ಕರ್ನಾಟಕ

karnataka

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ: 16 ದಿನ ಬಿಜೆಪಿಯಿಂದ ಸೇವಾ ಪಾಕ್ಷಿಕ

By

Published : Sep 1, 2022, 10:57 PM IST

ಸೆಪ್ಟೆಂಬರ್​ 17 ರಂದು ಪ್ರಧಾನ ನರೇಂದ್ರ ಮೋದಿ ಅವರ ಜನ್ಮದಿನವನ್ನು ಸೇವಾ ಪಾಕ್ಷಿಕ ಹೆಸರಿನಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು 16 ದಿನಗಳವರೆಗೂ ನಡೆಸಲು ಬಿಜೆಪಿ ನಿರ್ಧರಿಸಿದೆ.

bjp-to-celebrate-pm-modi-birthday
ಪ್ರಧಾನಿ ನರೇಂದ್ರ ಮೋದಿ ಜನ್ಮದಿನ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನವನ್ನು ಬಿಜೆಪಿ ವಿಶಿಷ್ಟವಾಗಿ ಆಚರಿಸಲು ಮುಂದಾಗಿದೆ. ಸೆಪ್ಟೆಂಬರ್ 17 ರಂದು ಮೋದಿ ಜನ್ಮದಿನ ಕಾರಣ ಅಂದಿನಿಂದ 16 ದಿನಗಳವರೆಗೆ ಸೇವಾ ಪಾಕ್ಷಿಕ ಹೆಸರಿನಲ್ಲಿ ವಿವಿಧ ಸೇವಾ ಕಾರ್ಯಕ್ರಮ ನಡೆಸಲು ಬಿಜೆಪಿ ನಿರ್ಧರಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಪ್ರಧಾನಿ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಸೇವಾ ಪಾಕ್ಷಿಕವನ್ನು ಆಚರಿಸಲು ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಮುಖಂಡರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಪತ್ರವನ್ನೂ ಬರೆದಿದ್ದಾರೆ.

ಈ ಸೇವಾ ಪಾಕ್ಷಿಕವು ಅಕ್ಟೋಬರ್ 2 ರ ಮಹಾತ್ಮ ಗಾಂಧಿ ಅವರ ಜನ್ಮದಿನದವರೆಗೆ ಆಚರಿಸಲಾಗುತ್ತದೆ. ಇದರಡಿ ಜಿಲ್ಲಾ ಮಟ್ಟದಲ್ಲಿ ಮೋದಿ ಅವರ ಕುರಿತಾಗಿ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿದೆ. ಮೋದಿ 20 ಕನಸು ಸಾಕಾರ ಪುಸ್ತಕವನ್ನೂ ಇದೇ ವೇಳೆ ಪ್ರಚುರಪಡಿಸಲು ಮುಂದಾಗಲಾಗಿದೆ.

ರಕ್ತದಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಕೃತಕ ಕೈಕಾಲು, ಉಪಕರಣಗಳ ವಿತರಣೆ ನಡೆಸುವುದರ ಜೊತೆಗೆ, ದೇಶವನ್ನು ಕ್ಷಯರೋಗ (ಟಿಬಿ) ಮುಕ್ತಗೊಳಿಸಲು ಒಂದು ವರ್ಷದ ಕಾರ್ಯಕ್ರಮವನ್ನು ಯೋಜಿಸಿದೆ.

ಇದರಂತೆ ಪ್ರತಿಯೊಬ್ಬರೂ ಒಬ್ಬ ಟಿಬಿ ರೋಗಿಯನ್ನು ದತ್ತು ತೆಗೆದುಕೊಂಡು ಅವರನ್ನು 1 ವರ್ಷದವರೆಗೆ ಹಾರೈಕೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಅಲ್ಲದೇ, ಕೋವಿಡ್​ ಬೂಸ್ಟರ್​ ಡೋಸ್​ ಅನ್ನು ಪಡೆದುಕೊಳ್ಳಲು ಅಭಿಯಾನವನ್ನು ನಡೆಸಲೂ ಬಿಜೆಪಿ ನಿರ್ಧರಿಸಿದೆ.

ಓದಿ:ಕೇರಳಕ್ಕೆ ಪ್ರಧಾನಿ ಮೋದಿ 2 ದಿನಗಳ ಭೇಟಿ.. ನಾಳೆ ದೇಶಿ ನಿರ್ಮಿತ ಐಎನ್​ಎಸ್​​ ವಿಕ್ರಾಂತ್​ ನೌಕೆಗೆ ಚಾಲನೆ

ABOUT THE AUTHOR

...view details