ETV Bharat / state

ಪಾಕ್ ಪರ ಘೋಷಣೆ: ಎಫ್ಎಸ್ಎಲ್ ವರದಿ ತಿರುಚುವ ಯತ್ನ-ಬೊಮ್ಮಾಯಿ ಆರೋಪ

author img

By ETV Bharat Karnataka Team

Published : Mar 1, 2024, 5:46 PM IST

Reveal FSL report  Bommai demand  ಮಾಜಿ ಸಿಎಂ ಬೊಮ್ಮಾಯಿ ಆಗ್ರಹ  ಎಫ್ಎಸ್ಎಲ್ ವರದಿ
ಮಾಜಿ ಸಿಎಂ ಬೊಮ್ಮಾಯಿ ಆಗ್ರಹ

ಪಾಕಿಸ್ತಾನ ಪರ ಘೋಷಣೆ ಕೂಗಿರುವ ಆರೋಪ ಕುರಿತ ಎಫ್ಎಸ್ಎಲ್ ವರದಿಯನ್ನು ಬಹಿರಂಗಪಡಿಸುವಂತೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಆಗ್ರಹಿಸಿದರು.

ಬೆಂಗಳೂರು: ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದು ಅರ್ಧ ದಿನ ಕಳೆದರೂ ಅದನ್ನು ಬಹಿರಂಗಪಡಿಸದೇ ತಿರುಚುವ ಪ್ರಯತ್ನ ನಡೆಯುತ್ತಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ನಿಜ ಎಂದಿದ್ದು, ಕೂಡಲೇ ವರದಿ ಬಹಿರಂಗಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ ಆಗ್ರಹಿಸಿದ್ದಾರೆ.

ಆರ್.ಟಿ.ನಗರ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಘೋಷಣೆ ಕೂಗಿರುವುದಲ್ಲ. ಬಳ್ಳಾರಿಯಲ್ಲಿ ಬೇರೆ ಬೇರೆ ವಿಚಾರವಾಗಿಯೂ ಕೂಡ ಪ್ರಕರಣಗಳಿವೆ. ಯಾರೆಲ್ಲಾ ಕೂಗಿದ್ದಾರೆ, ಅವರ ವಿರುದ್ಧ ಕ್ರಮ‌ ಆಗದಿದ್ದರೆ ದೇಶದ್ರೋಹಿಗಳಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಹಾಗಾಗಿ ಕೂಡಲೇ ವರದಿ ಬಹಿರಂಗಪಡಿಸಿ. ಘೋಷಣೆ ಕೂಗಿದ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಪಕ್ಷಕ್ಕೆ ನಮ್ಮದು ಜಾತ್ಯತೀತ ಪಕ್ಷ ಅಂತ ಜಾತಿ ಮೇಲೆ ಎಲ್ಲಿಲ್ಲದ ಪ್ರೀತಿ ಬರುತ್ತದೆ.‌ ನಾಲ್ಕು ವರ್ಷ ಎಲ್ಲರನ್ನೂ ಈ ಸರ್ಕಾರ ದೂರ ಇಟ್ಟಿರುತ್ತದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಾತಿ ಸಮಾವೇಶ ಮಾಡುವುದು, ಜಾತಿ ಜಾತಿಗಳ ಬಗ್ಗೆ ಮಾತಾಡುವ ಕೆಲಸ ಮಾಡುತ್ತಾರೆ. 2015ರಲ್ಲಿ ಸಿದ್ದರಾಮಯ್ಯ ಎಲ್ಲಾ ಜಾತಿಗಳ ಅಧ್ಯಯನ ಮಾಡಿ ಅಂತ ಕಾಂತರಾಜ ಸಮಿತಿ ಮಾಡಿದರು. ಜಾತಿ ಜನಗಣತಿ ಮಾಡುವುದು ಕೇಂದ್ರದ ಅಧಿಕಾರ ಅಂತ ಸುಪ್ರೀಂ ಕೋರ್ಟ್​ನಲ್ಲಿ 6 ಪ್ರಕರಣಗಳಿವೆ. ಸುಪ್ರೀಂ ಕೋರ್ಟ್ ಕೇಸ್ ನಿರ್ಣಯ ಆಗಬೇಕು. ಅದನ್ನು ತಪ್ಪಿಸಲು ಜಾತಿ ಗಣತಿ ಅನ್ನೋದು ಬಿಟ್ಟು, ಶೈಕ್ಷಣಿಕ ಜನಗಣತಿ ಅಂತ ಮಾಡಿದರು. ಇದರ ಒಳ ಉದ್ದೇಶ ಒಂದು, ಹೊರ ಉದ್ದೇಶ ಒಂದು. ಸಿದ್ದರಾಮಯ್ಯ ಸಿಎಂ ಆಗಿದ್ದರೂ ವರದಿ ಸ್ವೀಕಾರ ಮಾಡಲಿಲ್ಲ. ಮುಂದೆ ವರದಿ ಬಗ್ಗೆ ಸಾಕಷ್ಟು ಗೊಂದಲ ಇತ್ತು. ಈಗಲೂ ಕೂಡ ಬಹಳ ವಿರೋಧ ಇದೆ. ಸಮೀಕ್ಷೆ ಆಗಿಲ್ಲ ಅನ್ನೋ ಆರೋಪ ಇದೆ. ಈಗ ಕೊಟ್ಟಿರುವ ವರದಿ ಚೌ ಚೌ ವರದಿ. ದತ್ತಾಂಶ ಕಾಂತರಾಜು ಅವರದ್ದು,‌ ವರದಿ ನಂದು ಅಂತ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಆದೇಶ ಇರುವುದು ಜಯಪ್ರಕಾಶ್ ಹೆಗ್ಡೆದು. ವರದಿ ಸ್ವೀಕಾರ ಕೇವಲ ರಾಜಕೀಯದ್ದು ಮಾತ್ರ ಎಂದು ಟೀಕಿಸಿದರು.

