ಕರ್ನಾಟಕ

karnataka

ಸಿಂಧೂರ್ ಖೇಲ್ ಆಚರಣೆಯಲ್ಲಿ ಭಾಗವಹಿಸಿದ ಸಂಸದೆ ನುಸ್ರತ್ ಜಹಾನ್..ಟೀಕಾಕಾರರಿಗೂ ಟಾಂಗ್​!

By

Published : Oct 11, 2019, 2:05 PM IST

ಟಿಎಂಸಿ ಸಂಸದೆ ನುಸ್ರತ್ ಜಹನ್ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ ಪ್ರಯುಕ್ತ ನಡೆದ 'ಸಿಂಧೂರ್ ಖೇಲ' ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಟಿಎಂಸಿ ಸಂಸದೆ ನುಸ್ರತ್ ಜಹನ್

ಕೋಲ್ಕತ್ತಾ: ದುರ್ಗಾ ಪೂಜೆಯಲ್ಲಿ ಭಾಗವಹಿಸಿ ಹಲವರ ಟೀಕೆಗೆ ಗುರಿಯಾಗಿದ್ದ ಟಿಎಂಸಿ ಸಂಸದೆ ನುಸ್ರತ್ ಜಹನ್ ಇಂದು ದುರ್ಗಾ ಪೂಜೆ ಪ್ರಯುಕ್ತ ನಡೆದ 'ಸಿಂಧೂರ್ ಖೇಲ' ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಪತಿ ನಿಖಿಲ್ ಜೈನ್​ ಅವರೊಂದಿಗೆ ಆಗಮಿಸಿದ ನುಸ್ರತ್​ ಜಹನ್ ಸಿಂಧೂರ್ ಖೇಲ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ, ಮಾತನಾಡಿದ ಅವರು ನಾನು ದೇವರ ವಿಶೇಷ ಮಗಳು. ನಾನು ಎಲ್ಲಾ ಹಬ್ಬವನ್ನ ಆಚರಿಸುತ್ತೇನೆ. ಮಾನವೀಯತೆ ಮತ್ತು ಪರಸ್ಪರ ಪ್ರೀತಿಯನ್ನ ಗೌರವಿಸುತ್ತೇನೆ. ನನಗೆ ನನ್ನ ಸಂತೋಷ ಮುಖ್ಯ ಯಾವುದೇ ವಿವಾದಗಳು ನನಗೆ ಮುಖ್ಯವಲ್ಲ ಎಂದಿದ್ದಾರೆ.

ವಿಜಯದಶಮಿ ಪ್ರಯುಕ್ತ ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಭಾಗ ವಹಿಸಿದ್ದಕ್ಕೆ ನುಸ್ರತ್ ಜಹಾನ್ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ದುರ್ಗಾ ಪೂಜೆಯಲ್ಲಿ ಭಾಗವಹಿಸುವ ಮೂಲಕ ನುಸ್ರತ್​ ಮುಸ್ಲೀಂ ಧರ್ಮವನ್ನ ಅವಮಾನಿಸಿದ್ದಾಳೆ ಎಂದು ಕಿಡಿ ಕಾರಿದ್ದಾರು. ಅಲ್ಲದೇ ತನ್ನ ಹೆಸರನ್ನ ಬದಲಿಸಿಕೊಳ್ಳ ಬೇಕು ಎಂದು ಕೆಲವರು ಆಗ್ರಹಿಸಿದ್ದರು.

ಟೀಕಾಕಾರರಿಗೆ ಸರಿಯಾಗೆ ಉತ್ತರ ಕೊಟ್ಟಿದ್ದ ನುಸ್ರತ್, ನನಗೆ ಹೆಸರಿಡದವರಿಗೆ ನನ್ನ ಹೆಸರನ್ನು ಬದಲಾಯಿಸಿಕೊಳ್ಳುವಂತೆ ಸಲಹೆ ನೀಡುವ ಅಧಿಕಾರವಿಲ್ಲ ಎಂದಿದ್ದರು.

Intro:Body:

blank page


Conclusion:

ABOUT THE AUTHOR

...view details