ಕರ್ನಾಟಕ

karnataka

18 ಸಾವಿರದ ಗಡಿ ದಾಟಿದ ಕೋವಿಡ್​ ಪ್ರಕರಣ.. ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು!

By

Published : Jun 30, 2022, 10:33 AM IST

ಕಳೆದ 24 ಗಂಟೆಯಲ್ಲಿ ಕೋವಿಡ್​ ಪ್ರಕರಣ ಸಂಖ್ಯೆ 18 ಸಾವಿರದ ಗಡಿ ದಾಟಿದ್ದು, ಈ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಕಂಡು ಬಂದಿವೆ.

ndia reports fresh Covid cases, India reports covid death cases, India reports covid Active cases, India reports covid recovery cases, India reports covid vaccine doses, ಭಾರತವು ಹೊಸ ಕೋವಿಡ್ ಪ್ರಕರಣಗಳ ವರದಿ, ಭಾರತವು ಕೋವಿಡ್ ಸಾವಿನ ಪ್ರಕರಣಗಳ ವರದಿ, ಭಾರತವು ಕೋವಿಡ್ ಸಕ್ರಿಯ ಪ್ರಕರಣಗಳ ವರದಿ, ಭಾರತವು ಕೋವಿಡ್ ಚೇತರಿಕೆ ಪ್ರಕರಣಗಳ ವರದಿ, ಭಾರತವು ಕೋವಿಡ್ ಲಸಿಕೆ ಪ್ರಮಾಣ ವರದಿ.
ಸಾವಿರದ ಗಡಿ

ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೋವಿಡ್ ಸೋಂಕಿತರ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 18,819 ಹೊಸ ಕೇಸ್​​​ಗಳು ದೃಢಪಟ್ಟಿದ್ದು, 39 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದೊಂದು ದಿನದಲ್ಲಿ 13,827 ಜನರು ಕೋವಿಡ್​​ನಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಈವರೆಗೆ ಒಟ್ಟು 4,28,22,493 ಜನರು ಗುಣಮುಖರಾಗಿದ್ದಾರೆ. ಸದ್ಯಕ್ಕೆ ದೇಶದಲ್ಲಿ 1,04,555 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸಾವಿನ ಸಂಖ್ಯೆ 5,25,116 ಕ್ಕೆ ಏರಿಕೆಯಾಗಿದೆ.

ಓದಿ:ರಾಜ್ಯದಲ್ಲಿಂದು ಸಾವಿರ ಗಡಿ ದಾಟಿದ ಕೋವಿಡ್, ಇಬ್ಬರು ಬಲಿ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಇಲ್ಲಿಯವರೆಗೆ 86.23 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಬುಧವಾರ 4,52,430 ಮಂದಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದೆ. ಪ್ರಸ್ತುತ ಚೇತರಿಕೆಯ ಪ್ರಮಾಣವು ಪ್ರಸ್ತುತ ಶೇ 98.55 ರಷ್ಟಿದ್ದು, ದೈನಂದಿನ ಪಾಸಿಟಿವಿಟಿ ದರವು ಶೇ 4.16 ರಷ್ಟಿದೆ. ಇಲ್ಲಿಯವರೆಗೆ 197.61 ಕೋಟಿ ಕೊರೊನಾ ಡೋಸ್​ಗಳನ್ನು ನೀಡಲಾಗಿದೆ.

ಈ ನಡುವೆ ಪಂಜಾಬ್​ನಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details