ETV Bharat / state

ಬೆಳಗಾವಿಯಲ್ಲಿ ಹಲಗಾ - ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ: ರೈತರನ್ನ ವಶಕ್ಕೆ ಪಡೆದ ಪೊಲೀಸರು

author img

By ETV Bharat Karnataka Team

Published : Mar 20, 2024, 9:07 PM IST

protest-by-farmers-against-halaga-macche-bypass-road-work-in-belagavi
ಬೆಳಗಾವಿಯಲ್ಲಿ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ: ರೈತರು ಪೊಲೀಸ್ ವಶಕ್ಕೆ

ಕೃಷಿ ಜಮೀನಿನಲ್ಲಿ ಹಲಗಾ - ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ನಡೆಸುತ್ತಿರುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ: ರೈತರು ಪೊಲೀಸ್ ವಶಕ್ಕೆ

ಬೆಳಗಾವಿ: ಕೃಷಿ ಜಮೀನಿನಲ್ಲಿ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ನಡೆಸುತ್ತಿರುವುದನ್ನು ವಿರೋಧಿಸಿ ರೈತರು ದಿಢೀರ್ ಪ್ರತಿಭಟನೆ ನಡೆಸಿದರು. ತಾಲೂಕಿನ ಯಳ್ಳೂರ ಗ್ರಾಮದ ಹೊರವಲಯದಲ್ಲಿ ಸೇರಿದ ನೂರಾರು ರೈತರು ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ತಾಲೂಕಿನ ಹಲಗಾ, ಹಳೇ ಬೆಳಗಾವಿ, ಮಾಧವಪುರ, ವಡಗಾಂವ, ಶಹಪುರ, ಅನಗೋಳ, ಮಜಗಾಂವ, ಯಳ್ಳೂರ, ಮಚ್ಛೆ ಗ್ರಾಮದ ರೈತರು ರಸ್ತೆ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಹಲಗಾದಿಂದ ಮಚ್ಛೆ ಗ್ರಾಮದವರೆಗೆ 153 ಎಕರೆ ಕೃಷಿ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಕಳೆದ 2002ರಿಂದಲೂ ಅನೇಕ ಬಾರಿ ರೈತರು ಪ್ರತಿಭಟನೆ, ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದರೂ ಕಳೆದ 2019ರಿಂದ ಕಾಮಗಾರಿ ಪ್ರಾರಂಭಿಸಲಾಗಿದೆ‌.

ರೈತರ ಫಲವತ್ತಾದ ಜಮೀನಿನಲ್ಲಿ ಕೈಗೊಂಡಿರುವ ಹಲಗಾ-ಮಚ್ಛೆ ಬೈಪಾಸ್ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ರೈತರು ಆಗ್ರಹಿಸುತ್ತಾ ಬಂದಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ಇಂದು ಪ್ರತಿಭಟನೆ ನಡೆಸಿದರು. ಈ ವೇಳೆ, ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ‌ ನಡೆಯಿತು. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ರೈತರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು. ಈ ವೇಳೆ ಪೊಲೀಸರ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾರ್ಖಾನೆ ಬಾಗಿಲಿಗೆ ಮುಳ್ಳು ಹಾಕಿ, ಪೊರಕೆ ಹಿಡಿದು ರೈತರ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.