ನಟ ರಾಮ್​ ಚರಣ್​​ ಜನ್ಮದಿನ: ಪತ್ನಿ, ಪುತ್ರಿಯೊಂದಿಗೆ ತಿರುಪತಿ ದೇಗುಲಕ್ಕೆ ಭೇಟಿ - Ram Charan

By ETV Bharat Karnataka Team

Published : Mar 27, 2024, 12:37 PM IST

thumbnail

ತಿರುಪತಿ(ಆಂಧ್ರಪ್ರದೇಶ): ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ರಾಮ್ ಚರಣ್​ ಅವರಿಗಿಂದು 39ನೇ ಹುಟ್ಟುಹಬ್ಬದ ಸಂಭ್ರಮ. ಕುಟುಂಬಸ್ಥರು, ಸಿನಿಮಾ ಕ್ಷೇತ್ರದ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಾಮ್ ಚರಣ್‌ ತಿರುಪತಿ ದೇಗುಲಕ್ಕೆ ಕುಟುಂಬಸಮೇತ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.

'ಆರ್​ಆರ್​ಆರ್'​ ಖ್ಯಾತಿಯ ರಾಮ್​ ಚರಣ್​​ ಜೊತೆ ಪತ್ನಿ ಉಪಾಸನಾ ಕಾಮಿನೇನಿ, ಮಗಳು ಕ್ಲಿನ್ ಕಾರಾ ಕೊನಿಡೇಲಾ ಇದ್ದರು. ಉಪಾಸನಾ ಅವರ ತಾಯಿ ಶೋಬನಾ ಕಾಮಿನೇನಿ ಸೇರಿದಂತೆ ಇತರೆ ಕುಟುಂಬ ಸದಸ್ಯರೂ ಜೊತೆಗಿದ್ದರು. ದಕ್ಷಿಣ ಭಾರತದ ಪವರ್‌ಫುಲ್​ ಕಪಲ್​ ಸಂಪೂರ್ಣ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡರು.  

ರಾಮ್ ಚರಣ್ ತಮ್ಮ 39ನೇ ಜನ್ಮದಿನಾಚರಣೆಯನ್ನು ವೆಂಕಟೇಶ್ವರ ಸ್ವಾಮಿಯ ದರ್ಶನದೊಂದಿಗೆ ಪ್ರಾರಂಭಿಸಿದ್ದಾರೆ. ತಿರುಪತಿ ದೇವಸ್ಥಾನದಿಂದ ರಾಮ್​ ಚರಣ್ ಕುಟುಂಬದ ವಿಡಿಯೋ ಹೊರಬಿದ್ದಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ದೇವಸ್ಥಾನದಿಂದ ಹೊರಡುವಾಗ ದಂಪತಿ ಕ್ಯಾಮರಾಗಳಿಗೆ ಪೋಸ್ ಕೊಟ್ಟರು. ಆದರೆ ಎಂದಿನಂತೆ ಪುತ್ರಿ ಕ್ಲಿನ್ ಕಾರಾ ಕೊನಿಡೇಲಾರ ಮುಖ ಕಾಣದಂತೆ ನೋಡಿಕೊಂಡಿದ್ದಾರೆ.

ಇದನ್ನೂ ಓದಿ: 'ರಾಮಾಯಣ'ಕ್ಕಾಗಿ ಆರ್ಚರಿ ಕಲಿಯುತ್ತಿರುವ ರಣ್​ಬೀರ್ ಕಪೂರ್: ತರಬೇತುದಾರರೊಂದಿಗಿನ ಫೋಟೋ ವೈರಲ್ - Ramayan

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.