ಕರ್ನಾಟಕ

karnataka

ಮೋಹನ್​ ಭಾಗವತ್​ ರಾಷ್ಟ್ರಪಿತ, ರಾಷ್ಟ್ರ ಋಷಿ ಇದ್ಧಂತೆ: ಇಮಾಮ್​ಗಳ ಮುಖ್ಯಸ್ಥರ ಬಣ್ಣನೆ

By

Published : Sep 22, 2022, 7:02 PM IST

imam-association-chief-praise-on-mohan-bhagwat

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್​ ಅವರು ಅಖಿಲ ಭಾರತ ಇಮಾಮ್​ ಸಂಘದ ಮುಖ್ಯಸ್ಥರಾದ ಡಾ.ಉಮರ್ ಅಹ್ಮದ್ ಇಲ್ಯಾಸಿ ಸೇರಿದಂತೆ ಮತ್ತಿತರ ಮುಸ್ಲಿಂ ಬುದ್ಧಿಜೀವಿಗಳನ್ನು ಭೇಟಿ ಮಾಡಿದರು.

ನವದೆಹಲಿ:ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್​ ಅವರನ್ನು ಭೇಟಿ ಮಾಡಿದ ಅಖಿಲ ಭಾರತ ಇಮಾಮ್​ ಸಂಘದ ಮುಖ್ಯಸ್ಥರಾದ ಡಾ.ಉಮರ್ ಅಹ್ಮದ್ ಇಲ್ಯಾಸಿ ಅವರು ಭಾಗವತ್​ರನ್ನು "ರಾಷ್ಟ್ರದ ಪಿತಾಮಹ" ಎಂದು ಬಣ್ಣಿಸಿದ್ದಾರೆ.

ದೆಹಲಿಯಲ್ಲಿ ಡಾ.ಇಲ್ಯಾಸಿ ಸೇರಿದಂತೆ ಹಲವು ಮುಸ್ಲಿಂ ಬುದ್ಧಿಜೀವಿಗಳನ್ನು ಆರ್​ಎಸ್​ಎಸ್​ ಮುಖ್ಯಸ್ಥರು ಭೇಟಿ ಮಾಡಿದರು. ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಡಾ.ಇಲ್ಯಾಸಿ ಅವರು, "ನನ್ನ ಆಹ್ವಾನದ ಮೇರೆಗೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭೇಟಿ ಮಾಡಿದರು. ಅವರು ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ ಇದ್ದಂತೆ. ಅವರ ಭೇಟಿಯಿಂದ ಉತ್ತಮ ಸಂದೇಶ ಹೊರ ಬಂದಿದೆ" ಎಂದು ಅವರು ಹೇಳಿದರು.

"ನಾವು ದೇವರನ್ನು ಆರಾಧಿಸುವ ವಿಧಾನಗಳು ವಿಭಿನ್ನವಾಗಿರಬಹುದು. ಆದರೆ ಧರ್ಮವೆಂದರೆ ಮಾನವೀಯತೆ. ಅದರ ನಂತರ ಎಲ್ಲವೂ. ಧರ್ಮಗಳು ಯಾವುದೇ ಇದ್ದರೂ ದೇಶ ಮೊದಲು ಎಂಬುದು ನಮ್ಮೆಲ್ಲರ ನಂಬಿಕೆ" ಎಂದು ಉಮರ್ ಅಹ್ಮದ್ ಇಲ್ಯಾಸಿ ಅವರು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಸರಸಂಘಚಾಲಕರಾದ ಮೋಹನ್​ ಭಾಗವತ್​ ಅವರು ಮಧ್ಯ ದೆಹಲಿಯ ಕಸ್ತೂರಿಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಯಲ್ಲಿ ಡಾ.ಉಮರ್ ಅಹ್ಮದ್ ಇಲ್ಯಾಸಿ ಸೇರಿದಂತೆ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿದರು. ಬಳಿಕ ಉತ್ತರ ದೆಹಲಿಯ ಆಜಾದ್‌ಪುರದಲ್ಲಿರುವ ಮದರಸಾ ತಜ್ವೀದುಲ್ ಕುರಾನ್‌ಗೆ ಭೇಟಿ ನೀಡಿದರು.

ಒಂದು ತಿಂಗಳಲ್ಲಿ ಮುಸ್ಲಿಂ ಬುದ್ಧಿಜೀವಿಗಳೊಂದಿಗೆ ಆರ್‌ಎಸ್‌ಎಸ್ ಮುಖ್ಯಸ್ಥರು ನಡೆಸುತ್ತಿರುವ ಎರಡನೇ ಸಭೆ ಇದಾಗಿದೆ. ಈ ಹಿಂದೆ ಅವರು ಕೋಮು ಸೌಹಾರ್ದತೆ ಗಟ್ಟಿಗೊಳಿಸಲು ಐವರು ಮುಸ್ಲಿಂ ಬುದ್ಧಿಜೀವಿಗಳನ್ನು ಭೇಟಿ ಮಾಡಿದ್ದರು.

"ಇನ್ನು ಈ ಭೇಟಿಯ ನಿರಂತರ ಚರ್ಚೆಯ ಭಾಗವಾಗಿರಲಿದೆ. ಮೋಹನ್​ ಭಾಗವತರು ಇನ್ನು ಮುಂದೆ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡುತ್ತಾರೆ. ಇದು ನಿರಂತರ ಸಂವಾದ ಪ್ರಕ್ರಿಯೆಯಾಗಿರುತ್ತದೆ" ಎಂದು ಆರ್‌ಎಸ್‌ಎಸ್ ವಕ್ತಾರ ಸುನೀಲ್ ಅಂಬೇಕರ್ ತಿಳಿಸಿದರು.

ಓದಿ:ದೆಹಲಿ ಮಸೀದಿಯಲ್ಲಿ ಮುಖ್ಯ ಇಮಾಮ್​​ರನ್ನು ಭೇಟಿಯಾದ ಆರೆಸ್ಸೆಸ್ ಮುಖ್ಯಸ್ಥ ಭಾಗವತ್

ABOUT THE AUTHOR

...view details