ಕರ್ನಾಟಕ

karnataka

ಸುಪ್ರೀಂ ಕೋರ್ಟ್​ ಬಾರ್​ ಅಸೋಸಿಯೇಶನ್​ ಕಾರ್ಯದರ್ಶಿ ಅಶೋಕ್ ಅರೋರಾ ಅಮಾನತು

By

Published : May 9, 2020, 8:46 AM IST

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್‌ನ ಕಾರ್ಯಕಾರಿ ಸಮಿತಿಯು ತನ್ನ ಕಾರ್ಯದರ್ಶಿ ಅಶೋಕ್ ಅರೋರಾ ಅವರನ್ನು ಅಮಾನತುಗೊಳಿಸಿದೆ.

court
court

ನವದೆಹಲಿ:ಆನ್‌ಲೈನ್ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್‌ನ (ಎಸ್‌ಸಿಬಿಎ) ಕಾರ್ಯಕಾರಿ ಸಮಿತಿಯು (ಇಸಿ) ತನ್ನ ಕಾರ್ಯದರ್ಶಿ ಅಶೋಕ್ ಅರೋರಾ ಅವರನ್ನು ಅಮಾನತುಗೊಳಿಸಿದೆ.

ಎಸ್‌ಸಿಬಿಎ ಅಧ್ಯಕ್ಷ ಹುದ್ದೆಯಿಂದ ಹಿರಿಯ ವಕೀಲ ದುಶ್ಯಂತ್ ದಾವೆ ಅವರನ್ನು ಅಮಾನತುಗೊಳಿಸಲು ಅಶೋಕ್ ಅರೋರಾ ಸಭೆ ಕರೆದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಹುಮತದಿಂದ ಅಶೋಕ್ ಅರೋರಾ ಅವರನ್ನು ಅಮಾನತುಗೊಳಿಸಲಾಗಿದ್ದು, ಮತದಾನದಲ್ಲಿ ದುಶ್ಯಂತ್ ದಾವೆ ಭಾಗಿಯಾಗಿರಲಿಲ್ಲ.

ತಾನು ಒಂದು ವರ್ಷದವರೆಗೆ ಆಯ್ಕೆಯಾದ ಕಾರಣ ತಮ್ಮನ್ನು ಯಾರೂ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಅರೋರಾ ಹೇಳಿದ್ದರು. ಆದರೂ ಅವರನ್ನು ಕಾರ್ಯದರ್ಶಿ ಸ್ಥಾನದಿಂದ ಅಮಾನತು ಮಾಡಲಾಗಿದೆ ಎಂದು ದಾವೆ ಹೇಳಿದ್ದಾರೆ.

ABOUT THE AUTHOR

...view details