ETV Bharat / state

ನೇಹಾ ಕೊಲೆ ಪ್ರಕರಣವನ್ನು ನಾವು ಖಂಡಿಸುತ್ತೇವೆ, 90 ದಿನಗಳಲ್ಲಿ ಕೇಸ್ ಇತ್ಯರ್ಥವಾಗಬೇಕು: ಎ.ಎಮ್. ಹಿಂಡಸಗೇರಿ - NEHA MURDER CASE

author img

By ETV Bharat Karnataka Team

Published : Apr 21, 2024, 5:26 PM IST

Updated : Apr 21, 2024, 5:42 PM IST

ನೇಹಾ ಕೊಲೆ ಪ್ರಕರಣವನ್ನು ನಾವು ಖಂಡಿಸುತ್ತೇವೆ, 90 ದಿನಗಳಲ್ಲಿ ಕೇಸ್ ಇತ್ಯರ್ಥವಾಗಬೇಕು: ಎ.ಎಮ್. ಹಿಂಡಸಗೇರಿ
ನೇಹಾ ಕೊಲೆ ಪ್ರಕರಣವನ್ನು ನಾವು ಖಂಡಿಸುತ್ತೇವೆ, 90 ದಿನಗಳಲ್ಲಿ ಕೇಸ್ ಇತ್ಯರ್ಥವಾಗಬೇಕು: ಎ.ಎಮ್. ಹಿಂಡಸಗೇರಿ

ನೇಹಾ ಹಿರೇಮಠ ಹತ್ಯೆ ಪ್ರಕರಣ ಶೀಘ್ರ ತನಿಖೆ ಆಗಬೇಕು, ಹೀನ ಕೆಲಸ ಮಾಡಿದ ಹಂತಕನಿಗೆ ಶಿಕ್ಷೆ ಆಗಬೇಕು ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಮ್. ಹಿಂಡಸಗೇರಿ ಆಗ್ರಹಿಸಿದ್ದಾರೆ.

ಎ.ಎಮ್. ಹಿಂಡಸಗೇರಿ

ಹುಬ್ಬಳ್ಳಿ: ನಗರದಲ್ಲಿ ವಿದ್ಯಾರ್ಥಿನಿಯ ಹತ್ಯೆ ನಡೆದಿರುವುದು ಬಹಳ‌ ದುರ್ದೈವದ ಸಂಗತಿ. ನಾವು ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದೇವೆ. ಶೀಘ್ರ ತನಿಖೆ ಆಗಬೇಕು, ಹೀನ ಕೆಲಸ ಮಾಡಿದ ಹಂತಕನಿಗೆ ಶಿಕ್ಷೆ ಆಗಬೇಕು. ನೇಹಾ ನಮ್ಮ ಮಗಳು ಎಂದು ಭಾವಿಸಿದ್ದೇವೆ. ನಿರಂಜನಯ್ಯ​ ಮತ್ತು ನಾವು ಬಹಳ ವರ್ಷದಿಂದ ಸಂಪರ್ಕದಲ್ಲಿ ಇದ್ದೇವೆ. ಈ ಘಟನೆಯನ್ನು ನಾವು ಖಂಡಿಸುತ್ತೇವೆ‌ ಎಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಮ್. ಹಿಂಡಸಗೇರಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಹಿಂದೆ ಯಾರಾದರೂ ಇದ್ದರೆ ಪತ್ತೆ ಹಚ್ಚಬೇಕು. ಫಾಸ್ಟ್‌ಟ್ರ್ಯಾಕ್ ಕೋರ್ಟ್​ ರಚಿಸಿ, ಕೇಸ್ ಒಪ್ಪಿಸಬೇಕು. 90 ದಿನಗಳಲ್ಲಿ ಕೇಸ್ ಇತ್ಯರ್ಥವಾಗಬೇಕು. ಯಾವ ವಕೀಲರು ಸಹ ಆರೋಪಿ ಪರ ವಕಾಲತ್ತು ವಹಿಸಬಾರದೆಂದು ನಾವು ಮನವಿ ಮಾಡಿದ್ದೇವೆ.‌ ಇಂತಹ ಹೀನ ಕೆಲಸ ಮಾಡು ಎಂದು ಯಾವ ಧರ್ಮದಲ್ಲೂ ಹೇಳುವುದಿಲ್ಲ. ಯಾರು ಅನುಭವಿಸದಂತಹ ಶಿಕ್ಷೆಯನ್ನ ದೇವರು ಕೊಡಲಿ ಪ್ರಾರ್ಥನೆ ಮಾಡುತ್ತೇವೆ. ಪೊಲೀಸರು ನಡಸಿದ ಶಾಂತಿ ಸಭೆಯಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಬಗ್ಗೆ ಮಾತನಾಡಲಾಗಿದೆ. ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಿದೆ ಎಂದರು.

ಪೊಲೀಸರು ಪ್ರಾಮಾಣಿಕ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಿ. ಫಯಾಜ್‌ನ ತಂದೆ-ತಾಯಿ ಕೊಲೆಗೆ ಕೈ ಜೋಡಿಸಿದ್ದರೆ, ಅವರಿಗೂ ಶಿಕ್ಷೆ ನೀಡಲಿ. ಇಂತಹ ಕೆಲಸವನ್ನು ಯಾರೂ ಮಾಡಬೇಡಿ, ನಿಮ್ಮ ಭವಿಷ್ಯಕ್ಕಾಗಿ ಚೆನ್ನಾಗಿ ಓದಿ ಎಂದು ಎಲ್ಲಾ ಧರ್ಮದ ಮಕ್ಕಳಿಗೆ ನಾನು ಹೇಳುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ನೇಹಾ ಹಿರೇಮಠ ಕೊಲೆ ಆರೋಪಿ ಬಂಧಿಸಿದ ಪೊಲೀಸರ ತಂಡಕ್ಕೆ 'ಕಾಪ್ ಆಫ್ ದಿ ಮಂತ್' ಪ್ರಶಸ್ತಿ, ₹25 ಸಾವಿರ ಬಹುಮಾನ - Neha Hiremath Murder Case

Last Updated :Apr 21, 2024, 5:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.