ಕರ್ನಾಟಕ

karnataka

ಇಂಗ್ಲೆಂಡ್​​ಗೆ ರಫ್ತಾಗಬೇಕಿದ್ದ ಕೊರೊನಾ ಲಸಿಕೆಯನ್ನು ಭಾರತದಲ್ಲೇ ಬಳಕೆ ಮಾಡಲು ಅನುಮತಿ!

By

Published : May 12, 2021, 3:41 PM IST

ದೇಶಾದ್ಯಂತ ಕೊರೊನಾ ಹರಡುವ ಬಗ್ಗೆ ಹೆಚ್ಚುತ್ತಿರುವ ಆತಂಕಗಳ ಮಧ್ಯೆ, ಕೇಂದ್ರ ಸರ್ಕಾರವು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಯಿಂದ 50 ಲಕ್ಷ ಡೋಸ್ ‘ಕೋವಿಶೀಲ್ಡ್’ ಅನ್ನು ಯುನೈಟೆಡ್ ಕಿಂಗ್‌ಡಮ್‌ಗೆ ರಫ್ತು ಮಾಡುವ ಮನವಿಯನ್ನು ತಿರಸ್ಕರಿಸಿದೆ.

govt-rejects-sii-request-to-export-50-lakh-doses-of-covishield-to-uk
govt-rejects-sii-request-to-export-50-lakh-doses-of-covishield-to-uk

ನವದೆಹಲಿ: ಭಾರತದಾದ್ಯಂತ ಕೋವಿಡ್ -19 ಲಸಿಕೆಗಳ ಕೊರತೆಯ ವರದಿ ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರವು ಇತ್ತೀಚೆಗೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಯಿಂದ 50 ಲಕ್ಷ ಡೋಸ್ ಕೋವಿಶೀಲ್ಡ್ ಅನ್ನು ಯುನೈಟೆಡ್ ಕಿಂಗ್‌ಡಮ್‌ಗೆ ರಫ್ತು ಮಾಡುವ ಮನವಿಯನ್ನು ತಿರಸ್ಕರಿಸಿ ಆ ಲಸಿಕೆಯನ್ನು ಭಾರತಕ್ಕೆ ಬಳಕೆ ಮಾಡಲು ಸೂಚಿಸಲಾಗಿದೆ.

ಈ ಹಿನ್ನೆಲೆ ಈ ಲಸಿಕೆ ಈಗ ಭಾರತದ ದೇಶೀಯ ಬಳಕೆಗೆ ಲಭ್ಯವಾಗಲಿದೆ ಎಂದು ಸರ್ಕಾರ ಹೇಳಿದೆ. ಲಸಿಕೆಯನ್ನು ಪಡೆಯಲು ಪುಣೆ ಮೂಲದ ಎಸ್‌ಐಐ ಅನ್ನು ಸಂಪರ್ಕಿಸುವಂತೆ ಕೇಂದ್ರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಬ್ರಿಟನ್ ಗೆ ರವಾನಿಸಬೇಕಿದ್ದ ಈ ಲಸಿಕೆಗಳ ಲೇಬಲ್ ಕೋವಿಶೀಲ್ಡ್ ಎಂದು ಇಲ್ಲ. ಬದಲಿಗೆ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಎಂದು ನಮೂದಾಗಿದೆ.

ಈ ಕೋವಿಶೀಲ್ಡ್ ಲಸಿಕೆಯನ್ನು ಈಗ 18-45 ವರ್ಷ ವಯಸ್ಸಿನ ಜನರಿಗೆ ನೀಡಲು ಬಳಸಲಾಗುತ್ತದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ಮಾರ್ಚ್ 23 ರಂದು ಎಸ್‌ಐಐ ಅಧಿಕಾರಿಗಳು ಯುಕೆಗೆ 50 ಲಕ್ಷ ಡೋಸ್ ಕೋವಿಶೀಲ್ಡ್ ಪೂರೈಸಲು ಆರೋಗ್ಯ ಸಚಿವಾಲಯದಿಂದ ಅನುಮತಿ ಕೋರಿದ್ದರು. ಹಾಗೆ ಪೂರೈಕೆಯಿಂದಾಗಿ ಭಾರತದ ಕೊರೊನಾವೈರಸ್ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ತೊಂದರೆಯಾಗುವುದಿಲ್ಲ ಎಂದು ಎಸ್‌ಐಐ ಭರವಸೆ ನೀಡಿತ್ತು.

ಇನ್ನು ರಾಜ್ಯಗಳು ಲಸಿಕೆಗಳನ್ನು ಸರಬರಾಜುದಾರರಿಂದ ನೇರವಾಗಿ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲುವ್ ಅಗ್ರವಾಲ್ ಹೇಳಿದ್ದಾರೆ.

ABOUT THE AUTHOR

...view details