ಎಲ್ಲಾ ಸಮುದಾಯದ ಜನಗಣತಿ ಆಗಬೇಕು. ಜಾತಿಯೂ ಸೇರಿದಂತೆ ಮೇಲೆತ್ತಬೇಕು. ಆ ಬದ್ಧತೆ ನಮಗಿದೆ. ಹಾಗಾಗಿ ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ‌ಇದನ್ನು ಯಾಕೆ ಸರ್ಕಾರ ಮುಚ್ಚುಮರೆ ಮಾಡುತ್ತಿದೆ. ಇದನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಲಿ. ಎಲ್ಲಾ ಚರ್ಚೆಗೆ ಬರಲಿ. ತುಳಿತಕ್ಕೆ ಒಳಗಾದವರಿಗೆ ನ್ಯಾಯ ಸಿಗಲಿ. ಹಿಂದುಳಿದ ವರ್ಗಗಳಿಗೆ 150 ಜಾತಿ ಹೆಚ್ಚುವರಿ ಸೇರಿಸಿದ್ದಾರೆ. ಎಜುಕೇಶನ್ ಎಂಪ್ಲಾಯ್‌ಮೆಂಟ್ ಮೇಲೆ ಚರ್ಚೆಯಾಗಬೇಕು. ಹಿಂದುಳಿದ ವರ್ಗಗಳ ಮೇಲೆ ತುಳಿತಕ್ಕೆ ಒಳಗಾದವರು ಹೆಚ್ಚಿದ್ದಾರೆ. ಕಟ್ಟ ಕಡೆಯವನಿಗೆ ನೀರೇ ಸಿಗಲ್ಲ. ಸರ್ಕಾರದ ಸವಲತ್ತು ಕೆಲವರು ಮಾತ್ರ ಪಡೆದಿದ್ದಾರೆ. ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಿಗಬೇಕು. ಸಿಎಂ‌ ರಾಜಕೀಯವಾಗಿ ಇದನ್ನು ಬಳಸಬಾರದು. ರಾಜಕೀಯಕ್ಕೆ ಬಳಸಿದರೆ ಅಕ್ಷಮ್ಯ ಅಪರಾಧ. ನೀವು ಮಾಡಿದ ಗೊಂದಲ ಅಶಾಂತಿಗೆ ಕಾರಣವಾಗಬಾರದು. ಅವರ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ಕ್ಯಾಬಿನೆಟ್​ನಲ್ಲಿ ಒಮ್ಮತ ಇಲ್ವಾ?, ಬದ್ಧತೆ ಇಲ್ವಾ? ಚಿವುಟುವವರೇ ಇವರು ಎಂದು ಟೀಕಿಸಿದರು.

ಕ್ಯಾಬಿನೆಟ್​ನಲ್ಲಿ ಒಮ್ಮತಾ ಇಲ್ವಾ? ಸಾಮಾಜಿಕ ನ್ಯಾಯದಲ್ಲಿ ನಿಮಗೆ ಒಮ್ಮತ‌ ಇಲ್ವಾ? ಮಂತ್ರಿಗಳ ಹೇಳಿಕೆಗೆ ಉತ್ತರ ಕೊಡಬೇಕು. ಸಮಾಜದಲ್ಲಿ ಗೊಂದಲ ಉಂಟುಮಾಡಬೇಡಿ. ಪೂರ್ಣ ಪ್ರಮಾಣದ ಸರ್ವೇ ಆಗಿಲ್ಲ, ಸಹಿ ಕೂಡ ಆಗಿಲ್ಲ. ಕೇಂದ್ರ ಸರ್ಕಾರ ಪರ್ಮನೆಂಟ್ ಬ್ಯಾಕ್ ವರ್ಡ್‌ ಕ್ಲಾಸ್ ಮಾಡಿದೆ. ಆರು ಕೇಸ್ ಸುಪ್ರೀಂ ಕೋರ್ಟ್​ನಲ್ಲಿದೆ. ಸುಪ್ರೀಂ ತೀರ್ಪು ಬಂದ ಬಳಿಕ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗ ಮಂಡಲ್ ಕಮಿಷನ್ ವರದಿ ಪ್ರಕಾರ ನಡೆಯುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು?, ನಾಯಕರ ಅಭಿಪ್ರಾಯ ಏನು? ಅಂತ‌ ಸ್ಪಷ್ಟಪಡಿಸಲಿ. ಲೀಕ್ ಆದ ವರದಿ ಪ್ರಕಾರ 70 ಲಕ್ಷ ಜನ ಮುಸ್ಲಿಂ ಸಮುದಾಯವಿದೆ. ವರದಿಯ ಪ್ರಕಾರ ಅವರು ಅಲ್ಪಸಂಖ್ಯಾತರಲ್ಲ, ಮೆಜಾರಿಟಿ ಇರುವವರು. ಇದರಲ್ಲಿ ಕಾಂಗ್ರೆಸ್ ನಿಲುವೇನು ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಇದನ್ನೂ ಓದಿ: ಜಾತಿ ಗಣತಿ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ, ಸಂಪುಟ ಸಭೆ ನಿರ್ಧಾರ ತೆಗೆದುಕೊಳ್ಳುತ್ತದೆ: ಗೃಹ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.