ETV Bharat / technology

ಚಂದ್ರನ ನೆಲದ ಮೇಲೆ ಕಾಲಿಟ್ಟ ಜಪಾನ್‌ನ SLIM ನೌಕೆ

author img

By ETV Bharat Karnataka Team

Published : Jan 19, 2024, 11:33 PM IST

ಜಪಾನ್​ ಐದನೇ ರಾಷ್ಟ್ರವಾಗಿ ಚಂದ್ರನ ಮೇಲೆ ನೆಲೆಯೂರಿದೆ. ಭಾರತದ ಬಳಿಕ ಜಪಾನ್​ ಸಹ ಚಂದ್ರನ ಅಂಗಳ ತಲುಪಿದ್ದು ಮಹತ್ವದ ಅಧ್ಯಯನಕ್ಕೆ ಮುಂದಾಗಿದೆ.

Japans Moon sniper appears to ace 1st ever pin point Moon landing on Friday
ಚಂದ್ರನ ನೆಲದ ಮೇಲೆ ಕಾಲಿಟ್ಟ ಜಪಾನ್‌ನ SLIM ನೌಕೆ

ಟೋಕಿಯೊ(ಜಪಾನ್​) : ರಷ್ಯಾ, ಅಮೆರಿಕ, ಚೀನಾ ಮತ್ತು ಭಾರತದ ನಂತರ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಐದನೇ ದೇಶ ಎಂಬ ಹೆಗ್ಗಳಿಕೆಗೆ ಜಪಾನ್ ಪಾತ್ರವಾಗಿದೆ. ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಷನ್ ಮೂನ್ (ಎಸ್ಎಲ್ಐಎಂ) ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಿದೆ ಎಂದು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್‌ ಏಜೆನ್ಸಿ (ಜಾಕ್ಸಾ) ಶುಕ್ರವಾರ ತಿಳಿಸಿದೆ.

ನಾವು ನೋಡುತ್ತಿರುವುದು ಸ್ಲಿಮ್‌ ಚಂದ್ರನ ಮೇಲೆ ಇಳಿದಿದೆ ಎಂದು JAXA ನ ವಕ್ತಾರರು ಇಂದು ಬೆಳಿಗ್ಗೆ ಲ್ಯಾಂಡಿಂಗ್‌ನ ಲೈವ್ ಕಾಮೆಂಟರಿಯಲ್ಲಿ ಹೇಳಿದ್ದರು. ಜಪಾನೀಸ್ ಭಾಷೆಯಲ್ಲಿ "ಮೂನ್ ಸ್ನೈಪರ್" ಎಂದೂ ಕರೆಯಲ್ಪಡುವ ಸ್ಲಿಮ್‌, ಯೋಜಿಸಿದಂತೆ ಗುರಿಯ 100 ಮೀಟರ್‌ಗಳೊಳಗೆ ಪಿನ್‌ಪಾಯಿಂಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ ಎಂದು JAXA ಹೇಳಿದೆ. 2.7 ಮೀಟರ್ ಉದ್ದದ ಸ್ಲಿಮ್ ನೌಕೆ ಚಂದ್ರನ ಮೇಲ್ಮೈಯನ್ನು ಬೆಳಗ್ಗೆ 10.20 ಕ್ಕೆ (ಭಾರತೀಯ ಕಾಲಮಾನ ರಾತ್ರಿ 8.50) ಸ್ಪರ್ಶಿಸಿತು. ಸ್ಲಿಮ್ ನೌಕೆಯನ್ನು ಸೆಪ್ಟೆಂಬರ್ 6 ರಂದು ಶಕ್ತಿಯುತ ಎಕ್ಸ್-ರೇ ಬಾಹ್ಯಾಕಾಶ ದೂರದರ್ಶಕ XRISM ನೊಂದಿಗೆ ಉಡಾವಣೆ ಮಾಡಲಾಗಿತ್ತು. ಚಂದ್ರನ ಹತ್ತಿರದ ಬದಿಯಲ್ಲಿ 13 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 25 ಡಿಗ್ರಿ ಪೂರ್ವ ರೇಖಾಂಶದಲ್ಲಿ ಮೇರ್ ನೆಕ್ಟರಿಸ್‌ನ ಶಿಯೋಲಿ ಕ್ರೇಟರ್‌ನ ಇಳಿಜಾರಿನ ಮೇಲೆ ಸ್ಲಿಮ್‌ ಇಳಿಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.