ಕರ್ನಾಟಕ

karnataka

Dog Attack: ಬೀದಿ ನಾಯಿಗಳ ದಾಳಿಗೆ 10 ವರ್ಷದ ಮೂಗ ಬಾಲಕ ಬಲಿ!

By

Published : Jun 12, 2023, 10:21 AM IST

Speech Impaired Boy: ಕೇರಳದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಬೀದಿ ನಾಯಿಗಳ ದಾಳಿಗೆ ಮಾತು ಬಾರದ ಬಾಲಕನೊಬ್ಬ ಬಲಿಯಾಗಿರುವ ಘಟನೆ ಕಣ್ಣೂರು ಜಿಲ್ಲೆಯಲ್ಲಿ ಸಂಭವಿಸಿದೆ.
speech impaired boy  boy died after being bitten by a stray dog  bitten by a stray dog in Kannur  ಬೀದಿ ನಾಯಿಗಳ ದಾಳಿ  ಬೀದಿ ನಾಯಿಗಳ ದಾಳಿಗೆ 10 ವರ್ಷದ ಮೂಗ ಬಾಲಕ ಬಲಿ  ಕೇರಳದಲ್ಲಿ ದುರಂತ ಘಟನೆ  ಮಾತು ಬಾರದ ಬಾಲಕ  ಬೀದಿ ನಾಯಿ ಕಚ್ಚಿ 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ  ಮೂಗನಾಗಿದ್ದ ನಿಹಾಲ್ ಮೃತ  10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ  ಜನರಿಗೆ ಕಚ್ಚಿದ್ದ ಬೀದಿ ನಾಯಿಗಳು
speech impaired boy boy died after being bitten by a stray dog bitten by a stray dog in Kannur ಬೀದಿ ನಾಯಿಗಳ ದಾಳಿ ಬೀದಿ ನಾಯಿಗಳ ದಾಳಿಗೆ 10 ವರ್ಷದ ಮೂಗ ಬಾಲಕ ಬಲಿ ಕೇರಳದಲ್ಲಿ ದುರಂತ ಘಟನೆ ಮಾತು ಬಾರದ ಬಾಲಕ ಬೀದಿ ನಾಯಿ ಕಚ್ಚಿ 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮೂಗನಾಗಿದ್ದ ನಿಹಾಲ್ ಮೃತ 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಜನರಿಗೆ ಕಚ್ಚಿದ್ದ ಬೀದಿ ನಾಯಿಗಳು

ಕಣ್ಣೂರು, ಕೇರಳ:ಬೀದಿ ನಾಯಿ ಕಚ್ಚಿ 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕಣ್ಣೂರಿನ ಮುಝಾಪಿಲಂಗಾಡ್​ನಲ್ಲಿ ನಡೆದಿದೆ. (Speech Impaired Boy) ಮೂಗನಾಗಿದ್ದ ನಿಹಾಲ್ ಮೃತಪಟ್ಟಿದ್ದಾನೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ನಿಹಾಲ್ ಬಹ್ರೇನ್ ಮತ್ತು ನುಸೀಫಾದಲ್ಲಿ ಕೆಲಸ ಮಾಡುವ ನೌಶಾದ್ ಅವರ ಮಗ. ನಿಹಾಲ್​ಗೆ ಚಿಕ್ಕ ವಯಸ್ಸಿನಿಂದಲೂ ಮಾತನಾಡಲು ಬರುವುದಿಲ್ಲ. ಭಾನುವಾರ ಸಂಜೆ 5 ಗಂಟೆ ಸುಮಾರು ನಿಹಾಲ್​ ಮನೆಯ ಗೇಟ್​ನಿಂದ ಹೊರಗೆ ತೆರಳಿದ್ದಾನೆ. ಈ ವೇಳೆ ರಕ್ಕಸ ಬೀದಿ ನಾಯಿಗಳು ನಿಹಾಲ್​ ಮೇಲೆ ದಾಳಿ ನಡೆಸಿವೆ.

