ETV Bharat / state

ಸಿಎಂ ಸಿದ್ದರಾಮಯ್ಯಗೆ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ: ಪ್ರಹ್ಲಾದ್​ ಜೋಶಿ - Pralhad Joshi

author img

By ETV Bharat Karnataka Team

Published : Apr 3, 2024, 4:58 PM IST

Updated : Apr 3, 2024, 7:02 PM IST

union-minister-pralhad-joshi-reaction-on-cm-siddaramaiah
ಸಿಎಂ ಸಿದ್ದರಾಮಯ್ಯಗೆ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ: ಪ್ರಹ್ಲಾದ್​ ಜೋಶಿ

ಕಾಂಗ್ರೆಸ್​ ಪಕ್ಷ ಸದಾಕಾಲ ಸುಳ್ಳು ಹೇಳಿಕೊಂಡೇ ಬಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಟೀಕಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ: ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯಗೆ ಅವರ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ. ಅವರು ಅನಗತ್ಯವಾಗಿ ಮೋದಿಯವರನ್ನು ಬೈದಿದ್ದರಿಂದ 2014 ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಸೋಲಾಯಿತು ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ನಾಯಕ ನರೇಂದ್ರ ಮೋದಿಯವರನ್ನು ಜನ ಸ್ವೀಕಾರ ಮಾಡಿದ್ದಾರೆ. ಕಾಂಗ್ರೆಸ್​ ಗ್ಯಾಂಗ್​ ಒಪ್ಪಲಿಲ್ಲ ಎಂದಾಕ್ಷಣ ಜನ ಸ್ವೀಕಾರ ಮಾಡಿಲ್ಲ ಎಂಬರ್ಥವಲ್ಲ. ಈಗಲೂ ಸಿಎಂ ಸುಳ್ಳು ಹೇಳುತ್ತಿದ್ದಾರೆ, ಅವರನ್ನು ಜನ ತಿರಸ್ಕಾರ ಮಾಡುತ್ತಾರೆ ಎಂದರು.

ಬರ ಪರಿಹಾರದ ವಿಚಾರವಾಗಿ ಕಾಂಗ್ರೆಸ್​ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಕಾಂಗ್ರೆಸ್​ ಪಕ್ಷ ಸದಾಕಾಲ ಸುಳ್ಳು ಹೇಳಿಕೊಂಡೇ ಬಂದಿದೆ. ಎನ್​ಡಿಆರ್​ಎಫ್​ನಲ್ಲಿ ಶೇ.75 ರಷ್ಟು ಹಣ ಕೊಡುತ್ತೇವೆ. ಇವರು ಹೇಗೆ ಖರ್ಚು ಮಾಡ್ತಾರೋ ಹಾಗೆ ದುಡ್ಡು ಕೊಡ್ತಾ ಹೋಗ್ತಿವಿ. ಹಿಂದೆ ಯಡಿಯೂರಪ್ಪನವರ ಸರ್ಕಾರ ಇದ್ದಾಗ ಮನೆ ಬಿದ್ದರೆ 5 ಲಕ್ಷ, ಎಕೆರೆಗೆ 5 ಸಾವಿರ ರೂ. ಪರಿಹಾರ ನೀಡಿದ್ದೆವು. ರಾಜ್ಯ ಸರ್ಕಾರದ್ದು 3 ಲಕ್ಷ ಕೋಟಿ ಬಜೆಟ್​ ಆಗಿದೆ, ನೀವು ಯಾಕೆ ಹಣ ಕೊಡುತ್ತಿಲ್ಲ ಮೊದಲು ಹೇಳಿ? ಎಂದು ಪ್ರಶ್ನಿಸಿದರು.

ಈಗ ನಿಯಮಾವಳಿಗಳು ಬದಲಾವಣೆಯಾಗಿವೆ. ಎನ್​ಡಿಆರ್​ಎಫ್​ ಫಂಡ್​ ಅನ್ನು ಮೊದಲೇ ಕೊಟ್ಟಿರುತ್ತೇವೆ. ಉಳಿದ ಅಲ್ಪಸ್ವಲ್ಪವನ್ನು ನಂತರ ಕೊಡುತ್ತೇವೆ. ನಿನ್ನೆ ಅಮಿತ್​ ಶಾ ಹೇಳಿರುವುದರಲ್ಲಿ ಸತ್ಯ ಇದೆ. ಮಾದರಿ ನೀತಿ ಸಂಹಿತೆ ಮುಗಿದ ಬಳಿಕ ಅವರ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳನ್ನು ಕರೆದು ಕೂರಿಸಿ ಎಲ್ಲವನ್ನು ತೋರಿಸುತ್ತೇವೆ ಎಂದರು.

ಸಂಸದೆ ಸುಮಲತಾ ಅವರು ಇಂದು ಬಿಜೆಪಿಯನ್ನು ಸೇರಿದ್ದಾರೆ, ಇದು ಬಹಳ ಸಂತೋಷದ ಸಂಗತಿ. ಅವರಿಗೆ ಅಭಿನಂದನೆಗಳನ್ನು ಹೇಳುತ್ತೇನೆ. ಸುಮಲತಾ ಅವರ ಸಮಸ್ಯೆ ಸುಖಾಂತ್ಯವಾಗುತ್ತೆ ಎಂದು ಈ ಹಿಂದೆಯೂ ಹೇಳಿದ್ದೆ. ಅದರಂತೆಯೇ ಸುಮಲತಾ ವಿಚಾರ ಸುಖಾಂತ್ಯವಾಗಿದೆ. ಬಿಜೆಪಿಗೆ ಪೂರ್ಣ ಬಹುಮತವಿದ್ದರೂ, ಅವರು ಲೋಕಸಭೆಯಲ್ಲಿ ಬಿಲ್​ ಪಾಸ್​ ಆಗಲು ನಮ್ಮ ಪರ ವೋಟ್​ ಹಾಕುತ್ತಿದ್ದರು. ಒಳ್ಳೆಯ ಸಂಸದೀಯ ಪಟುವಾಗಿ ಕೆಲಸ ಮಾಡಿದ್ದಾರೆ. ಅವರು ಪಕ್ಷ ಸೇಪಡೆಯಾಗಿರುವುದನ್ನು ಸ್ವಾಗತಿಸುತ್ತೇನೆ ಎಂದು ಜೋಶಿ ಹೇಳಿದರು.

ಈಶ್ವರಪ್ಪ ದೆಹಲಿ ಭೇಟಿಯ ವಿಚಾರವಾಗಿ ಮಾತನಾಡಿ, ಈಶ್ವರಪ್ಪ ಅವರು ಈಗಲೂ ನಮ್ಮ ಪಕ್ಷದಲ್ಲಿಯೇ ಇದ್ದಾರೆ. ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ದೆಹಲಿಗೆ ಹೋಗಿರೋದು ವಿಶೇಷವೇನು ಇಲ್ಲ. ಈಶ್ವರಪ್ಪ ಸಮಸ್ಯೆಯೂ ಬಗೆಹರೆದು ಸುಖಾಂತ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ದಿಂಗಾಲೇಶ್ವರ ಶ್ರೀ ಚುನಾವಣೆಗೆ ಸ್ಪರ್ಧಿಸಿದ್ರೆ ಏನು ಡ್ಯಾಮೇಜ್ ಆಗಲಿದೆ ಅನ್ನೋದು ಹೇಳೋಕಾಗಲ್ಲ: ಸಂತೋಷ್ ಲಾಡ್ - Minister Santosh Lad

Last Updated :Apr 3, 2024, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.