ಲಿ ಬಸವಣ್ಣ, ಅಂಬೇಡ್ಕರ್​ಗೆ ಗೌರವಾರ್ಪಣೆ: ಸಚಿವ ಲಿಂಬಾವಳಿ ಭಾಗಿ

By

Published : Feb 20, 2021, 10:52 PM IST

ಲಂಡನ್‌ ಕನ್ನಡಿಗರಿಂದ ಬಸವಣ್ಣ ಹಾಗೂ ಅಂಬೇಡ್ಕರ್‌ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಶ್ರೀ ಬಸವಲಿಂಗ ಪಟ್ಟದೇವರು, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಭಾಗಿಯಾಗಿದ್ದರು.

Joint Tribute to Lord Basaveshwara & Dr B. R Ambedkar
Joint Tribute to Lord Basaveshwara & Dr B. R Ambedkar

ಹೈದರಾಬಾದ್​: ಲಂಡನ್​ನ ಲ್ಯಾಂಬೆತ್​ ಬಸವೇಶ್ವರ​ ಫೌಂಡೇಷನ್​ ಹಾಗೂ ವಿವಿಧ ವಿದೇಶಿ ಕನ್ನಡ ಸಂಘಟನೆಗಳಿಂದ ಬಸವಣ್ಣ ಹಾಗೂ ಅಂಬೇಡ್ಕರ್​ ಅವರ ಸ್ಮರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಝೂಮ್ ಆ್ಯಪ್​ ಮೂಲಕ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಬಸವಲಿಂಗಪಟ್ಟದೇವರು ದಿವ್ಯ ಸಾನಿಧ್ಯ ವಹಿಸಿದ್ದರು. ಭಾರತೀಯ ಕಾಲಮಾನ ಸಂಜೆ 5:30ಕ್ಕೆ ಕಾರ್ಯಕ್ರಮ ನಡೆಯಿತು. ಲಂಡನ್​ನ ಬಸವ ಪುತ್ಥಳಿ ಬಳಿ ಸಂವಿಧಾನ ಶಿಲ್ಪಿಯ ಗೌರವಾರ್ಪಣೆ ಕಾರ್ಯಕ್ರಮ ನಡೆಸಲಾಗಿದ್ದು, ಕಾರ್ಯಕ್ರಮದಲ್ಲಿ ಅನೇಕರು ಭಾಗಿಯಾಗಿದ್ದರು. ಲ್ಯಾಂಬೆತ್​ ನಗರದ ಮಾಜಿ ಮೇಯರ್​ ಡಾ. ನೀರಜ ಪಟೇಲ್​, ಲಂಡನ್​​ನಲ್ಲಿರುವ ಭಾರತೀಯ ಹೈಕಮೀಷನರ್​ ರುಚಿ ಘನಶ್ಯಾಮ್​ ಭಾಗಿಯಾಗಿದ್ದರು. ಈ ವೇಳೆ ಅಂಬೇಡ್ಕರ್​, ಬಸವಣ್ಣನ ಪುತ್ಥಳಿಗೆ ನಮನ ಸಲ್ಲಿಕೆ ಮಾಡಲಾಯಿತು.

ಥೇಮ್ಸ್ ನದಿ ದಂಡೆಯಲ್ಲಿರುವ ಕ್ರಾಂತಿಕಾರಿ ಬಸವಣ್ಣನವರ ಪುತ್ಥಳಿ ನಿರ್ಮಾಣ ಮಾಡಲಾಗಿದ್ದು, ಅಮೆರಿಕ, ಇಂಗ್ಲೆಂಡ್​, ಆಸ್ಟ್ರೇಲಿಯಾ ಸೇರಿ ವಿವಿಧ ದೇಶಗಳ ಕನ್ನಡ ಪರ ಸಂಘಟನೆ ಪ್ರತಿನಿಧಿಗಳು ಭಾಗಿಯಾಗಿದ್ದರು. ಝೂಮ್​ ಆ್ಯಪ್​ ಮೂಲಕ ಭಾಗಿಯಾಗಿ ಮಾತನಾಡಿದ ಸಚಿವರು ಜಗಜ್ಯೋತಿ ಬಸವಣ್ಣ, ಅಂಬೇಡ್ಕರ್​ ಹಾಗೂ ಮಹಾತ್ಮ ಗಾಂಧೀಜಿ ಅವರ ಚರಿತ್ರೆಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಮುಂದಾಗಬೇಕು ಎಂದಿದ್ದಾರೆ.

ABOUT THE AUTHOR

...view details