ನಿಹಾಲ್​ ಕೆಲ ಗಂಟೆಗಳ ಬಳಿಕ ಕಾಣದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಸುಮಾರು 8.30ರ ವೇಳೆ ಮನೆಯಿಂದ 300 ಮೀಟರ್ ದೂರದಲ್ಲಿರುವ ಖಾಲಿ ಮನೆಯೊಂದರ ಬಳಿ ನಿಹಾಲ್​ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ರಕ್ತದ ಮಡುವಿನಲ್ಲಿ ಪತ್ತೆಯಾದ ನಿಹಾಲ್​ ಸೊಂಟದ ಕೆಳಗೆ ಗಂಭೀರ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದನು.

ನಿಹಾಲ್‌ನನ್ನು ಸ್ಥಳೀಯರು ಪತ್ತೆ ಮಾಡಿ, ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ನಿಹಾಲ್​ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇನ್ನು ನಿಹಾಲ್​ ಮೃತದೇಹವನ್ನು ತಲಶ್ಶೇರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಬಾಲಕನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಬಳಿಕ ನಿಹಾಲ್ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ. ಬೀದಿ ನಾಯಿಗಳ ಹಿಂಡು ದಾಳಿಯಲ್ಲಿ ಅವರ ತೊಡೆಯ ಒಂದು ಭಾಗ ಕಿತ್ತು ಹೋಗಿದೆ ಎಂದು ವರದಿಯಾಗಿದೆ.

ಸ್ಥಳೀಯರ ಪ್ರಕಾರ, ಹುಡುಗ ನಾಪತ್ತೆಯಾದ ತಕ್ಷಣ ಸಾಮಾಜಿಕ ಮಾಧ್ಯಮ ಪ್ರಚಾರವನ್ನು ಪ್ರಾರಂಭಿಸಲಾಯಿತು. ರಾತ್ರಿ 8.30ರ ನಂತರ ನಿಹಾಲ್ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆ ಬಾಲಕ ಬದುಕುಳಿಯಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

7 ಜನರಿಗೆ ಕಚ್ಚಿದ್ದ ಬೀದಿ ನಾಯಿಗಳು: ವರ್ಷದ ಆರಂಭದಲ್ಲಿ ಕೇರಳದಲ್ಲಿ ಬೀದಿನಾಯಿಗಳು ದಾಳಿ ನಡೆಸಿದ್ದವು. ಕೊಲ್ಲಂನಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಏಳು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ವರದಿಯಾಗಿತ್ತು. ಕೊಲ್ಲಂನ ದೇವಸ್ಥಾನದ ಬಳಿ ಹೊರ ರಾಜ್ಯಗಳಿಂದ ಬಂದಿದ್ದ ಅಯ್ಯಪ್ಪ ಭಕ್ತರು ಸೇರಿದಂತೆ 7 ಜನರ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದವು.

ನಾಯಿ ದಾಳಿಗೆ ತುತ್ತಾದ ಎಲ್ಲಾ ಏಳು ಮಂದಿಯನ್ನು ಚಿಕಿತ್ಸೆಗಾಗಿ ಕುಲತುಪುಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಜಾಕಿ ಮತ್ತು ಮಣಿಕಂದನ್ ಎಂಬ ಇಬ್ಬರನ್ನು ಪುನಲೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿತ್ತು. ಈಗ ಅವರೆಲ್ಲರೂ ಚೇತರಿಸಿಕೊಂಡಿದ್ದಾರೆ.

ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಮಗು ಬಲಿ: ಬೀದಿ ನಾಯಿಗಳ ದಾಳಿಗೆ 18 ತಿಂಗಳ ಹೆಣ್ಣು ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ಏಪ್ರಿಲ್​ 21ರ ಸಂಜೆ ನಡೆದಿದೆ. ಸಾತ್ವಿಕಾ ರಾಂಬಾಬು ಮತ್ತು ರಾಮಲಕ್ಷ್ಮಿ ದಂಪತಿಯ ಎರಡನೇ ಪುತ್ರಿ ಮೃತ ಕಂದಮ್ಮ.

ಓದಿ:ಬೀದಿ ನಾಯಿಗಳಿಗೆ ಊಟ ಹಾಕುವ ವಿಚಾರಕ್ಕೆ ಮಾರಾಮಾರಿ: ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್

ABOUT THE AUTHOR

...view details