ETV Bharat / state

ಸೊರಬ: ₹ 40 ಸಾವಿರ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

author img

By ETV Bharat Karnataka Team

Published : Mar 6, 2024, 4:53 PM IST

Revenue Inspector Vinayak
ಕಂದಾಯ ನಿರೀಕ್ಷಕ ವಿನಾಯಕ್​

ದೂರುದಾರರಾದ ಪ್ರತಿಭಾ ಅವರು ಕಂದಾಯ ನಿರೀಕ್ಷಕ ವಿನಾಯಕ್​ ಲಂಚಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಶಿವಮೊಗ್ಗ: ಇ- ಸ್ವತ್ತು ಮಾಡಿಸಲು 40 ಸಾವಿರ ರೂಪಾಯಿ ಲಂಚ ಪಡೆಯುವಾಗ ಸೊರಬ ಪುರಸಭೆಯ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸೊರಬ ಪುರಸಭೆಯ ಕಂದಾಯ ನಿರೀಕ್ಷಕ ವಿನಾಯಕ ಅವರು ಇಂದು ದೂರುದಾರೆ ಪ್ರತಿಭಾ ಅವರಿಂದ ಲಂಚದ ರೂಪದಲ್ಲಿ ಹಣ ಪಡೆಯುತ್ತಿದ್ದ ವೇಲೆ ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಮೂಲತಃ ಹೊನ್ನಾವರದ ನಿವಾಸಿಯಾಗಿರುವ ಪ್ರತಿಭಾ ಅವರಿಗೆ ಹಳೇ ಸೊರಬ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 450* 250 ಅಡಿಯ ಖಾಲಿ ಜಾಗ ಹಾಗೂ ಅದಕ್ಕೆ ಹೊಂದಿಕೊಂಡಂತೆ ಜಾಗ ಇದೆ. ಈ ಜಾಗವು ಸೊರಬ‌ ಪುರಸಸಭಾ ವ್ಯಾಪ್ತಿಗೆ ಬರುವುದರಿಂದ ಪ್ರತಿಭಾ ಅವರು ತಮ್ಮ ಖಾಲಿ ಜಾಗಕ್ಕೆ ಇ-ಸ್ವತ್ತು ಮಾಡಿಸಲು ಹೋಗಿದ್ದರು. ಈ ವೇಳೆ ಕಂದಾಯ ನಿರೀಕ್ಷಕ ವಿನಾಯಕ್​ ಅವರು 50 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.

ಕೊನೆಗೆ 40 ಸಾವಿರ ರೂ. ನೀಡುವುದಾಗಿ ಮಾತುಕತೆಯಾಗಿ ಒಪ್ಪಿದ್ದಾರೆ. ಆದರೆ ದೂರುದಾರೆ ಪ್ರತಿಭಾ ಅವರು ಈ ಕುರಿತು ಶಿವಮೊಗ್ಗ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಇಂದು ಲೋಕಾಯುಕ್ತ ಪೊಲೀಸರು ವಿನಾಯಕ್​ ಅವರು 40 ಸಾವಿರ ರೂ. ಹಣ ಪಡೆಯುವಾಗ ಪುರಸಭೆ ಕಚೇರಿ ಮೇಲೆ ದಾಳಿ ನಡೆಸಿದರು.

ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದು, ಆರೋಪಿ ವಿನಾಯಕ್​ ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್ಪಿ ವಾಸುದೇವ್​, ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಪಿಐ ಸುರೇಶ್, ಸಿಬ್ಬಂದಿ ಮಹಾಂತೇಶ್, ಸುರೇಂದ್ರ, ಯೋಗೀಶ್, ಚನ್ನೇಶ್, ಪ್ರಶಾಂತ್ ಕುಮಾರ್ ಇತರರಿದ್ದರು.

ಇದನ್ನೂ ಓದಿ: ಹಣ ಪಡೆದು ಫ್ಲ್ಯಾಟ್ ನೀಡದೇ ವಂಚಿಸಿದ ಆರೋಪ ಸಂಬಂಧ ಇಡಿ ದಾಳಿ: 120 ಕೋಟಿ ಮೌಲ್ಯದ ಚರ - ಸ್ಥಿರಾಸ್ತಿ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.