ಕರ್ನಾಟಕ

karnataka

ಕೇಂದ್ರ ಸಚಿವ ಅಜಯ್ ಮಿಶ್ರಾ ವಾಹನದ ಮೇಲೆ ಮೊಟ್ಟೆ ಎಸೆದ NSUI ಕಾರ್ಯಕರ್ತರು

By

Published : Oct 31, 2021, 3:37 PM IST

Updated : Oct 31, 2021, 3:44 PM IST

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರನ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇತ್ತೀಚಿನ ಪ್ರತಿಭಟನೆವೊಂದರಲ್ಲಿ ಒಡಿಶಾದಲ್ಲಿ ಸಚಿವರ ವಾಹನದ ಮೇಲೆ ಎನ್‌ಎಸ್‌ಯುಐ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ.

Congress activists hurl eggs at Union Minister Ajay Mishra's vehicle
ಅಜಯ್ ಮಿಶ್ರಾ ಅವರ ವಾಹನದ ಮೇಲೆ ಮೊಟ್ಟೆ ಎಸೆದ NSUI ಕಾರ್ಯಕರ್ತರು

ಭುವನೇಶ್ವರ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಅವರ ವಾಹನದ ಮೇಲೆ ಮೊಟ್ಟೆಗಳನ್ನು ಎಸೆದಿದೆ.

ಲಖೀಂಪುರ ಖೇರಿ ಹಿಂಸಾಚಾರದಲ್ಲಿ ಅವರ ಪುತ್ರನ ಕೈವಾಡವಿದೆ ಎಂದು ಆರೋಪಿಸಿ ಒಡಿಶಾ ಕಾಂಗ್ರೆಸ್ ಸದಸ್ಯರು ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕಪ್ಪು ಬಾವುಟ ಪ್ರದರ್ಶಿಸಿದರು.

ಕೇಂದ್ರ ಸಚಿವ ಅಜಯ್ ಮಿಶ್ರಾ ವಾಹನದ ಮೇಲೆ ಮೊಟ್ಟೆ ಎಸೆದ NSUI ಕಾರ್ಯಕರ್ತರು

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಮಿಶ್ರಾ ಅವರು ಕಟಕ್ ಬಳಿಯ ಮುಂಡಲಿಯಲ್ಲಿರುವ ಸಿಐಎಸ್‌ಎಫ್ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಉದ್ದೇಶದಿಂದ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ.

Last Updated :Oct 31, 2021, 3:44 PM IST

ABOUT THE AUTHOR

...view details