ಕರ್ನಾಟಕ

karnataka

ಹೃದಯಾಘಾತಗೊಂಡು ಕುಸಿದ ವೃದ್ಧ ಮಹಿಳೆ.. ಕ್ಷಣಮಾತ್ರದಲ್ಲಿ ಜೀವ ಉಳಿಸಿದ ವೈದ್ಯ

By

Published : Sep 17, 2022, 10:12 PM IST

ಹೃದಯ ಸ್ತಂಭನಗೊಂಡು ಕುಸಿದ ವೃದ್ಧ ಮಹಿಳೆಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ ಉಸಿರು ನೀಡಿದ ವೈದ್ಯ ದಿಲೀಪ್​ ಪಾಟೀಲ್​. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈದ್ಯರ ಕಾರ್ಯಕ್ಕೆ ಪ್ರಸಂಶೆ ವ್ಯಕ್ತವಾಗಿದೆ.
doctors-gave-life-to-an-old-woman-with-heart-failure
ಹೃದಯಾಘಾತಗೊಂಡ ಕುಸಿದ ವೃದ್ಧ ಮಹಿಳೆ.. ಕ್ಷಣಮಾತ್ರದಲ್ಲಿ ಜೀವ ಉಳಿಸಿದ ವೈದ್ಯ

ಸತಾರಾ (ಮಹಾರಾಷ್ಟ್ರ): ವೈದ್ಯಕೀಯ ತಪಾಸಣೆಗೆಂದು ಖಾಸಗಿ ಆಸ್ಪತ್ರೆಗೆ ಬಂದಿದ್ದ ವೃದ್ಧೆಯೊಬ್ಬರಿಗೆ ಹೃದಯಾಘಾತವಾಗಿದ್ದು, ಅಲ್ಲೇ ಇದ್ದ ವೈದ್ಯರು ಮತ್ತು ಸಿಬ್ಬಂದಿ ಮಹಿಳೆಯ ಹೃದಯಕ್ಕೆ ಮಸಾಜ್​ ಮಾಡುವ ಮೂಲಕ ಪ್ರಥಮ ಚಿಕಿತ್ಸೆ ನೀಡಿ ಮತ್ತೆ ಉಸಿರಾಡುವಂತೆ ಮಾಡಿದ್ದಾರೆ. ಇಡೀ ಘಟನೆ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈದ್ಯರ ಕಾರ್ಯಕ್ಕೆ ಪ್ರಸಂಶೆ ವ್ಯಕ್ತವಾಗಿದೆ.

ಸಾಂಗ್ಲಿ ಜಿಲ್ಲೆಯ ಕಡೆಗಾಂವ್ ತಾಲೂಕಿನ ಅಂಬಕ್ ಚಿಂಚಣಿ ಗ್ರಾಮದ ವೃದ್ಧೆಯೊಬ್ಬರು ಮಧುಮೇಹ ಮತ್ತು ಹೃದ್ರೋಗದಿಂದ ಬಳಲುತ್ತಿದ್ದು, ಸತಾರಾ ಜಿಲ್ಲೆಯ ಕರಡದಲ್ಲಿರುವ ಹೃದ್ರೋಗ ತಜ್ಞ ದಿಲೀಪ್ ಪಾಟೀಲ್ ಅವರ ಆಸ್ಪತ್ರೆಗೆ ಪರೀಕ್ಷೆಗೆ ಬಂದಿದ್ದರು. ಆಸ್ಪತ್ರೆಯ ಬೆಂಚಿನ ಮೇಲೆ ಕುಳಿತಿದ್ದ ವೇಳೆ ಹೃದಯ ಸ್ತಂಭನದಿಂದಾಗಿ ಅವರ ಉಸಿರಾಟ ನಿಂತುಹೋಗಿತ್ತು.

ಹೃದಯಾಘಾತಗೊಂಡ ಕುಸಿದ ವೃದ್ಧ ಮಹಿಳೆ.. ಕ್ಷಣಮಾತ್ರದಲ್ಲಿ ಜೀವ ಉಳಿಸಿದ ವೈದ್ಯ

ಇದನ್ನು ಮನಗಂಡ ಡಾ ದಿಲೀಪ್ ಪಾಟೀಲ್ ಅವರು ಸಿಬ್ಬಂದಿಯ ನೆರವಿನೊಂದಿಗೆ ಅವರ ಎದೆಯ ಮೇಲೆ ಒಂದೂವರೆ ನಿಮಿಷಗಳ ಕಾಲ ಕಾರ್ಡಿಯಾಕ್ ಮಸಾಜ್ (ಪಂಪಿಂಗ್) ಮಾಡಿ ವೃದ್ಧ ಮಹಿಳೆಯ ಜೀವ ಕಾಪಾಡಿದ್ದಾರೆ. ಡಾ ದಿಲೀಪ್ ಪಾಟೀಲ್ ಅವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ:ಟ್ರಾಫಿಕ್‌ನಲ್ಲಿ ಸಿಲುಕಿ ಸಂಕಟ, 3 ಕಿ.ಮೀ ಓಡಿ ಬಂದು ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿದ ಬೆಂಗಳೂರಿನ ವೈದ್ಯ!

ABOUT THE AUTHOR

...view details