ಕರ್ನಾಟಕ

karnataka

ಹೃದಯ ಸ್ತಂಭನ: ತರಬೇತಿಯಲ್ಲಿದ್ದ 30 ವರ್ಷದ ಏರ್ ಇಂಡಿಯಾ ಪೈಲಟ್ ಸಾವು

By PTI

Published : Nov 17, 2023, 10:31 AM IST

Air India pilot dies: ದೆಹಲಿ ವಿಮಾನ ನಿಲ್ದಾಣದಲ್ಲಿ ತರಬೇತಿ ಅವಧಿಯಲ್ಲಿ ಅಸ್ವಸ್ಥಗೊಂಡ ಏರ್ ಇಂಡಿಯಾ ಪೈಲಟ್ ಮೃತಪಟ್ಟಿದ್ದಾರೆ.

Air India pilot dies
ತರಬೇತಿ ಅವಧಿಯಲ್ಲಿ ಅಸ್ವಸ್ಥಗೊಂಡ ಏರ್ ಇಂಡಿಯಾ ಪೈಲಟ್ ಸಾವು

ನವದೆಹಲಿ:ದೆಹಲಿ ವಿಮಾನ ನಿಲ್ದಾಣದಲ್ಲಿ ತರಬೇತಿಯಲ್ಲಿದ್ದ ಏರ್ ಇಂಡಿಯಾ ಪೈಲಟ್ ದಿಢೀರ್ ಅಸ್ವಸ್ಥಗೊಂಡು ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೈಲಟ್ ಹೃದಯ ಸ್ತಂಭನದಿಂದ ಬಳಲುತ್ತಿರುವಂತೆ ತೋರುತ್ತಿದೆ. 30 ವರ್ಷದ ಹಿಮ್ಮನಿಲ್ ಕುಮಾರ್ ನಿಲ್ದಾಣದ ಟರ್ಮಿನಲ್ 3ರಲ್ಲಿ ಏರ್ ಇಂಡಿಯಾದ ಕಾರ್ಯಾಚರಣೆ ವಿಭಾಗದಲ್ಲಿ ತರಬೇತಿ ಅವಧಿಯಲ್ಲಿ ಕೆಲಸ ಮಾಡುತ್ತಿದ್ದರು.

ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡ ಹಿಮ್ಮನಿಲ್ ಕುಮಾರ್​ ಸಹಾಯಕ್ಕೆ ಸಹೋದ್ಯೋಗಿಗಳು ಬಂದಿದ್ದಾರೆ. ತಕ್ಷಣವೇ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಅಗತ್ಯ ಚಿಕಿತ್ಸೆ ನೀಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿಮನಿಲ್ ಕುಮಾರ್ ಅಕ್ಟೋಬರ್ 3ರಿಂದ ಬೋಯಿಂಗ್ 777 ವಿಮಾನ ಚಲಾಯಿಸಲು ತರಬೇತಿಯಲ್ಲಿದ್ದರು. ವಿಮಾನಯಾನ ಸಂಸ್ಥೆಯು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ. ಮೃತರ ತಂದೆ ಏರ್‌ಲೈನ್‌ನಲ್ಲಿ ಹಿರಿಯ ಕಮಾಂಡರ್ ಆಗಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದರು.

ಆಗಸ್ಟ್ 23ರಂದು ಕುಮಾರ್ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಆಗ ಆರೋಗ್ಯವಾಗಿ ಇದ್ದರು ಎಂದು ವೈದ್ಯರು ಹೇಳಿದ್ದರು. ಕರ್ತವ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಆಯಾಸ ಸಂಬಂಧಿತ ಸಮಸ್ಯೆಗಳಿಲ್ಲ ಕಾರಣಕ್ಕೆ ಕುಮಾರ್, ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಏರ್ ಇಂಡಿಯಾದ ತರಬೇತಿಗೆ ಹಾಜರಾಗಿದ್ದರು.

ಇತ್ತೀಚಿನ ಘಟನೆ- ತರಬೇತಿ ವಿಮಾನ ಅಪಘಾತ:ಇಬ್ಬರು ಪೈಲಟ್​ಗಳಿದ್ದ ತರಬೇತಿ ವಿಮಾನವೊಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಗ್ರಾಮಯೊಂದರ ಬಳಿ ಇತ್ತೀಚೆಗೆ ಪತನಗೊಂಡಿತ್ತು. ಬಾರಾಮತಿ ತಾಲೂಕಿನಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ ಗಾಯಗೊಂಡ ಪೈಲಟ್, ಖಾಸಗಿ ವಿಮಾನ ತರಬೇತಿ ಅಕಾಡೆಮಿಗೆ ಸೇರಿದ ವಿಮಾನದಲ್ಲಿದ್ದ ಮತ್ತೊಬ್ಬ ಸಹಪೈಲಟ್​ನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಇದನ್ನೂ ಓದಿ:ಕಾಶ್ಮೀರದ ಉರಿ ಸೆಕ್ಟರ್​ನಲ್ಲಿ ಇಬ್ಬರು ಉಗ್ರರ ಹತ್ಯೆ

ABOUT THE AUTHOR

...view details