ಕರ್ನಾಟಕ

karnataka

ಶಾಲೆ ತೆರೆಯುವ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು: ವಿ.ಕೆ.ಪೌಲ್

By

Published : Jun 23, 2021, 9:30 AM IST

ಶಾಲೆಗಳನ್ನು ಪುನಃ ತೆರೆಯುವ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗಿದೆ. ನಮ್ಮನ್ನು ರಕ್ಷಿಸಿಕೊಳ್ಳುವ ಭರವಸೆ ಇದ್ದಾಗ ಮಾತ್ರ ನಾವು ಇಂಥ ಸವಾಲುಗಳನ್ನು ತೆಗೆದುಕೊಳ್ಳಬೇಕು ಎಂದು ವಿ.ಕೆ.ಪೌಲ್ ಅಭಿಪ್ರಾಯಪಟ್ಟಿದ್ದಾರೆ.

Decision to reopen schools must be taken very cautiously: VK Paul
ಶಾಲೆಗಳು ತೆರೆಯುವ ನಿರ್ಧಾರ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು: ವಿ.ಕೆ.ಪೌಲ್

ನವದೆಹಲಿ:ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ಮತ್ತೆ ತೆರೆಯುವ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೌಲ್, ಶಾಲೆಗಳನ್ನು ಪುನಃ ತೆರೆಯುವ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗಿದೆ. ನಮ್ಮನ್ನು ರಕ್ಷಿಸಿಕೊಳ್ಳುವ ಭರವಸೆ ಇದ್ದಾಗ ಮಾತ್ರ ನಾವು ಇಂಥ ಸವಾಲುಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.

ಸದ್ಯದ ವಿಷಮ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಮತ್ತೆ ತೆರೆಯುವ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ. ಅನೇಕ ರಾಜ್ಯಗಳು ತಾವೇ ಸ್ವಂತ ನಿರ್ಧಾರ ತೆಗೆದುಕೊಂಡು ವೈರಸ್ ಅನ್ನು ಹತೋಟಿಗೆ ತಂದಿವೆ. ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಿದರೆ ಜನರಿಗೆ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಸಾಧ್ಯತೆಯಿದೆ ಎಂದು ವಿ.ಕೆ.ಪೌಲ್ ಹೇಳಿದ್ದಾರೆ.

ಇದನ್ನೂ ಓದಿ:ಭಾರತಕ್ಕೆ ಹೊಸ ಅಪಾಯ ತಂದಿಟ್ಟ ಡೆಲ್ಟಾ ಪ್ಲಸ್​: ವ್ಯಾಕ್ಸಿನ್‌ ಕೆಲಸ ಮಾಡುವುದೇ? ಇಲ್ಲಿದೆ ಪೂರ್ತಿ ವಿವರ..

ಕೊರೊನಾ ಎರಡನೇ ಅಲೆಯೂ ಸಂಭವಿಸದ ದೇಶಗಳಿವೆ. ಅಗತ್ಯವಿರುವ ಕ್ರಮ ಕೈಗೊಂಡರೆ, ಜವಾಬ್ದಾರಿಯುತವಾಗಿ ವರ್ತಿಸಿದರೆ ಕೊರೊನಾ ನಿಯಂತ್ರಣ ಸಾಧ್ಯ ಎಂದಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿದರೆ, ಮೂರನೇ ಅಲೆ ಸಂಭವಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details